ಬಳ್ಳಾರಿ: ನಗರದ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಆವರಣದಲ್ಲಿ ಎಬಿವಿಪಿ ವಿದ್ಯಾರ್ಥಿ ಸಂಘಟನೆಯು ವಿವಿ ಕುಲಪತಿ ಪ್ರೊ.ಎಂ.ಎಸ್ ಸುಭಾಷ್ ವಿರುದ್ಧ ಪ್ರತಿಭಟನೆ ನಡೆಸಿದರು.
ವಿವಿಯ ಸಿಂಡಿಕೇಟ್ ನೇಮಕ, ಬೋಧನೆ ಮತ್ತು ಬೋಧಕೇತರ ವಿಭಾಗದ ನೇಮಕಾತಿಯಲ್ಲಿ ಭ್ರಷ್ಟಾಚಾರ ನಡೆಸಿದ್ದಾರೆ ಎಂದು ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆ ವೇಳೆ ಮಾತನಾಡಿದ ಎಬಿವಿಪಿ ಕಾರ್ಯಕರ್ತ ಯುವರಾಜ್, ನಿವೃತ್ತಿಗೆ 15 ದಿನಗಳು ಬಾಕಿ ಇರುವ ಸಮಯದಲ್ಕಿಯೇ ಕುಲಪತಿಗಳು ಅಕ್ರಮವಾಗಿ ನೇಮಕಾತಿ ಮಾಡುತ್ತಿದ್ದಾರೆ . ಸಿಂಡಿಕೇಟ್ ಸದಸ್ಯರ ಸಭೆ ಕರೆದು ಆದೇಶ ನೀಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಖಾಕಿ ದರ್ಪ ಆರೋಪ:
ಪ್ರತಿಭಟನೆ ನಡೆಸುತ್ತಿದ್ದ ವೇಳೆ ಪೊಲೀಸ್ ಅಧಿಕಾರಿ ಮತ್ತು ಎಬಿವಿಪಿ ಕಾರ್ಯಕರ್ತರ ನಡುವೆ ವಾಗ್ವಾದ ನಡೆಯಿತು. ಪ್ರತಿಭಟನೆ ಮಾಡುತ್ತಿದ್ದ ಎಬಿವಿಪಿ ಕಾರ್ಯಕರ್ತರಾದ ಅಡವಿಸ್ವಾಮಿ, ಮಲ್ಲೇಶ್, ಯುವರಾಜ್ ಮೇಲೆ ಖಾಲಿ ದರ್ಪ ತೋರಿದ್ದಾರೆ ಎಂಬ ಆರೋಪ ಕೇಳಿಬಂದಿದೆ.