ಬಳ್ಳಾರಿ: ರಾಜ್ಯದ 15 ವಿಧಾನಸಭಾ ಕ್ಷೇತ್ರಗಳಲ್ಲಿ ಎದುರಾದ ಈ ಉಪಚುನಾವಣೆಯನ್ನು ಆಯೋಗ್ಯ (ಅನರ್ಹ) ಶಾಸಕರು ವಾಮಮಾರ್ಗದಿಂದ ಎದುರಿಸಲು ಹೊರಟಿದ್ದಾರೆ ಎಂದು ವಿಜಯನಗರ ಕ್ಷೇತ್ರದ ಉಪಚುನಾವಣೆಯ ಉಸ್ತುವಾರಿ ಬಸವರಾಜ ರಾಯರೆಡ್ಡಿ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆನಂದಸಿಂಗ್ ಡಿಸೆಂಬರ್ 1ರಂದು ಅವರ ಪುತ್ರನ ವಿವಾಹವನ್ನ ಅದ್ಧೂರಿಯಾಗಿ ಮಾಡಲು ಹೊರಟಿದ್ದಾರೆ. ಅದು ನೀತಿ ಸಂಹಿತೆ ಉಲ್ಲಂಘನೆಯಾಗುತ್ತದೆ. ಈ ಬಗ್ಗೆ ಕಾಂಗ್ರೆಸ್ ಪಕ್ಷ ಚುನಾವಣಾ ಆಯೋಗಕ್ಕೆ ದೂರು ನೀಡಿದೆ ಎಂದು ತಿಳಿಸಿದರು.
ಅವರ ಪುತ್ರನ ವಿವಾಹದ ನೆಪದಲ್ಲಿ ಸರಿಸುಮಾರು ಎರಡು ಕೋಟಿ ರೂ.ಗಳ ಹಣವನ್ನ ಭೋಜನ ಕೂಟಕ್ಕೆ ಖರ್ಚು ಮಾಡುತ್ತಿದ್ದಾರೆ. 2.6 ಮತದಾರರಿಗೆ ಅಂದಾಜು 8 ಗ್ರಾಂನ 51 ಸಾವಿರ ಗೋಲ್ಡ್ ಕಾಯಿನ್ ಹಂಚಲು ಮುಂದಾಗಿದ್ದಾರೆ ಎಂದು ಆರೋಪಿಸಿದರು.