ಬಳ್ಳಾರಿ: ಭಾರತ್ ಜೋಡೋ ಯಾತ್ರೆ ಕೈಗೊಂಡಿರುವ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ನಿನ್ನೆ ಸಂಜೆ ಬಳ್ಳಾರಿ ಜಿಲ್ಲೆಗೆ ಆಗಮಿಸಿದ್ದು, ಇಂದು ಬೆಳಗ್ಗೆ ಹಲಕುಂದಿ ಮಠದಿಂದ ಯಾತ್ರೆ ಆರಂಭಿಸಿದ್ದಾರೆ. ಬೆಳಗ್ಗೆ 10ಕ್ಕೆ ಯಾತ್ರೆ ಬಳ್ಳಾರಿ ನಗರಕ್ಕೆ ತಲುಪಲಿದ್ದು, ಮಧ್ಯಾಹ್ನ 1.30ಕ್ಕೆ ಬಳ್ಳಾರಿ ಮುನ್ಸಿಪಲ್ ಮೈದಾನದಲ್ಲಿ ರಾಹುಲ್ ಗಾಂಧಿ ಸಾರ್ವಜನಿಕ ಸಮಾವೇಶದಲ್ಲಿ ಮಾತನಾಡಲಿದ್ದಾರೆ. ಪಾದಯಾತ್ರೆ ನಂತರ ರಾತ್ರಿ ರಾಹುಲ್ ಗಾಂಧಿ ಬಳ್ಳಾರಿಯ ಸಂಗನಕಲ್ಲು ಹಳ್ಳಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.
-
We have come a long way from where we started!
— Bharat Jodo (@bharatjodo) October 15, 2022 " class="align-text-top noRightClick twitterSection" data="
An incredible journey, but a long way to go yet.
Stay tuned with us as we progress further to unite India. #BharatJodoYatra Today's schedule pic.twitter.com/acHYcttT1V
">We have come a long way from where we started!
— Bharat Jodo (@bharatjodo) October 15, 2022
An incredible journey, but a long way to go yet.
Stay tuned with us as we progress further to unite India. #BharatJodoYatra Today's schedule pic.twitter.com/acHYcttT1VWe have come a long way from where we started!
— Bharat Jodo (@bharatjodo) October 15, 2022
An incredible journey, but a long way to go yet.
Stay tuned with us as we progress further to unite India. #BharatJodoYatra Today's schedule pic.twitter.com/acHYcttT1V
ನಿನ್ನೆ ಸಂಜೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರನ್ನು ಬಳ್ಳಾರಿ ಜಿಲ್ಲೆಯ ಗಡಿ ಬಳಿ ಶುಕ್ರವಾರ ಸಂಜೆ ಸ್ವಾಗತಿಸಲಾಗಿತ್ತು. ಪೂರ್ವ ನಿಗದಿತ ಕಾರ‍್ಯಕ್ರಮದಂತೆ ರಾಹುಲ್ ಗಾಂಧಿ ಅಲ್ಲಿಂದ ಸುಮಾರು ನಾಲ್ಕೈದು ಕಿ.ಮೀ ದೂರದಲ್ಲಿರುವ ಹಲಕುಂದಿ ಮಠಕ್ಕೆ ನಡೆದು ಬರಬೇಕಿತ್ತು. ಆದರೆ, ಯಾವುದೇ ಮುನ್ಸೂಚನೆ ನೀಡದೆ ಕಾರನ್ನೇರಿ ಹಲಕುಂದಿ ಮಠಕ್ಕೆ ಪ್ರಯಾಣಿಸಿದ್ದರು.
-
LIVE: #BharatJodoYatra | Ramparu to Halakundhi Mutt | Bellari | Karnataka https://t.co/TSRwdkyMHG
— Bharat Jodo (@bharatjodo) October 14, 2022 " class="align-text-top noRightClick twitterSection" data="
">LIVE: #BharatJodoYatra | Ramparu to Halakundhi Mutt | Bellari | Karnataka https://t.co/TSRwdkyMHG
— Bharat Jodo (@bharatjodo) October 14, 2022LIVE: #BharatJodoYatra | Ramparu to Halakundhi Mutt | Bellari | Karnataka https://t.co/TSRwdkyMHG
— Bharat Jodo (@bharatjodo) October 14, 2022
ರಾಹುಲ್ ಅವರನ್ನು ಬಳ್ಳಾರಿ ಜಿಲ್ಲೆಗೆ ಸ್ವಾಗತಿಸಲು ಕಾದು ನಿಂತಿದ್ದ ಸಾವಿರಕ್ಕೂ ಹೆಚ್ಚು ಕಲಾವಿದರು, ತಮ್ಮ ಕಲಾ ಪ್ರದರ್ಶನಕ್ಕೆ ಅವಕಾಶ ಸಿಗದಿದ್ದರಿಂದ ನಿರಾಶರಾದರು. ಅಲ್ಲದೆ, ಒಂದೇ ಬಣ್ಣದ ಸೀರೆಯುಟ್ಟು ನಿಂತಿದ್ದ ಲೈಂಗಿಕ ಅಲ್ಪಸಂಖ್ಯಾತರು ಪೇಚು ಮೋರೆ ಹಾಕಿಕೊಂಡು ಹಿಂತಿರುಗಿದರು. ಪರ್ಣ ಕುಂಭದೊಂದಿಗೆ ಸ್ವಾಗತಿಸಲು ಸಜ್ಜಾಗಿದ್ದ ಮಹಿಳೆಯರಿಗೂ ರಾಹುಲ್ ಹಣೆಗೆ ತಿಲಕವನ್ನಿಟ್ಟು ಪರ್ಣ ಕುಂಭದೊಂದಿಗೆ ಸ್ವಾಗತಿಸುವ ಅವಕಾಶ ದೊರೆಯಲಿಲ್ಲ.
-
Each step is getting easier than the previous!
— Bharat Jodo (@bharatjodo) October 15, 2022 " class="align-text-top noRightClick twitterSection" data="
Thanks to India's love and affection.
Read here about how the Bharat Yatris enjoyed the best of both Karnataka and Andhra Pradesh, yesterday👇https://t.co/lMQbRJBoqt
by @Pawankhera and @ManishKhanduri1 #BharatJodoYatra
">Each step is getting easier than the previous!
— Bharat Jodo (@bharatjodo) October 15, 2022
Thanks to India's love and affection.
Read here about how the Bharat Yatris enjoyed the best of both Karnataka and Andhra Pradesh, yesterday👇https://t.co/lMQbRJBoqt
by @Pawankhera and @ManishKhanduri1 #BharatJodoYatraEach step is getting easier than the previous!
— Bharat Jodo (@bharatjodo) October 15, 2022
Thanks to India's love and affection.
Read here about how the Bharat Yatris enjoyed the best of both Karnataka and Andhra Pradesh, yesterday👇https://t.co/lMQbRJBoqt
by @Pawankhera and @ManishKhanduri1 #BharatJodoYatra
ತಮ್ಮ ಸ್ವಾಗತಕ್ಕಾಗಿ ಕಲಾವಿದರು ಬಂದಿರುವುದನ್ನು ರಾಹುಲ್ ಗಾಂಧಿ ಅವರಿಗೆ ಪಕ್ಷದ ಹಿರಿಯ ನಾಯಕರು ಹೇಳಿರಲಿಲ್ಲ. ಸಂವಹನ ಕೊರತೆಯಿಂದಾಗಿ ಹೀಗಾಗಿದೆ ಎಂದು ಕಾಂಗ್ರೆಸ್ ಮೂಲಗಳು ತಿಳಿಸಿವೆ. ಗಡಿ ಭಾಗದಿಂದ ಹಲಕುಂದಿ ಮಠದವರೆಗೂ ರಾಹುಲ್ ಗಾಂಧಿ ಅವರನ್ನು ನೋಡಲು ಕಾದು ಕುಳಿತಿದ್ದ ಜನರು ಬಂದ ದಾರಿಗೆ ಸುಂಕವಿಲ್ಲ ಎಂಬಂತೆ ಹಿಂತಿರುಗಿದರು. ಆ ಸ್ಥಳದಲ್ಲಿ 20 ಸಾವಿರಕ್ಕೂ ಹೆಚ್ಚು ಜನರು ಸೇರಿದ್ದರು.
ಚಿತ್ರದುರ್ಗದ ರಾಂಪುರದಿಂದ ಬೆಳಗ್ಗೆ ಪಾದಯಾತ್ರೆ ಆರಂಭಿಸಿದ್ದ ರಾಹುಲ್ 11 ಗಂಟೆ ಸುಮಾರಿಗೆ ಜಾಜಿರಕಲ್ಲು ಟೋಲ್ ಪ್ಲಾಜಾಗೆ ಬಂದರು. ಅಲ್ಲಿ ಕೆಲಕಾಲ ವಿಶ್ರಾಂತಿ ಪಡೆದ ಬಳಿಕ ಸಂಜೆ ಪಾದಯಾತ್ರೆ ಪುನರಾರಂಭಿಸಿ ಜಾಜರಕಲ್ಲು ಟೋಲ್ ಪ್ಲಾಜಾದಿಂದ ಮೂಲಕ ರಾಜ್ಯದ ಗಡಿಯಲ್ಲಿರುವ ಒಎಂಸಿ ರೈಲ್ವೆ ಗೇಟ್‌ಗೆ ಬಂದರು.
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಜತೆ ಬಂದ ರಾಹುಲ್ ಅವರನ್ನು ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ, ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ, ಕರ‍್ಯಾಧ್ಯಕ್ಷ ಈಶ್ವರ ಖಂಡ್ರೆ, ರಾಜ್ಯಸಭೆ ಸದಸ್ಯರಾದ ಎಲ್. ಹನುಮಂತಯ್ಯ, ಸಯ್ಯದ್ ನಾಸಿರ್ ಹುಸೇನ್, ಎಐಸಿಸಿ ಕರ‍್ಯರ‍್ಶಿ ಶ್ರೀಧರ್ ಬಾಬು, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ರಫೀಕ್ ಮತ್ತಿತರರು ಸ್ವಾಗತಿಸಿದರು.
ಖಾದಿ ನೂಲಿನಿಂದ ತಯಾರಿಸಿದ ತ್ರಿವರ್ಣ ಮಾಲೆಯನ್ನು ರಾಹುಲ್‌ಗೆ ಹಾಕಿ ಸ್ವಾಗತಿಸಲಾಗಿತ್ತು. ರಾಹುಲ್ ಅವರನ್ನು ಸ್ವಾಗತಿಸಿದ ರಾಜ್ಯದ ಗಡಿಯಲ್ಲಿ ಭಾರಿ ಸಂಖ್ಯೆಯಲ್ಲಿ ಜನ ಸೇರಿದ್ದರು. ರಾಹುಲ್ ಗಾಂಧಿ ಅವರು ಸಾಗುವ ದಾರಿ ಉದ್ದಕ್ಕೂ ಬಿಗಿ ಭದ್ರತೆ ವ್ಯವಸ್ಥೆ ಮಾಡಲಾಗಿತ್ತು. ಅವರು ವಾಸ್ತವ್ಯ ಹೂಡಿದ ಮಠದ ಬಳಿಯಲ್ಲೂ ಅನುಮತಿ ಇರುವವರನ್ನು ಹೊರತುಪಡಿಸಿ ಬೇರೆಯವರನ್ನು ಅಲ್ಲಿಂದ ಕಳುಹಿಸಲಾಯಿತು.
ಇದನ್ನೂ ಓದಿ: ನಾಳೆ ಬಳ್ಳಾರಿ ನಗರ ಪ್ರವೇಶಿಸಲಿರುವ ಭಾರತ್ ಜೋಡೋ ಯಾತ್ರೆ; ಮುನಿಸಿಪಲ್ ಕಾಲೇಜು ಮೈದಾನದಲ್ಲಿ ಬೃಹತ್ ಬಹಿರಂಗ ಸಭೆ