ETV Bharat / state

ಉದ್ಯಮಿ ಜಗದೀಶ ಎಸ್.ಗುಡಗುಂಟಿ, ನೇತ್ರ ತಜ್ಞ ಡಾ.ಕೆ.ಕೃಷ್ಣಪ್ರಸಾದ್‌ 'ನಾಡೋಜ' ಗೌರವ

ಹೊನ್ನವಾಡ ಗ್ರಾಮದ ಉದ್ಯಮಿ ಜಗದೀಶ ಎಸ್.ಗುಡಗುಂಟಿ ಹಾಗೂ ಉಡುಪಿಯ ನೇತ್ರ ತಜ್ಞ ಡಾ.ಕೆ. ಕೃಷ್ಣಪ್ರಸಾದ್‌ ಅವರನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯದ ನೀಡುವ ನಾಡೋಜ ಗೌರವ ಪದವಿಗೆ ಆಯ್ಕೆ ಮಾಡಲಾಗಿದೆ.

Nadoja honorary
ನಾಡೋಜ ಗೌರವ ಪದವಿ
author img

By

Published : Apr 7, 2021, 7:44 AM IST

ಹೊಸಪೇಟೆ: ಹಂಪಿ ಕನ್ನಡ ವಿಶ್ವವಿದ್ಯಾಲಯದ ನೀಡುವ ನಾಡೋಜ ಗೌರವ ಪದವಿಗೆ ವಿಜಯಪುರ ಜಿಲ್ಲೆ ಹೊನ್ನವಾಡ ಗ್ರಾಮದ ಉದ್ಯಮಿ ಜಗದೀಶ ಎಸ್.ಗುಡಗುಂಟಿ ಹಾಗೂ ಉಡುಪಿಯ ನೇತ್ರ ತಜ್ಞ ಡಾ.ಕೆ. ಕೃಷ್ಣಪ್ರಸಾದ್‌ ಅವರನ್ನು ಆಯ್ಕೆ ಮಾಡಲಾಗಿದೆ.

ಕನ್ನಡ ವಿವಿಯಲ್ಲಿ ಬಯಲು ರಂಗಮಂದಿರದಲ್ಲಿ 29ನೇ ನುಡಿಹಬ್ಬ ಏ. 9ರಂದು ಸಂಜೆ 5.30ಕ್ಕೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರಾಜ್ಯಪಾಲ ವಜುಭಾಯಿ ವಾಲಾ ಅವರು ನಾಡೋಜ ಗೌರವ ಪ್ರದಾನ ಮಾಡಲಿದ್ದಾರೆ. ಉಪಮುಖ್ಯಮಂತ್ರಿ ಡಾ.ಸಿ.ಎನ್‌. ಅಶ್ವತ್ಥನಾರಾಯಣ ಅವರು ಹತ್ತು ಜನರಿಗೆ ಡಿ.ಲಿಟ್‌ ಪದವಿ ಸೇರಿದಂತೆ ಎಂ.ಎ. ಪಿಎಚ್‌.ಡಿ., ಡಿಪ್ಲೋಮಾ ಕೋರ್ಸ್‌ ಮುಗಿಸಿರುವ ಒಟ್ಟು 365 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಿದ್ದಾರೆ.

ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಪದ್ಮಾ ಶೇಖರ್ ಘಟಿಕೋತ್ಸವ ಭಾಷಣ ಮಾಡುವರು ಎಂದು ಕನ್ನಡ ವಿವಿಯ ಕುಲಪತಿ ಡಾ. ಸ.ಚಿ.ರಮೇಶ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.