ಬಳ್ಳಾರಿ: ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡಾದ ಬಡ ಹುಡುಗಿ ಎಲ್ ಚೈತ್ರ ದ್ವಿತೀಯ ಪಿಯುಸಿ ಪರೀಕ್ಷೆಯ ವಾಣಿಜ್ಯ ವಿಭಾಗದಲ್ಲಿ 541 ಅಂಕಗಳನ್ನು ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ.
ಕೊರೊನಾ ಆತಂಕದ ನಡುವೆ ರಾಜ್ಯ ಸರ್ಕಾರ ಪಿಯುಸಿ ವಿದ್ಯಾರ್ಥಿಗಳ ಪರೀಕ್ಷೆಯನ್ನು ಮುಗಿಸಿತ್ತು. ಇಂದು ರಾಜ್ಯದಲ್ಲಿ ಪಿಯುಸಿ ವಿದ್ಯಾರ್ಥಿಗಳ ಫಲಿತಾಂಶ ಹೊರಬಿದ್ದಿದ್ದು, ಗ್ರಾಮೀಣ ಭಾಗದ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಯಾವುದೇ ಟ್ಯೂಷನ್, ಕೊಚಿಂಗ್ ಇಲ್ಲದೇ ಹೊಸಪೇಟೆ ತಾಲೂಕಿನ ಸೀತಾರಾಮ್ ತಾಂಡಾದ ವಿದ್ಯಾರ್ಥಿನಿ ಎಲ್ ಚೈತ್ರ ವಾಣಿಜ್ಯ ವಿಭಾಗದಲ್ಲಿ 541 ಅಂಕಗಳನ್ನು ಪಡೆದು ಫಸ್ಟ್ ಕ್ಲಾಸ್‌ನಲ್ಲಿ ಉತ್ತೀರ್ಣರಾಗಿದ್ದಾಳೆ.
ಹೊಸಪೇಟೆ ತಾಲೂಕಿನ ಕಮಲಾಪುರದ ಸರ್ಕಾರಿ ಪ.ಪೂ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಚೈತ್ರಾ, ಸೀತಾರಾಮ್ ತಾಂಡಾದಿಂದ ಕಮಲಾಪುರಕ್ಕೆ ನಿತ್ಯ ಆಟೋ ಅಥವಾ ಬಸ್ ಮೂಲಕ ಹೋಗಿ ಬರುತ್ತಿದ್ದರು. ಸೀತಾರಾಮ್ ತಾಂಡದ ಕೂಲಿಕಾರರಾದ ಲಕ್ಷ್ಮಣ್ ನಾಯ್ಕ್ ಮತ್ತು ಭಾಗ್ಯಬಾಯಿಯ ಮೂರನೆಯ ಮಗಳಾದ ಚೈತ್ರ ಸದ್ಯ ಟೂಷನ್, ಕೊಚಿಂಗ್ ಇಲ್ಲದೇ ಉತ್ತಮ ಅಂಕಗಳನ್ನು ಪಡೆದು ಫಸ್ಟ್ ಕ್ಲಾಸ್ ಪಡೆದಿದ್ದಾರೆ.
ಇನ್ನೂ ಲಾಕ್‌ಡೌನ್ ನಂತರ ಇಂಗ್ಲಿಷ್ ಪರೀಕ್ಷೆಗೆ ಗ್ಯಾಪ್ ಕೊಡದೇ ಇದ್ದಿದ್ದರೆ ಮತ್ತಷ್ಟು ಅಂಕ ಗಳಿಸಬಹುದಾಗಿತ್ತು ಎಂದು ಹೇಳ್ತಾರೆ ವಿದ್ಯಾರ್ಥಿನಿ ಚೈತ್ರ.