ಬಳ್ಳಾರಿ: ರಾಯಲ್ ಕಾಲೋನಿಯ ವಿಠಲ ಕೃಷ್ಣ ಮಂದಿರದಲ್ಲಿ ಪೇಜಾವರ ಮಠದ ಹಿರಿಯ ಯತಿವರ್ಯ ವಿಶ್ವೇಶ ತೀರ್ಥ ಶ್ರೀಪಾದಂಗಳವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ರಾಯಲ್ ಕಾಲೋನಿಯ ವಿಠಲ ಕೃಷ್ಣ ಮಂದಿರ ನಿರ್ಮಾಣಕ್ಕೆ ಪ್ರೇರಣೆಯಾಗಿದ್ದ ಶ್ರೀಪಾದಂಗಳವರು ಈ ದೇಗುಲದ ಉದ್ಘಾಟನೆಗೂ ಆಗಮಿಸಿದ್ದರು. ಅವರು ಮಾಡಿದ ಕಾರ್ಯ ಸ್ಮರಣೀಯ. ದಲಿತರು, ಹಿಂದುಳಿದವರು, ಬಡವರು ಶ್ರೀಮಂತರು ಎನ್ನುವ ಭೇದ ಭಾವ ಮಾಡದೇ ಎಲ್ಲರನ್ನೂ ಒಂದುಗೂಡಿಸುವ ಪ್ರಯತ್ನ ಮಾಡಿದ್ದರು. ಮಾದರಿ ಸಮಾಜ ನಿರ್ಮಾಣಕ್ಕೆ ಕೈ ಹಾಕಿದ್ದ ಶ್ರೀಗಳನ್ನು ದೇಶದ ಅತ್ಯುನ್ನತ ಸ್ಥಾನದಲ್ಲಿ ಇದ್ದವರು ಗೌರವಿಸುತ್ತಿದ್ದರು.
![pejawara](https://etvbharatimages.akamaized.net/etvbharat/prod-images/kn-bly-1-pejavar-sree-sradhanjali-ph-7203310_04012020095839_0401f_1578112119_932.jpg)
ಈ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡ ಪ್ರತಿಯೊಬ್ಬರು ಗುರುಗಳ ಜೊತೆಗೆ ಇರೋ ನಂಟು ಮತ್ತು ಅವರ ಸೇವೆಯನ್ನು ಸ್ಮರಿಸಿದರು. ಸೀತಾರಾಮಾಚಾರ್, ಪ್ರಕಾಶರಾವ್, ಜಿ.ವಿ.ಪಟವಾರಿ, ಕೃಷ್ಣಮೂರ್ತಿ, ರಾಘವೇಂದ್ರ, ರಘರಾಮ, ಚಿದಂಬರ್, ವಿನಾಯಕ, ಶೋಭಾ, ವಿದ್ಯಾ, ಕವಿತಾ, ವೇದಾ ಹಾಗೂ ಮಠದ ಭಕ್ತರು ಪಾಲ್ಗೊಂಡಿದ್ದರು.