ETV Bharat / state

ನಕಲಿ ವೈದ್ಯನ ಬಂಧನಕ್ಕೆ ಅಡ್ಡಿ: ಸಂಡೂರಲ್ಲಿ 23 ಮಂದಿ ವಿರುದ್ಧ ಪ್ರಕರಣ - ನಕಲಿ ವೈದ್ಯ

ನಕಲಿ ವೈದ್ಯ ಜಾಫರ್ ವಲಿ ಮೂಲತಃ ಕರ್ನೂಲು ಜಿಲ್ಲೆಯವರಾಗಿದ್ದು, ಅಂಕನಾಳ ಗ್ರಾಮದಲ್ಲಿ ಸಣ್ಣದಾದ ಕ್ಲಿನಿಕ್ ಇಟ್ಟುಕೊಂಡು ನಿಜವಾದ ವೈದ್ಯನೆಂದು ಜನರನ್ನು ನಂಬಿಸಿ ಚಿಕಿತ್ಸೆ ನೀಡುತ್ತಿದ್ದ. ಈ ಹಿಂದೆಯೂ ಅವನ ಮೇಲೆ ನಕಲಿ ವೈದ್ಯ ವೃತ್ತಿಯ ಮೇಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು..

case filed against 23 people who interrupted to arrest fake doctor

author img

By

Published : May 5, 2021, 6:43 PM IST

Updated : May 5, 2021, 8:16 PM IST

ಬಳ್ಳಾರಿ : ಗಣಿನಾಡು ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಅಂಕಮನಾಳ್ ಗ್ರಾಮದಲ್ಲಿ ಯಾವುದೇ ವೈದ್ಯಕೀಯ ವಿದ್ಯಾರ್ಹತೆ ಇಲ್ಲದೇ ವೈದ್ಯ ವೃತ್ತಿ ನಡೆಸುತ್ತಿದ್ದಾರೆ ಎಂಬ ದೂರಿನ ಆಧಾರದ ಮೇರೆಗೆ ಸಂಡೂರು ತಹಶೀಲ್ದಾರ್ ಹೆಚ್.ಜೆ.ರಶ್ಮಿ ನೇತೃತ್ವದ ಅಧಿಕಾರಿಗಳ ತಂಡ ದಾಳಿ ನಡೆಸಿದೆ.

ನಕಲಿ ವೈದ್ಯ ಜಾಫರ್ ವಲಿಯನ್ನ ಎಂಬಾತನನ್ನ ಬಂಧಿಸಿ ಕರೆದೊಯ್ಯಲು ಯತ್ನಿಸಿದ ವೇಳೆ ಅಡ್ಡಿಪಡಿಸಿದ ಗ್ರಾಮದ 23 ಮಂದಿ ಮೇಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧಿಸಲಾಗಿದ್ದ ನಕಲಿ ವೈದ್ಯ ಜಾಫರ್ ವಲಿ ತಪ್ಪಿಸಿಕೊಂಡು ಓಡಿ ಹೋಗಲು ಗ್ರಾಮದ 23 ಮಂದಿ ಅನುವು ಮಾಡಿಕೊಟ್ಟಿದ್ದಾರೆ.

ಈ ಹಿನ್ನಲೆಯಲ್ಲಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಉಮೇಶ ಮುರಾರಿಪುರ ನರಸಪ್ಪ, ಹೊನ್ನೂರಸ್ವಾಮಿ ಜರ್ಮಲಿ ಪರಸಪ್ಪ, ಮಂಜು ಗೋನಾಳ ಈರಪ್ಪ, ಅಂಜಿನಪ್ಪ ಬಂಡ್ರಿ ಓಬಯ್ಯ, ತಿಪ್ಪೆಸ್ವಾಮಿ, ನೂರ್ ಬಾಷಾಸಾಬ್, ಪರಸಪ್ಪ ನಾಗಪ್ಪ, ಭರಮಪ್ಪ ಜರ್ಮಲಿ ಮಾರೆಪ್ಪ, ಅಂಜಿನಪ್ಪ, ಜಿ.ಗೋವಿಂದಪ್ಪ, ಶಿವಣ್ಣ, ಮಂಜು ಅಗಸರ ದುರಗಪ್ಪ, ರಮೇಶ ಬಂಡ್ರಿ ಕುಮಾರಪ್ಪ, ಕುಮಾರಪ್ಪ ಸಣ್ಣಚನ್ನಪ್ಪ, ಬಂಡ್ರಿ ಮಾರೇಶ, ಸುರೇಶ ಗೋನಾಳ ರಾಜಪ್ಪ, ಬಂಡ್ರಿ ಕೊಟ್ರೇಶ, ಅರ್ಜುನ ಭರಮಪ್ಪ, ಮಾರೇಶ, ಓಬಮ್ಮ ಮುರಾರಿಪುರ ಮುದ್ದಯ್ಯ, ಪಾಪಮ್ಮ ಬಂಡ್ರಿ ಕುಮಾರಪ್ಪ, ಹನುಮಕ್ಕ ಗೋನಾಳ ಈರಪ್ಪ,ಕುಮಾರಪ್ಪ ಸಣ್ಣ ಚನ್ನಪ್ಪ ಅವರ ಮೇಲೆ 353, 341, 143, 147, 420, 269 ಐಪಿಸಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ತಹಶೀಲ್ದಾರ್ ರಶ್ಮಿ ತಿಳಿಸಿದ್ದಾರೆ.

ನಕಲಿ ವೈದ್ಯನ ಬಂಧನಕ್ಕೆ ಅಡ್ಡಿ

ತಹಶೀಲ್ದಾರ್ ರಶ್ಮಿ ಹಾಗೂ ಸಂಡೂರು ಸರಕಾರಿ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಚಂದ್ರಪ್ಪ, ಗ್ರಾಮಲೆಕ್ಕಾಧಿಕಾರಿಗಳಾದ ಸುಬ್ರಮಣ್ಯ ಮಾಳಗಿ, ರಮೇಶ, ವಿ.ಎಚ್.ಅನಂತರಾಜ ನೇತೃತ್ವದಲ್ಲಿ ದಾಳಿ ನಡೆಸಿದಾಗ ಜಾಫರ್ ವಲಿ ವೈದ್ಯ ವೃತ್ತಿ ನಡೆಸಲು ಯಾವುದೇ ಪರವಾನಿಗೆ ಪಡೆದಿರುವುದಿಲ್ಲ ಮತ್ತು ವೈದ್ಯಕೀಯ ವೃತ್ತಿಗೆ ಸಂಬಂಧಿಸಿದಂತೆ ಯಾವುದೇ ಪ್ರಮಾಣ ಪತ್ರಗಳು ಇರಲಿಲ್ಲ ಎಂದು ತಿಳಿದುಬಂದಿದೆ.

ನಕಲಿ ವೈದ್ಯ ಜಾಫರ್ ವಲಿ ಮೂಲತಃ ಕರ್ನೂಲು ಜಿಲ್ಲೆಯವರಾಗಿದ್ದು, ಅಂಕನಾಳ ಗ್ರಾಮದಲ್ಲಿ ಸಣ್ಣದಾದ ಕ್ಲಿನಿಕ್ ಇಟ್ಟುಕೊಂಡು ನಿಜವಾದ ವೈದ್ಯನೆಂದು ಜನರನ್ನು ನಂಬಿಸಿ ಚಿಕಿತ್ಸೆ ನೀಡುತ್ತಿದ್ದ. ಈ ಹಿಂದೆಯೂ ಅವನ ಮೇಲೆ ನಕಲಿ ವೈದ್ಯ ವೃತ್ತಿಯ ಮೇಲೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಆದರೂ ಮತ್ತೆ ಇದೇ ವೃತ್ತಿ ಮುಂದುವರಿಸಿದ್ದ ಎಂದು ತಹಶೀಲ್ದಾರ್ ರಶ್ಮಿ ತಿಳಿಸಿದ್ದಾರೆ. ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಅಧಿನಿಯಮಗಳ ಕಾಯ್ದೆ ಹಾಗೂ ನಿಯಮ 2007 ಮತ್ತು 2009 ಮತ್ತು ಕಲಂ 143, 147, 269, 341, 353, 420 ಮತ್ತು 149 ಅನುಸಾರ ಜಾಫರ್ ವಲಿ ಮೇಲೆ ಪ್ರಕರಣ ದಾಖಲಿಸಲಾಗಿದೆ. ಕ್ಲಿನಿಕ್ ಜಪ್ತಿ ಮಾಡಿಕೊಂಡು 10 ಸಾವಿರ ಔಷಧಿಗಳನ್ನ ವಶಪಡಿಸಿಕೊಳ್ಳಲಾಗಿದೆಂದು

Last Updated : May 5, 2021, 8:16 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.