ETV Bharat / state

ಬ್ರಿಟನ್​ನಿಂದ ಬಳ್ಳಾರಿಗೆ ಬಂದ ವ್ಯಕ್ತಿ ನಾಪತ್ತೆ

Britain return man absconding, Britain return man absconding in Bellary, new Corona wave, new corona wave news, ಬ್ರಿಟನ್​ನಿಂದ ಬಂದಿರುವ ವ್ಯಕ್ತಿ ನಾಪತ್ತೆ, ಬಳ್ಳಾರಿಯಲ್ಲಿ ಬ್ರಿಟನ್​ನಿಂದ ಬಂದಿರುವ ವ್ಯಕ್ತಿ ನಾಪತ್ತೆ, ಕೊರೊನಾ ರೂಪಾಂತರ ಅಲೆ, ಕೊರೊನಾ ರೂಪಾಂತರ ಅಲೆ ಸುದ್ದಿ,
ಗಣಿಜಿಲ್ಲೆಯಲ್ಲಿ ಶುರುವಾದ ಕೊರೊನಾ ರೂಪಾಂತರದ ಆತಂಕ
author img

By

Published : Dec 24, 2020, 11:11 AM IST

Updated : Dec 24, 2020, 12:27 PM IST

11:05 December 24

ಗಣಿಜಿಲ್ಲೆಯಲ್ಲಿ ಕೊರೊನಾ ರೂಪಾಂತರದ ಆತಂಕ ಶುರುವಾಗಿದೆ. ಬ್ರಿಟನ್​ನಿಂದ ಬಂದವರಲ್ಲಿ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಬಳ್ಳಾರಿ: ಬ್ರಿಟನ್​ನಿಂದ ಆಗಮಿಸಿದ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವುದರಿಂದ ಜಿಲ್ಲೆಯಲ್ಲಿ ಕೊರೊನಾತಂಕ ಹೆಚ್ಚಾಗಿದೆ. 

ಕಳೆದ ಎರಡು ದಿನಗಳ ಹಿಂದಷ್ಟೇ ವಿದೇಶದಿಂದ ಆಗಮಿಸಿದ ಜನರ ಗಂಟಲು ದ್ರವ ಸಂಗ್ರಹಣೆಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ಧರಿಸಿತ್ತು. ಈ ವೇಳೆ, ಬ್ರಿಟನ್​ನಿಂದ ಬಂದಿರುವ 15 ಮಂದಿಯ ಪೈಕಿ ವ್ಯಕ್ತಿಯೊಬ್ಬ ನಾಪತ್ತೆಯಾಗಿರುವುದು ಗೊತ್ತಾಗಿದೆ.

ಬ್ರಿಟನ್​ನಿಂದ ಬಂದಿರುವ ಆ ವ್ಯಕ್ತಿಗಾಗಿ ಕಳೆದ ಎರಡು ದಿನಗಳಿಂದ ಬಳ್ಳಾರಿ ಜಿಲ್ಲಾಡಳಿತ ಹುಡುಕಾಟ‌ ನಡೆಸುತ್ತಿದೆ. ಆದ್ರೆ ಆ ವ್ಯಕ್ತಿ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. 

ಈಗಾಗಲೇ ಬ್ರಿಟನ್‌ನಿಂದ ಆಗಮಿಸಿದ 14 ಮಂದಿಯನ್ನು ಪತ್ತೆ ಹಚ್ಚಿ ಹೋಂ‌ ಕ್ವಾರಂಟೈನ್ ಮಾಡಲಾಗಿದೆ. ನಾಪತ್ತೆಯಾಗಿರುವ ವ್ಯಕ್ತಿಯನ್ನು ಶೀಘ್ರೇ ಪತ್ತೆ ಹಚ್ಚುವ ಭರವಸೆ ಇದೆಯೆಂದು ಡಿಹೆಚ್ಒ ಡಾ. ಎಚ್‌‌.ಎಲ್. ಜನಾರ್ದನ ತಿಳಿಸಿದ್ದಾರೆ.

Last Updated : Dec 24, 2020, 12:27 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.