ETV Bharat / state

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯಕ್ಕೆ ದಶಕದ ಸಂಭ್ರಮ!

author img

By

Published : Jul 28, 2020, 4:26 PM IST

ಈಗಾಗಲೇ ಮುಂದಿನ 10 ವರ್ಷದಲ್ಲಿ ವಿವಿಯಲ್ಲಿ ಅಭಿವೃದ್ಧಿ ಹೇಗೆಲ್ಲ ಮಾಡಬೇಕೆಂದು ರೂಪರೇಷೆ ಸಿದ್ಧಪಡಿಸಿದ್ದಾರೆ. ತರಗತಿಗೆ ಪ್ರಾಶಸ್ತ್ಯ, ಉದ್ಯೋಗ ಅವಕಾಶ ಸೃಷ್ಠಿ ಹಾಗೂ ಸಂಶೋಧನೆಗೆ ಆದ್ಯತೆ. ಸ್ಥಳೀಯ ಮತ್ತು ಜಾಗತಿಕ ಅವಶ್ಯಕತೆಗಳ ಅನುಗುಣವಾಗಿ ವಿವಿಧ ಯೋಜನೆಗಳನ್ನು ಸಾಕಾರಗೊಳಿಸಲು ಚಿಂತನೆ..

Vijayanagara Sri Krishnadevaraya University
ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ

ಬಳ್ಳಾರಿ : ಸ್ನಾತಕೋತ್ತರ ಪದವಿ (ಪಿಜಿ) ಸೇರಿ ನಾನಾ ಕೋರ್ಸ್​​ಗಳ ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ದೂರದ ಕಲಬುರಗಿ, ಧಾರವಾಡದಂತಹ ಮಹಾನಗರಗಳಿಗೆ ವಲಸೆ ಹೋಗಬೇಕಾದ ಕಾಲವೊಂದಿತ್ತು. ಆ ಕಾಲಘಟ್ಟ ಬದಲಿಸುವ ಸಲುವಾಗಿಯೇ 2010 ಜುಲೈ27ರಂದು ಬಳ್ಳಾರಿ ನಗರದಲ್ಲಿ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯವೊಂದು ಉದಯವಾಯಿತು.

ನಾನಾ ಸಂಘಟನೆ, ವಿದ್ಯಾರ್ಥಿಗಳು ಬಳ್ಳಾರಿಯಲ್ಲಿಯೇ ವಿವಿ ಸ್ಥಾಪನೆಯಾಗಬೇಕೆಂಬ ಕೂಗು ಎಬ್ಬಿಸಿದ್ದರಿಂದ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ, ಇಂದಿನ ಆರೋಗ್ಯ ಸಚಿವ ಬಿ.ಶ್ರೀರಾಮುಲು, ಶಾಸಕ ಸೋಮಶೇಖರರೆಡ್ಡಿ ಸೇರಿ ಹಲವರ ಒತ್ತಾಯದ ಮೇರೆಗೆ ಅಂದಿನ ಸಿಎಂ ಆಗಿದ್ದ ಬಿಎಸ್‌ವೈ ಬಳ್ಳಾರಿ ವಿವಿ ಆರಂಭಕ್ಕೆ 2010ರಲ್ಲಿ ಅನುಮೋದಿಸಿದರು.

ಪ್ರಸ್ತುತ ವಿವಿ 95.37 ಎಕರೆ ವಿಸ್ತೀರ್ಣ ಹೊಂದಿದ್ದು, ನಂದಿಹಳ್ಳಿ, ಕೊಪ್ಪಳ, ಯಲಬುರ್ಗಾದಲ್ಲಿ ಸ್ನಾತಕೋತ್ತರ ಕೇಂದ್ರಗಳಿವೆ. 110 ಪದವಿ ಕಾಲೇಜುಗಳಿವೆ. 45 ಸಾವಿರ ಪದವಿ, 20 ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಅಭ್ಯಸಿಸುತ್ತಿದ್ದಾರೆ. 200 ವಿದ್ಯಾರ್ಥಿಗಳು ಪಿಹೆಚ್‌ಡಿ ಪಡೆದಿದ್ದಾರೆ. 2019ನೇ ಸಾಲಿನ 5-10ವರ್ಷದೊಳಗಿನ ಉತ್ತಮ ವಿವಿಗಳ ಪಟ್ಟಿಯಲ್ಲಿ 4 ಸ್ಟಾರ್ ಪಡೆದು ಉತ್ಕೃಷ್ಟತೆ ಸಾಬೀತುಪಡಿಸಿದೆ. ವಿವಿಗಳ ಧನಸಹಾಯಕ್ಕೆ ಯುಜಿಸಿಯಿಂದ 12-ಬಿ ರ‌್ಯಾಂಕ್ ಪಡೆದುಕೊಂಡಿದೆ. ನ್ಯಾಕ್ ಕಮಿಟಿಯಿಂದ ‘ಬಿ’ ಗ್ರೇಡ್ ಬಂದಿದೆ.

ಮೊದಲ ವಿಸಿಯಾಗಿ ಮಂಜಪ್ಪ ಹೊಸಮನಿ ಹೆಗಡೆ 5 ವರ್ಷ ಕಾರ್ಯನಿರ್ವಹಿಸಿದ ಬಳಿಕ ಪ್ರೊ.ಸುಭಾಷ್ 2015ರಲ್ಲಿ ಅಧಿಕಾರ ಸ್ವೀಕರಿದರು. ಅವರ ಬಳಿಕ ಬಂದ ಪ್ರೊ.ಸಿದ್ದು ಅಲಗೂರು 2019ರ ಅಗಸ್ಟ್‌ 2ರಂದು ಅಧಿಕಾರ ಸ್ವೀಕರಿಸಿದ್ದರು. ವಿವಿಯಲ್ಲಿ ಗಮನಾರ್ಹ ಬದಲಾವಣೆ ತರಲು ಪ್ರಯತ್ನಿಸುತ್ತಿದ್ದಾರೆ.

ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ

ಈಗಾಗಲೇ ಮುಂದಿನ 10 ವರ್ಷದಲ್ಲಿ ವಿವಿಯಲ್ಲಿ ಅಭಿವೃದ್ಧಿ ಹೇಗೆಲ್ಲ ಮಾಡಬೇಕೆಂದು ರೂಪರೇಷೆ ಸಿದ್ಧಪಡಿಸಿದ್ದಾರೆ. ತರಗತಿಗೆ ಪ್ರಾಶಸ್ತ್ಯ, ಉದ್ಯೋಗ ಅವಕಾಶ ಸೃಷ್ಠಿ ಹಾಗೂ ಸಂಶೋಧನೆಗೆ ಆದ್ಯತೆ. ಸ್ಥಳೀಯ ಮತ್ತು ಜಾಗತಿಕ ಅವಶ್ಯಕತೆಗಳ ಅನುಗುಣವಾಗಿ ವಿವಿಧ ಯೋಜನೆಗಳನ್ನು ಸಾಕಾರಗೊಳಿಸಲು ಚಿಂತಿಸಿದ್ದಾರೆ.

ಆರೋಪಗಳ ಸರಮಾಲೆ : ಅಂಕಪಟ್ಟಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ. ಸರ್ಟಿಫಿಕೇಟ್ ಕೋರ್ಸ್‌ಗಳ ಆಯ್ಕೆ ಮತ್ತು ಅವಕಾಶವಿಲ್ಲ. ಪಠ್ಯಕ್ರಮ ಎಷ್ಟರ ಮಟ್ಟಿಗೆ ಗುಣಮಟ್ಟದ್ದು? ಎಂಬುದರ ಕುರಿತು ಅಸೆಸ್​ಮೆಂಟ್ ಮಾಡಿಲ್ಲ. ಉಪನ್ಯಾಸಕರಿಗೆ ತರಬೇತಿ ಕೊರತೆಯಿದೆ. ಅಕಾಡೆಮಿಕ್ ಸ್ಟಾಫ್ ಕಾಲೇಜ್ ಇಲ್ಲ. ಸೂತ್ತೋಲೆಗಳು ಮಹಾವಿದ್ಯಾಲಯಗಳಿಗೆ ಸೂಕ್ತ ಸಮಯದಲ್ಲಿ ತಲುಪುವುದಿಲ್ಲ. ಸಿಬ್ಬಂದಿಗೆ ಆಡಳಿತಾತ್ಮಕ ಜ್ಞಾನದ ಕೊರತೆ ಎದ್ದು ಕಾಣುತ್ತಿದೆ. ಪ್ರಸಾರಾಂಗ ವಿಭಾಗಕ್ಕೆ ಹೆಚ್ಚಿನ ಒತ್ತು ನೀಡಬೇಕಿದೆ. ವಿವಿ ಮತ್ತು ಕಾಲೇಜುಗಳ ದತ್ತಾಂಶ ಶೇಖರಣೆ ಸುವ್ಯವಸ್ಥಿತವಾಗಿಲ್ಲ.

ನಂದಿಹಳ್ಳಿ ಪಿಜಿ ಸೆಂಟರ್‌ನ ವಿಭಾಗವೊಂದರಲ್ಲಿ ಇಂದಿಗೂ ಒಂದು ವಿದ್ಯಾರ್ಥಿ ಪ್ರವೇಶಾತಿ ಆಗಿಲ್ಲ. ಆದರೂ ಇಲ್ಲಿಯ 6-7 ಸಿಬ್ಬಂದಿಗೆ ಸರ್ಕಾರದಿಂದ ವೇತನ ಪಾವತಿಯಾಗುತ್ತಿದೆ. ಶೈಕ್ಷಣಿಕ ವೇಳಾಪಟ್ಟಿ ಬಹಳಷ್ಟು ಅವೈಜ್ಞಾನಿಕವಾಗಿದೆ. ಉನ್ನತ ಮಟ್ಟದ ಮೂಲಸೌಕರ್ಯಗಳ ಕೊರತೆಯಿದೆ. ನಿಯಮ ಉಲ್ಲಂಘಿಸಿದ ಕಾಲೇಜು ಮತ್ತು ಸಿಬ್ಬಂದಿ ಮೇಲೆ ಕಾನೂನು ರೀತಿಯ ಕ್ರಮವಿಲ್ಲ. ಬಿಇಡಿ ಆಂತರಿಕ ಅಂಕಗಳ ನೀಡಿಕೆ ನಿಯಮ ಅವೈಜ್ಞಾನಿಕವಾಗಿದೆ. ಜಾತಿ ಪದ್ಧತಿ, ವಿದ್ಯಾರ್ಥಿಗಳು ಶೈಕ್ಷಣಿಕ ದೌರ್ಜನ್ಯಕ್ಕೆ ಒಳಗಾಗುತ್ತಿರುವ ಆರೋಪವಿದೆ.

ಪ್ರಾರ್ಚಾಯರ ಸಭೆ ವರ್ಷದಲ್ಲಿ ಎರಡು ವೇಳೆ ಮಾಡಬೇಕೆಂದಿದ್ದರೂ ನಿಯಮಿತವಾಗಿ ಹಮ್ಮಿಕೊಂಡಿಲ್ಲ. ಉಭಯ ವಿಭಾಗಗಳ ಕುಲಸಚಿವರು ತೆಗೆದುಕೊಳ್ಳುವ ನಿರ್ಣಯಗಳಲ್ಲಿ ದಕ್ಷತೆ ಮತ್ತು ಸ್ವಾತಂತ್ರ್ಯದ ಕೊರತೆ ಎದ್ದು ಕಾಣುತ್ತಿದೆ. ಸಿಂಡಿಕೇಟ್ ಸದಸ್ಯರ ವಿಶ್ವಾಸಕ್ಕೆ ತೆಗೆದುಕೊಳ್ಳದಿರುವ ಹಾಗೂ ಖಾಸಗಿ ಕಾಲೇಜುಗಳ ಸುಧಾರಣೆಗೆ ಕ್ರಮ ತೆಗೆದುಕೊಳ್ಳುವ ಬದಲು ಭಯಹುಟ್ಟಿಸುತ್ತಿರುವ ಆರೋಪವಿದೆ. ವಿವಿಯ ಅಧಿಕಾರಿಗಳ ಆಂತರಿಕ ತಿಕ್ಕಾಟ ಮತ್ತು ದ್ವೇಷಪೂರಿತ ಆಡಳಿತವು ಚಾಲ್ತಿಯಲ್ಲಿದೆ. ಇಂತಹ ಸಮಸ್ಯೆಗಳಿಗೆ ಮುಕ್ತಿ ದೊರೆಯಲಿದೆಯೇ ಎಂಬುದನ್ನು ಕಾದುನೋಡಬೇಕಿದೆ.

‘ಮಾದರಿ ವಿಶ್ವವಿದ್ಯಾಲಯ ಮಾಡುವೆ’: ನನಗೆ ವ್ಯಕ್ತಿಗಿಂತ ವಿವಿ ಮುಖ್ಯ. ಹೀಗಾಗಿ, ವಿಎಸ್‌ಕೆವಿವಿಯನ್ನು ಪ್ರಪಂಚದಲ್ಲೇ ಮಾದರಿ ವಿವಿಯನ್ನಾಗಿ ಮಾಡಬೇಕೆಂಬ ಕನಸು ಕಂಡಿದ್ದೇನೆ. ಈ ದಿಸೆಯಲ್ಲಿ ಮುಂದಿನ 10ವರ್ಷದೊಳಗೆ ಏನೆಲ್ಲ ಮಾಡಬೇಕೆಂಬ ರೂಪರೇಷೆ ಸಿದ್ಧಪಡಿಸುತ್ತಿದ್ದೇವೆ. ಮಾದರಿ ವಿವಿ ಮಾಡುವುದಕ್ಕೆ ಪ್ರಾಮಾಣಿಕವಾಗಿ ಪ್ರಯತ್ನಿಸುವೆ ಎಂದು ಕುಲಪತಿ ಪ್ರೊ.ಸಿದ್ದು ಅಲಗೂರು ತಿಳಿಸಿದ್ದಾರೆ.

ಉನ್ನತ ಶಿಕ್ಷಣದ ಆಶದಯದಂತೆ ವಿದ್ಯಾರ್ಥಿಗಳ ಜೀವನದ ಅಭ್ಯುದಯಕ್ಕಾಗಿ ಕೆಲಸ ಮಾಡುತ್ತಿದ್ದೇವೆ. ಇನ್ಮುಂದೆ ಅವರ ಉದ್ಯಮಶೀಲತೆ ಹೆಚ್ಚಿಸುವುದು ಹಾಗೂ ಜೀವನದ ಗುಣಮಟ್ಟ ಸುಧಾರಣೆ ಮಾಡುವ ನಿಟ್ಟಿನಲ್ಲಿ ಪ್ರಯತ್ನ ಸಾಗಲಿದೆ. ಅದು ಈಡೇರುವ ವಿಶ್ವಾಸ ನನಗಿದೆ ಎಂದು ಆಡಳಿತ ವಿಭಾಗದ ಕುಲಸಚಿವೆ ಪ್ರೊ.ಕೆ ತುಳಸಿಮಾಲಾ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.