ಬಳ್ಳಾರಿ: ತಾಲೂಕಿನ ಮೋಕಾ ಹೋಬಳಿ ವ್ಯಾಪ್ತಿಯ ಹಗರಿ ನದಿ ಮೇಲ್ಸೆತುವೆ ಮಾರ್ಗವಾಗಿ ಸಂಚರಿಸುತ್ತಿದ್ದ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಬೈಕ್ ಸವಾರನೋರ್ವ ಮೃತಪಟ್ಟಿದ್ದಾನೆ.
ನೆರೆಯ ಆಂಧ್ರ ಪ್ರದೇಶದ ರಾಜ್ಯದ ಗಡಿ ಗ್ರಾಮವಾದ ಬೊಮ್ಮನಹಾಳ್ ಗ್ರಾಮದ ತಿಪ್ಪೇರುದ್ರ (20) ಎಂಬಾತ ಸ್ಥಳದಲ್ಲೇ ಸಾವನ್ನಪ್ಪಿದ ಯುವಕನೆಂದು ಗುರುತಿಸಲಾಗಿದೆ.
ಓದಿ: ಫೆ.14ರಂದು ಪ್ರೇಮಿಗಳ ದಿನಾಚರಣೆ: ಬಜರಂಗದಳ ವಾರ್ನಿಂಗ್ ಬೆನ್ನಿಗೆ ಪೊಲೀಸರ ಕ್ರಮ
ಬೊಮ್ಮನಹಾಳ್ ಗ್ರಾಮದಿಂದ ಬಳ್ಳಾರಿಯ ಕಡೆಗೆ ಕೆಲಸದ ನಿಮಿತ್ತ ಬೈಕ್ನಲ್ಲಿ ಬರುತ್ತಿದ್ದ ಯುವಕ ತಿಪ್ಪೇರುದ್ರ, ಮೇಲ್ಸೆತುವೆ ಬಳಿ ಬರುತ್ತಿದ್ದಂತೆಯೇ ಎದುರುಗಡೆಯಿಂದ ಬಂದಂತಹ ಕಾರೊಂದು ಬೈಕ್ಗೆ ಡಿಕ್ಕಿ ಹೊಡೆದಿದೆ. ಈ ಕುರಿತು ಮೋಕಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.