ETV Bharat / state

ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ​ ಘಟಕಕ್ಕೆ ಕಲ್ಲಿದ್ದಲು ಪೂರೈಕೆ ಆರಂಭ - Bellary Thermal Power Station

1,700 ಮೆ.ವ್ಯಾ ಉತ್ಪಾದನಾ ಸಾಮರ್ಥ್ಯದ ಪೈಕಿ ಕೇವಲ ಒಂದು ಘಟಕ ಮಾತ್ರ ಕಾರ್ಯ ನಿರ್ವಹಣೆ ಮಾಡುತ್ತಿದೆ. ಮೂಲಗಳ ಪ್ರಕಾರ ಬಿಟಿಪಿಎಸ್​​ನಲ್ಲಿ 36 ಸಾವಿರ ಟನ್​ ಕಲ್ಲಿದ್ದಲು ಸಂಗ್ರಹವಿದೆ.

coal-supply-started-for-bellary-thermal-power-station
ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ​ ಘಟಕ
author img

By

Published : Oct 12, 2021, 12:55 PM IST

ಬಳ್ಳಾರಿ: ಸಮೀಪದ ಕುಡಿತಿನಿ ಬಿಟಿಪಿಎಸ್​​​​​​ಗೆ ಇಂದು ಕಲ್ಲಿದ್ದಲು ಪೂರೈಕೆ ಆರಂಭವಾಗಿದೆ. ಕಲ್ಲಿದ್ದಲು ತುಂಬಿದ್ದ ಮೂರು ರೈಲುಗಳಲ್ಲಿ ಬಿಟಿಪಿಎಸ್ (ಬಳ್ಳಾರಿ ಶಾಖೋತ್ಪನ್ನ ವಿದ್ಯುತ್ ಉತ್ಪಾದನಾ ಘಟಕ)​​ಗೆ ಪೂರೈಕೆಯಾಗುತ್ತಿದೆ.

ಕಲ್ಲಿದ್ದಲು ಪೂರೈಕೆವಾಗದಿದ್ದರೇ ಬಿಟಿಪಿಎಸ್ ಸಂಪೂರ್ಣ ಸ್ಥಗಿತವಾಗುವ ಸಾಧ್ಯತೆ ಇತ್ತು. ಒಂದು ದಿನಕ್ಕೆ 25 ಸಾವಿರ ಟನ್ ಕಲ್ಲಿದ್ದಲು ಬಿಟಿಪಿಎಸ್​​​ಗೆ ಅಗತ್ಯವಾಗಿದೆ.

ಒಟ್ಟು 1,700 ಮೆ.ವ್ಯಾ ಉತ್ಪಾದನಾ ಸಾಮರ್ಥ್ಯದ ಪೈಕಿ ಕೇವಲ ಒಂದು ಘಟಕ ಕಾರ್ಯ ನಿರ್ವಹಣೆ ಮಾಡುತ್ತಿದೆ. ಮೂಲಗಳ ಪ್ರಕಾರ ಬಿಟಿಪಿಎಸ್​​ನಲ್ಲಿ 36 ಸಾವಿರ ಟನ್​ ಕಲ್ಲಿದ್ದಲು ಸಂಗ್ರಹವಿದೆ.

ಕಲ್ಲಿದ್ದಲು ಸಂಗ್ರಹ ಹೆಚ್ಚಾಗುವವರೆಗೂ ಒಂದೇ ಘಟಕ ಕಾರ್ಯನಿರ್ವಹಿಸಲಿದ್ದು, ಸಂಗ್ರಹ ಹೆಚ್ಚಾದ ಬಳಿಕವಷ್ಟೇ ಮೂರು ಘಟಕಗಳು ಕಾರ್ಯಾರಂಭ ಮಾಡಲಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಮಕ್ಕಳು ನಾಪತ್ತೆ ಪ್ರಕರಣ: ಓರ್ವ ಯುವತಿ ಸೇರಿ ನಾಲ್ವರು ಮಂಗಳೂರಿನಲ್ಲಿ ಪತ್ತೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.