ETV Bharat / state

ಜನ ಬಲವೇ ಗೆಲುವು ಸಾಧಿಸಲಿದೆ: ಸಿಎಂ ಬೊಮ್ಮಾಯಿ ವಿಶ್ವಾಸ - ರೋಡ್ ಶೋ

ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಪರವಾಗಿ ಸಿಎಂ ಬೊಮ್ಮಾಯಿ ರೋಡ್ ಶೋ ನಡೆಸಿದರು.

CM Basavaraj Bommai road show in Bellary
ಬಳ್ಳಾರಿಯಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ
author img

By

Published : Apr 30, 2023, 7:36 AM IST

ಬಳ್ಳಾರಿ/ಹುಬ್ಬಳ್ಳಿ: ಜನಬಲ ಮತ್ತು ಹಣಬಲದ ನಡುವೆ ಚುನಾವಣೆ ನಡೆಯುತ್ತಿದೆ. ಯಾವಾಗಲೂ ಜನ ಬಲವೇ ಗೆದ್ದಿದೆ. ಈ ಬಾರಿಯೂ ಜನ ಬಲವೇ ಗೆಲುವು ಸಾಧಿಸಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು. ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸೋಮಶೇಖರ್ ರೆಡ್ಡಿ ಪರವಾಗಿ ಸಿಎಂ ಬೊಮ್ಮಾಯಿ ಶನಿವಾರ ರೋಡ್ ಶೋ ನಡೆಸಿದರು.

ರೋಡ್​ ಶೋ ನಗರದ ಗಡಗಿ ಚೆನ್ನಪ್ಪ ಸರ್ಕಲ್ ಮೂಲಕ ಬೆಂಗಳೂರು ರಸ್ತೆ, ಬ್ರೂಸ್ ಪೇಟೆ, ತೇರು ಬೀದಿ ತಲುಪಿತು. ತಮಟೆ, ಡೊಳ್ಳು ಮೊದಲಾದ ವಾದ್ಯಗಳೊಂದಿಗೆ ಬಿಜೆಪಿ ಬಾವುಟಗಳನ್ನು ಬೀಸುತ್ತ, ಪಕ್ಷದ ಪರ, ಅಭ್ಯರ್ಥಿ ಪರ ಜಯ ಘೋಷ ಕೂಗುತ್ತಾ ಕಾರ್ಯಕರ್ತರು ಸಾಗಿದರು. ಬಳಿಕ ಸಿಎಂ ಬಸವರಾಜ ಬೊಮ್ಮಾಯಿ ಬ್ರೂಸ್‌ಪೇಟೆ ಬಳಿ ತೆರೆದ ವಾಹನದಲ್ಲಿ ನಿಂತು ಸಾರ್ವಜನಿಕರನ್ನುದ್ದೇಶಿಸಿ ಮಾತನಾಡಿದರು. "ಮೀಸಲಾತಿಯ ಜೇನುಗೂಡಿಗೆ ಕೈ ಹಾಕಬೇಡಿ ಎಂದು ಕಾಂಗ್ರೆಸ್ ಹೇಳಿತ್ತು. ಆದರೆ ನಾನು ಉತ್ತರ ಕರ್ನಾಟಕದ ಗಂಡು. ಮೀಸಲಾತಿ ಎಂಬ ಜೇನುಗೂಡಿಗೆ ಕೈ ಹಾಕಿ ಸಿಹಿ ಹಂಚಿದ್ದೇನೆ. ಕಾಂಗ್ರೆಸ್ ತಮ್ಮ ಸರ್ಕಾರ ಬಂದರೆ ಮೀಸಲಾತಿ ಹಿಂದಕ್ಕೆ ಪಡೆಯುತ್ತೇವೆ ಎನ್ನುತ್ತಾರೆ. ಇದಕ್ಕೆ ಜನತೆ ಬುದ್ಧಿ ಕಲಿಸುತ್ತಾರೆ. ಸಾಮಾಜಿಕ ನ್ಯಾಯ ಮುಟ್ಟಿದರೆ ಜನರು ಸಹಿಸುವುದಿಲ್ಲ" ಎಂದರು.

ಬಳ್ಳಾರಿ ಅಭಿವೃದ್ಧಿಗೆ ಕಂಕಣ ಬದ್ಧ: ಜೀನ್ಸ್ ಕ್ಯಾಪಿಟಲ್ ಮಾಡ್ತೀನಿ ಎಂದು ರಾಹುಲ್ ಘೋಷಣೆ ಮಾಡಿದ್ದಾರೆ. ಅವರ ತಾಯಿ ಗೆದ್ದು ಘೋಷಣೆ ಮಾಡಿದ 3 ಸಾವಿರ ಕೋಟಿ ರೂ. ಏನಾಯ್ತು?. ಈಗಾಗಲೇ ಜೀನ್ಸ್ ಅಪರೆಲ್ ಪಾರ್ಕ್ ಮಾಡಲು ಬಜೆಟ್​​ನಲ್ಲಿ ಹಣ ಮೀಸಲಿಟ್ಟಿದ್ದೇವೆ. ನಿಮ್ಮ ಆಶ್ವಾಸನೆ ಅಗತ್ಯ ಇಲ್ಲ. ಸರ್ಕಾರ ಬಳ್ಳಾರಿ ಅಭಿವೃದ್ಧಿಗೆ ಕಂಕಣ ಬದ್ಧವಾಗಿದೆ. ಬಳ್ಳಾರಿ ನಗರದಲ್ಲಿ 16 ಸಾವಿರ ಜನರಿಗೆ ಪಟ್ಟ ಕೊಟ್ಟಿದೆ. ಈ ಚುನಾವಣೆಯಲ್ಲಿ ಕೆಲವರು ಗೆಲ್ಲಬೇಕೆಂದು ಸ್ಪರ್ಧಿಸಿದರೆ, ಇನ್ನು ಕೆಲವರು ಸೋಲಿಸಬೇಕೆಂದು ಸ್ಪರ್ಧಿಸಿದ್ದಾರೆ. ಗೆಲ್ಲುವವರಿಗೆ ಜನರ ಆಶೀರ್ವಾದ ಇರಲಿ. ಸೋಮಶೇಖರ್​ ರೆಡ್ಡಿ ಅವರಿಗೆ ಹನುಮಂತನ ಆಶೀರ್ವಾದವಿದೆ. ಅವರನ್ನು ಸೋಲಿಸಲು ಯಾರಿಂದಲೂ ಆಗಲ್ಲ. ಅವರು 'ಬಳ್ಳಾರಿ ಹುಲಿ' ಎಂದು ಸಿಎಂ ಬೊಮ್ಮಾಯಿ ಬಣ್ಣಿಸಿದರು. ಡಬಲ್ ಇಂಜಿನ್ ಸರ್ಕಾರದಿಂದ ಮಾತ್ರ ರಾಜ್ಯದ ಅಭಿವೃದ್ಧಿ ಸಾಧ್ಯ ಎಂದ ಬೊಮ್ಮಾಯಿ ಪಕ್ಷದ ಅಭಿವೃದ್ಧಿ ಕೆಲಸಗಳನ್ನು ವಿವರಿಸಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿಯನ್ನು ಆಶೀರ್ವದಿಸಿ ಎಂದು ಮನವಿ ಮಾಡಿದರು.

ಗದಗ ಭೇಟಿ-ವಿಶೇಷ ಅರ್ಥ ಇಲ್ಲ: ಮುಂಡರಗಿ ಮತ್ತು ಗದಗ ಭೇಟಿ ಬಗ್ಗೆ ಪ್ರತಿಕ್ರಿಯಿಸಿದ ಬೊಮ್ಮಾಯಿ, ನಾನು ಬೆಳಗ್ಗೆ ಪ್ರಧಾನಿ ಮೋದಿಯವರ ಕಾರ್ಯಕ್ರಮ ಮುಗಿಸಿ ಬೀದರ್​ನಿಂದ ಬಳ್ಳಾರಿಗೆ ಬಂದಿದ್ದೆ. ಬಳಿಕ ಅಲ್ಲಿಂದ ಹುಬ್ಬಳ್ಳಿಗೆ ಬಂದೆ. ಬರುವುದಕ್ಕಿಂತ ಮೊದಲು ಮುಂಡರಗಿ ಮತ್ತು ಗದಗದಲ್ಲಿ ಸ್ನೇಹಿತರನ್ನು ಭೇಟಿಯಾದೆ. ಇದಕ್ಕೇನೂ ವಿಶೇಷ ಅರ್ಥ ಇಲ್ಲ ಎಂದರು. ಗದಗ ಮತಕ್ಷೇತ್ರದ ಬಗ್ಗೆ ಹೈಕಮಾಂಡ್ ವಿಶೇಷ ಆಸಕ್ತಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ "ಕೇಂದ್ರ ನಾಯಕರು ಯಾರೂ ಈ ಬಗ್ಗೆ ನನಗೆ ಕೇಳಿಲ್ಲ. ರಾಜ್ಯದ ಸಿಎಂ ಆಗಿ 224 ಕ್ಷೇತ್ರಗಳ ಬಗ್ಗೆ ಅಷ್ಟೇ ಕಾಳಜಿ ಮಾಡುತ್ತೇನೆ. ಹಾಗೇ ಗದಗ ದಾರಿಯಲ್ಲಿ ಹೋಗುವಾಗ ಚುನಾವಣೆ ಪ್ರಚಾರ ಯಾವ ರೀತಿ ನಡೆಯುತ್ತಿದೆ?, ಮುಂದೆ ಏನು ಮಾಡಬೇಕು ಎಂಬುದರ ಬಗ್ಗೆ ಸಲಹೆ ನೀಡಲು ಬಂದಿದ್ದೇನೆ" ಎಂದು ಹೇಳಿದರು.

ಕಾಂಗ್ರೆಸ್ 5ನೇ ಗ್ಯಾರಂಟಿ ಬಿಡುಗಡೆ ವಿಚಾರವಾಗಿ ಮಾತನಾಡಿದ ಸಿಎಂ, 5 ಬಿಟ್ಟು 50 ಗ್ಯಾರಂಟಿ ಬಿಡುಗಡೆ ಮಾಡಲಿ. ಆದರೆ ಅವರು ಜನರ ವಿಶ್ವಾಸ ಕಳೆದುಕೊಂಡಿದ್ದಾರೆ. ಹೀಗಾಗಿ ಅವರ ಗ್ಯಾರಂಟಿ ಕೇವಲ ಮೇ 10ನೇ ತಾರೀಖಿನವರೆಗೆ ಮಾತ್ರ. ಬಿಜೆಪಿ ಭ್ರಷ್ಟಾಚಾರದಲ್ಲಿ ಮುಳುಗಿದೆ ಎಂಬ ಕಾಂಗ್ರೆಸ್ ನಾಯಕರ ಆರೋಪ ವಿಚಾರವಾಗಿ "ಅವರ ಮೇಲೆ‌ 60 ಕೇಸ್​ಗಳಿದ್ದವು. ಎಸಿಬಿಯಲ್ಲಿ‌ ಎಲ್ಲವನ್ನೂ ಮುಚ್ಚಿ ಹಾಕಿದರು. ವಾಪಸ್ ಲೋಕಾಯುಕ್ತಕ್ಕೆ ಕೊಟ್ಟಿದ್ದೇನೆ. ಸಿದ್ದರಾಮಯ್ಯ ಅವರ ಮೇಲೆಯೇ ಸರಿ ಸುಮಾರು 60 ಕೇಸ್ ಇದ್ದವು. ಯಾವುದನ್ನೂ ತನಿಖೆ ಮಾಡದೇ ಬಿ ರಿಪೋರ್ಟ್ ಕೊಟ್ಟು ಮುಚ್ಚಿ ಹಾಕಿದರು. ಅವರು ಎಸಿಬಿ ರಚನೆ ಮಾಡಿದ್ದೇ ಅವರ ಮೇಲಿನ ಕೇಸ್​​ಗಳನ್ನ ಮುಚ್ಚಿ ಹಾಕಲು. ಇದನ್ನ ನಾನು ಹೇಳ್ತಿಲ್ಲ. ನನ್ನ ಪ್ರಕಾರ ರಾಜ್ಯದ ಇತಿಹಾಸದಲ್ಲಿ ಲೋಕಾಯುಕ್ತವನ್ನ ಯಾರೂ ಕೂಡ ಮುಟ್ಟಿರಲಿಲ್ಲ. ಇವತ್ತು ಲೋಕಾಯುಕ್ತವನ್ನ ಅತ್ಯಂತ ದುರ್ಬಲಗೊಳಿಸಿರುವ ಕುಖ್ಯಾತಿ ಸಿದ್ಧರಾಮಯ್ಯ ಮತ್ತು ಅವರ ಸರ್ಕಾರಕ್ಕಿದೆ ಎಂದು ಸಿಎಂ ಬೊಮ್ಮಾಯಿ ದೂರಿದರು.

ಜಿ.ಪರಮೇಶ್ವರ್​ ಅವರ ಮೇಲೆ ಕಲ್ಲೆಸೆದಿದ್ದು ಬಿಜೆಪಿಯವರು ಎಂಬ ಆರೋಪ ವಿಚಾರವಾಗಿ "ಅದರ ಬಗ್ಗೆ ತನಿಖೆಯಾಗಲಿ. ಚುನಾವಣಾ ಆಯೋಗ ಈ ಬಗ್ಗೆ ತನಿಖೆ ಮಾಡುತ್ತದೆ. ತನಿಖೆ ಬಳಿಕ ಸತ್ಯಾಂಶ ಹೊರಬಂದು ತಪ್ಪಿತಸ್ಥ ವಿರುದ್ಧ ಶಿಕ್ಷೆಯಾಗಲಿದೆ" ಎಂದರು.

ಇದನ್ನೂ ಓದಿ: ಕಾಂಗ್ರೆಸಿಗರು ಜನರನ್ನು ಗುಲಾಮರಂತೆ ತಿಳಿದುಕೊಂಡಿದ್ದಾರೆ: ಸಿಎಂ ಬೊಮ್ಮಾಯಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.