ಬಳ್ಳಾರಿ: ಬಳ್ಳಾರಿ ವಿಮ್ಸ್‌ನಲ್ಲಿ ಕಳೆದ 10 ರಿಂದ 13 ವರ್ಷಗಳ ಕಾಲ ಕಂಪ್ಯೂಟರ್ ಆಪರೇಟರ್ಗಳಾಗಿ ಕಾರ್ಯನಿರ್ವಹಿಸುತ್ತಿದ್ದ 45 ಜನ ಸಂಬಳವಿಲ್ಲದೇ ಪರದಾಡುತ್ತಿದ್ದಾರೆ. ಇವತ್ತು ವಿಮ್ಸ್ ವಿರುದ್ಧ ಅವರೆಲ್ಲ ಪ್ರತಿಭಟನೆ ನಡೆಸಿದರು.
ಕಂಪ್ಯೂಟರ್ ಆಪರೇಟರ್ಗಳ ಪ್ರತಿಭಟನೆ ಹಿನ್ನೆಲೆ ವಿಮ್ಸ್ಗೆ ಬಂದ ರೋಗಿಗಳು ಪರದಾಡುವಂತಾಯಿತು. ವಿಮ್ಸ್‌ನಲ್ಲಿ ವಿವಿಧ ವಿಭಾಗಗಳಾದ ಓಬಿಜಿ, ಲ್ಯಾಬ್, ತುರ್ತುಪರಿಸ್ಥಿತಿ, ಸ್ಟೋರ್, ಹೊರರೋಗಿಗಳ ನೋಂದಣಿಗಳಲ್ಲಿ 45 ಕಂಪ್ಯೂಟರ್ ಆಪರೇಟರ್ಗಳು ಸುಮಾರು 10 ರಿಂದ 13 ವರ್ಷಗಳ ಕಾಲ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಇವರಿಗೆ ಸಂಬಳವಿಲ್ಲದೇ ಜೀವನ ನಡೆಸುವುದು ಕಷ್ಟವಾಗಿದೆ. ಸಂಬಳ ನೀಡುವಂತೆ ಕಂಪ್ಯೂಟರ್ ಆಪರೇಟರ್ಗಳು ತಮ್ಮ ನೋವನ್ನು ಈಟಿವಿ ಭಾರತನೊಂದಿಗೆ ಹೇಳಿಕೊಂಡರು.
ವಿಮ್ಸ್‌ನ ನಿದೇರ್ಶಕ ಡಾ.ದೇವನಾಂದ್.ಬಿ ಈಟಿವಿ ಭಾರತ ಪ್ರತಿನಿಧಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದ. ಟೆಂಡರ್ ಸೆಪ್ಟೆಂಬರ್ ತಿಂಗಳವರೆಗೆ ಮಾತ್ರ ಆಗಿದೆ. ಅಲ್ಲಿಯವರೆಗೆ ಮಾತ್ರ ಸಂಬಳ ಕೊಡುತ್ತೇವೆ. ಆದರೆ, ಅಕ್ಟೋಬರ್, ನವೆಂಬರ್ ತಿಂಗಳ ಸಂಬಳ ನೀಡುವುದಿಲ್ಲ. ಯಾಕೆಂದರೆ, ಕಂಪ್ಯೂಟರ್ ಆಪರೇಟರ್ಗಳಿಗೆ ಟೆಂಡರ್ ಆಗಿಲ್ಲ. ಯಾವುದೇ ಆದೇಶ ಪ್ರತಿ ನೀಡಿಲ್ಲ. ಈ ಕೆಲಸ ಕಾನೂನು ಚೌಕಟ್ಟಿನಲ್ಲಿ ನಡೆಯುತ್ತಿದೆ. ಇದೆಲ್ಲ ಸರಿಯಾಗಬೇಕಾದ್ರೇ ಸಮಯಬೇಕಾಗುತ್ತದೆ ಎಂದು ವಿಮ್ಸ್‌ನ ನಿರ್ದೇಶಕರು ತಿಳಿಸಿದರು.
ಈಟಿವಿ ಭಾರತದೊಂದಿಗೆ ಕಂಪ್ಯೂಟರ್ ಆಪರೇಟರ್ ಹೇಮ ಮಾತನಾಡಿ, ಕಳೆದ 12 ವರ್ಷದಿಂದ ಕಂಪ್ಯೂಟರ್ ಆಪರೇಟರ್ರಾಗಿ ಕೆಲಸ ಮಾಡುತ್ತಿದ್ದೇನೆ. 11 ತಿಂಗಳಿಂದ ಯಾವುದೇ ಸಂಬಳವಿಲ್ಲ. ಈ ವಿಚಾರವಾಗಿ ಸೂಪರ್ಡೆಂಟ್ಗೆ ಕೇಳಿದ್ರೇ ನಿರ್ದೇಶಕರಿಗೆ ಕೇಳಿ, ನಿರ್ದೇಶಕರಿಗೆ ಕೇಳಿದ್ರೇ ಸೂಪರ್ಡೆಂಟ್ಗೆ ಕೇಳಿ ಎಂದು ಹೇಳುತ್ತಾರೆ. ಜೀವನ ನಡೆಸುವುದು ಕಷ್ಟವಾಗಿದೆ ಎಂದು ತಮ್ಮ ಅಳಲನ್ನು ತೋಡಿಕೊಂಡರು.