ಬಳ್ಳಾರಿ: ಜಿಲ್ಲೆಯ ಛಾಯಾಗ್ರಾಹಕ ಸಂಘದವರು ವಿಶ್ವ ಛಾಯಾಗ್ರಾಹಕರ ದಿನವನ್ನು ಸರಳವಾಗಿ ಆಚರಿಸಿದರು.
ಕೊರೊನಾ ಹಾವಳಿಯಿಂದಾಗಿ ಸುಮಾರು ಐದಾರು ತಿಂಗಳಿನಿಂದ ಸರಿಯಾಗಿ ಕೆಲಸವಿಲ್ಲದೆ ಆರ್ಥಿಕವಾಗಿ ತತ್ತರಿಸಿ ಹೋಗಿರುವ ಛಾಯಾಗ್ರಾಹಕರಿಗೆ ಸರ್ಕಾರ ಸಹಾಯಧನ ನೀಡಬೇಕು ಎಂದು ಹಿರಿಯ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ ಮನವಿ ಮಾಡಿಕೊಂಡರು.
ನಗರದ ಸೀತಾರಾಮ ಕಾಂಪ್ಲೆಕ್ಸ್ ಸಂಭಾಗಣದಲ್ಲಿ ಬಳ್ಳಾರಿ ಜಿಲ್ಲಾ ವೃತ್ತಿನಿರತ ಛಾಯಾಗ್ರಾಹಕ, ವಿಡಿಯೋ ಗ್ರಾಫರ್ಗಳ ಮತ್ತು ಸ್ಟುಡಿಯೋ ಮಾಲೀಕರ ಸಂಘದಿಂದ ಛಾಯಾಚಿತ್ರ ಪಿತಾಮಹ ಲೂಯಿಸ್ ಡಾಗರ್ ಮತ್ತು ಸ್ಟೀವನ್ ಸೇಸನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಛಾಯಗ್ರಹಣ ದಿನವನ್ನು ಸರಳವಾಗಿ ಆಚರಣೆ ಮಾಡಲಾಯ್ತು.
ಈ ವೇಳೆ ಹಿರಿಯ ಛಾಯಾಗ್ರಾಹಕ ಪುರುಷೋತ್ತಮ ಹಂದ್ಯಾಳ ಮಾತನಾಡಿ, ಜಿಲ್ಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೀಡಾಗಿ ಸರ್ಕಾರದ ಸಹಾಯವೂ ಇಲ್ಲದೆ ನೊಂದು ಆತ್ಮಹತ್ಯೆ ಮಾಡಿಕೊಂಡ ನಿದರ್ಶನಗಳೂ ಇವೆ. ಇನ್ನಾದರೂ ಸರ್ಕಾರದ ಕಡೆಯಿಂದ ಸಹಾಯಧನ ನೀಡುವ ಕೆಲಸ ಆಗಬೇಕು ಎಂದರು.