ಬಳ್ಳಾರಿ: ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಖಾನಾಹೊಸಹಳ್ಳಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಪ್ರಯಾಣಿಸುತ್ತಿದ್ದ ಬೈಕ್ ಸವಾರ ಡಿವೈಡರ್ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನ್ನಪಿದ್ದಾನೆ.
ಖಾನಾಹೊಸಳ್ಳಿ ಪ್ಲೈ-ಓವರ್ ಮೇಲೆ ಈ ಘಟನೆ ನಡೆದಿದ್ದು, ಮೃತರ ಮಾಹಿತಿ ಲಭ್ಯವಾಗಿಲ್ಲ. ರಾಷ್ಟ್ರೀಯ ಹೆದ್ದಾರಿಯ ಕೆಲ ಪ್ರದೇಶಗಳಲ್ಲಿ ಲೈಟ್ ಹಾಕದಿರುವುದು ಈ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೈಕ್ ಸವಾರನಿಗೆ ರಸ್ತೆ ಕಾಣದ ಕಾರಣ ಈ ಅಪಘಾತ ಸಂಭವಿಸಿದೆ ಎಂದಿರುವ ಸ್ಥಳೀಯರು, ಕಾನಾಹೊಸಳ್ಳಿ ರಾಷ್ಟ್ರೀಯ ಹೈವೇ 50 ಫ್ಲೈ-ಓವರ್ ದೀಪಗಳು ಮತ್ತು ಅವೈಜ್ಞಾನಿಕವಾಗಿ ರಸ್ತೆ ನಿರ್ಮಾಣಗೊಂಡಿರುವ ಕಾರಣ ಈ ರೀತಿಯ ಅವಘಡ ಸಂಭವಿಸುತ್ತಿವೆ ಎಂದು ತಿಳಿದು ಬಂದಿದೆ.
ಸ್ಥಳಕ್ಕೆ ಖಾನಹೊಸಳ್ಳಿ ಠಾಣೆಯ ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.