ಹೊಸಪೇಟೆ (ಬಳ್ಳಾರಿ): ನವೆಂಬರ್ 1ರಂದು ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗ ಪ್ರಕಟಿಸಿರುವ ರಾಷ್ಟ್ರಕವಿ ‘ಕುವೆಂಪು ಸಮಗ್ರ’ ಡಿಜಿಟಲ್ ಪುಸ್ತಕವನ್ನು 2 ಲಕ್ಷ ಜನರು ಓದಿದ್ದಾರೆಂದು ಕುಲಪತಿ ಸ.ಚಿ.ರಮೇಶ ಅವರು ತಿಳಿದ್ದಾರೆ.
ಈಟಿವಿ ಭಾರತದೊಂದಿಗೆ ಮಾತನಾಡಿದ ಅವರು, ರಾಷ್ಟ್ರಕವಿ ಕುವೆಂಪು ಅವರ 12 ಸಾವಿರ ಪುಟಗಳ ಪುಸ್ತಕಕ್ಕೆ ಡಿಜಿಟಲ್ ಟಚ್ ನೀಡಲಾಗಿತ್ತು. ಗೂಗಲ್ನಲ್ಲಿ ಕುವೆಂಪು ಸಾಹಿತ್ಯ ಎಂದು ನಮೂದಿಸಿದರೆ ಪುಸ್ತಕಗಳು ತೆರೆದುಕೊಳ್ಳಲಿವೆ.
ಇದನ್ನು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಸಹ ಓದಬಹುದು. ಮುಂದಿನ ದಿನಗಳಲ್ಲಿ ವಿವಿ ಪುಸ್ತಕಗಳನ್ನು ಡಿಜಿಟಲೀಕರಣಗೊಳಿಸುವ ಚಿಂತನೆ ಮಾಡಲಾಗುವುದು ಎಂದರು.
ಕುವೆಂಪು ಸಮಗ್ರ ಸಾಹಿತ್ಯ ಪುಸ್ತಕಕ್ಕೆ ಅಮೆರಿಕಾ, ಕೆನಡಾ, ರಷ್ಯಾ, ಜರ್ಮನ್, ಜಪಾನ್, ದುಬೈನಲ್ಲಿ ನೆಲಸಿದ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿದ್ದಾರೆ. ಇದು ನಿಜಕ್ಕೂ ಹೆಮ್ಮೆಯ ಸಂಗತಿಯಾಗಿದೆ.
ಇಷ್ಟೊಂದು ಅಗಾಧ ಪ್ರಮಾಣದ ಪುಸ್ತಕಗಳನ್ನು ವಿದೇಶಕ್ಕೆ ತೆಗೆದುಕೊಂಡು ಹೋಗಲು ಸಾಧ್ಯವಿರಲ್ಲಿಲ್ಲ. ಡಿಜಿಟಲೀಕರಣಗೊಳಿಸಿದ್ದರಿಂದ ಇದೆಲ್ಲಾ ಸಾಧ್ಯವಾಯಿತು ಎಂದರು.