ETV Bharat / state

ಕಸ ವಿಲೇವಾರಿ ಘಟಕದ ಗೇಟು ಕಳಚಿ ಬಿದ್ದು ಬಾಲಕ ಸಾವು: ಅಧಿಕಾರಿಗಳ ವಿರುದ್ಧ ಪೋಷಕರ ದೂರು - ಈಟಿವಿ ಭಾರತ​ ಕರ್ನಾಟಕ

ಆಟವಾಡುತ್ತಿದ್ದ ಮಗುವಿನ ಮೇಲೆ ಕಸ ವಿಲೇವಾರಿ ಘಟಕದ ಗೇಟು ಕಳಚಿ ಬಿದ್ದ ಪರಿಣಾಮ ಸಂಡೂರು ತಾಲೂಕಿನ ಬಂಡ್ರಿ ಗ್ರಾಮದ ರಮೇಶ (6) ಎಂಬ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ.

Etv Bharat
ಕಸ ವಿಲೇವಾರಿ ಘಟಕದ ಗೇಟು ಕಳಚಿ ಬಿದ್ದು ಬಾಲಕ ಸಾವು
author img

By

Published : Oct 26, 2022, 11:05 AM IST

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲ್ಲೂಕಿನ ಬಂಡ್ರಿ ಗ್ರಾಮದ ಹೊರವಲಯದಲ್ಲಿರುವ ಕಸ ವಿಲೇವಾರಿ ಘಟಕದ ಗೇಟು ಕಳಚಿ ಬಿದ್ದ ಪರಿಣಾಮ ರಮೇಶ (6) ಎಂಬ ಬಾಲಕ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ. ಈ ಕುರಿತು ಮಂಗಳವಾರ ಚೋರನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪಕ್ಕದ ಸ್ನೇಹಿತರ ಜತೆ ಆಟವಾಡಲು ತೆರಳಿದ್ದ ಬಾಲಕ ರಾತ್ರಿ ಆದರೂ ಮನೆಗೆ ಬಾರದ ಜಮೀನಿನಲ್ಲಿ ಸಾಕಷ್ಟು ಹುಡುಕಾಡಿದಾಗ ಬಾಲಕನ ಶವ ಗ್ರಾಮದ ಕಸ ವಿಲೇವಾರಿ ಘಟಕದ ಬಳಿ ಸಿಕ್ಕಿದೆ. ಮೃತ ಬಾಲಕನ ತಂದೆ ಬಸವರಾಜ ಈ ಕುರಿತು ಚೋರನೂರು ಪೊಲೀಸ್ ಠಾಣೆಯಲ್ಲಿ ಕಸ ವಿಲೇವಾರಿ ಘಟಕ ನಿರ್ಮಿಸಿದ ಕೆಆರ್‌ಐಡಿಎಲ್, ಗ್ರಾ.ಪಂ. ಪಿಡಿಒ, ಕಸ ವಿಲೇವಾರಿ ಘಟಕದ ಉಸ್ತುವಾರಿ ಅಧಿಕಾರಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಇದನ್ನೂ ಓದಿ : ಮಗಳ ಕಾಪಾಡಲು ಹೋಗಿ ತಂದೆಯೂ ರೈಲಿಗೆ ಬಲಿ..

ETV Bharat Logo

Copyright © 2025 Ushodaya Enterprises Pvt. Ltd., All Rights Reserved.