ETV Bharat / state

ಹೊಸಪೇಟೆ: ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಕಂಡಕ್ಟರ್

ಎನ್​​​ಈಕೆಎಸ್​ಆರ್​​ಟಿಸಿ ಸಿಬ್ಬಂದಿ ನಡುವಿನ ಗಲಾಟೆ ತಾರಕಕ್ಕೇರಿ ಕಂಡಕ್ಟರ್ ವಿಷ ಸೇವಿಸಿ ಇದೀಗ ಆಸ್ಪತ್ರೆ ಸೇರಿದ್ದಾರೆ.

Bus conductor attempt to take a poison before authorities
ಆತ್ಮಹತ್ಯೆಗೆ ಯತ್ನಿಸಿದ ಕಂಡಕ್ಟರ್
author img

By

Published : Jul 29, 2021, 7:12 PM IST

ಹೊಸಪೇಟೆ (ವಿಜಯನಗರ): ನಗರ ಬಸ್ ನಿಲ್ದಾಣದಲ್ಲಿ ಎನ್​​​ಈಕೆಎಸ್​ಆರ್​​ಟಿಸಿ ಕಂಡಕ್ಟರ್ ಒಬ್ಬರು ಅಧಿಕಾರಿಗಳ ಮುಂದೆಯೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಹೊಸಪೇಟೆ ಘಟಕದ ಕುತ್ತುಬುದ್ದೀನ್ ಎನ್ನುವವರು ಪೆನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳ್ಳಾರಿಯಿಂದ ಪಾಸರ್ಲ್ ತರುವ ವಿಷಯವಾಗಿ ಬಳ್ಳಾರಿಯ ಕಾರ್ಗೊ ಸಿಬ್ಬಂದಿ ಮತ್ತು ಕಂಡಕ್ಟರ್ ನಡುವೆ ವಾದ-ವಿವಾದ ನಡೆದಿದೆ. ಆಗ ಕಾರ್ಗೊ ಸಿಬ್ಬಂದಿ ಜಗಳದ ಆಡಿಯೋ ರೆಕಾರ್ಡ್ ಮಾಡಿ ಹೊಸಪೇಟೆಯ ಡಿಟಿಒ ಅಧಿಕಾರಿಗೆ ನೀಡಿದ್ದಾರೆ.

ಅಧಿಕಾರಿಗಳು ಕುತ್ತುಬುದ್ದೀನ್​​​ ಕರೆಯಿಸಿ ಘಟನೆ ಕುರಿತು ವಿಚಾರಣೆ ನಡೆಸಿದ್ದಾರೆ. ಇದೇ ವೇಳೆ ಜೇಬಿನಲ್ಲಿದ್ದ ಬಾಟಲಿ ತೆಗೆದು‌ ಪೆನಾಯಿಲ್‌ ಸೇವಿಸಿ, ಬಳಿಕ ಸ್ಥಳದಿಂದ ಓಡಿಹೋಗಿದ್ದಾನೆ. ಬಳಿಕ ಆತನ ಬೆನ್ನಟ್ಟಿ ಹಿಡಿದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕಂಡಕ್ಟರ್ ಪ್ರಾಣಾಪಾಯದಿಂದ ಪಾರಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎನ್​​​​ಈಕೆಎಸ್​​​ಆರ್​​ಟಿಸಿ ಹೊಸಪೇಟೆ ವಿಭಾಗದ ಜಿ.ಶೀನಯ್ಯ ಈಟಿವಿ ಭಾರತಕ್ಕೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿ: ಪ್ರಿಯತಮನೊಂದಿಗೆ ಸೇರಿ ಪತಿಯ ಕುತ್ತಿಗೆ ಹಿಸುಕಿ ಕೊಂದ ಪತ್ನಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.