ETV Bharat / state

ಕನ್ನಡದ ಅನುಷ್ಠಾನದಲ್ಲಿ ಬಳ್ಳಾರಿ ಮಾದರಿ ಜಿಲ್ಲೆಯಾಗಬೇಕು: ಟಿ.ಎಸ್.ನಾಗಾಭರಣ - ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ ಎಸ್ ನಾಗಾಭರಣ

ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂಬುದನ್ನು ಅರಿತುಕೊಂಡು ಅಧಿಕಾರಿಗಳು ಕನ್ನಡ ಅನುಷ್ಠಾನ ಮಾಡಬೇಕು. ಈ ಮೂಲಕ ಬಳ್ಳಾರಿ ಕನ್ನಡ ಅನುಷ್ಠಾನದಲ್ಲಿ ಮಾದರಿ ಜಿಲ್ಲೆಯಾಗಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ.

bellary-should-be-a-model-district-in-the-implementation-of-kannada-says-nagabharana
ಕನ್ನಡದ ಅನುಷ್ಠಾನದಲ್ಲಿ ಬಳ್ಳಾರಿ ಮಾದರಿ ಜಿಲ್ಲೆಯಾಗಬೇಕು :ಟಿ.ಎಸ್.ನಾಗಾಭರಣ
author img

By

Published : Jun 9, 2022, 10:03 PM IST

ಬಳ್ಳಾರಿ: ನಾನಾ ಕಾರಣಗಳಿಗಾಗಿ ಸದ್ದು ಮಾಡುವ ಶ್ರೀಮಂತ ಇತಿಹಾಸ, ಪರಂಪರೆ ಹೊಂದಿರುವ ಬಳ್ಳಾರಿ ಜಿಲ್ಲೆಯು ಕನ್ನಡ ಪರಿಣಾಮಕಾರಿ ಅನುಷ್ಠಾನ ಮಾಡುವುದರ ಮೂಲಕ ಮಾದರಿ ಜಿಲ್ಲೆಯಾಗಿ ಸದ್ದು ಮಾಡಬೇಕು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಹೇಳಿದ್ದಾರೆ. ಕನ್ನಡ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.

ಕನ್ನಡವನ್ನು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವುದು ನಮ್ಮೆಲ್ಲರ ಕರ್ತವ್ಯ. ಕರ್ನಾಟಕದಲ್ಲಿ ಕನ್ನಡವೇ ಸಾರ್ವಭೌಮ ಭಾಷೆ ಎಂಬುದನ್ನು ಅರಿತುಕೊಂಡು ಅಧಿಕಾರಿಗಳು ಕನ್ನಡ ಅನುಷ್ಠಾನ ಮಾಡಬೇಕು. ಗಡಿ ಜಿಲ್ಲೆಯಾಗಿರುವ ಬಳ್ಳಾರಿಯಲ್ಲಿ ಮಾದರಿಯಾಗಿ ಕನ್ನಡ ಅನುಷ್ಠಾನವಾಗಿದೆ ಎಂದು ಹೆಮ್ಮೆಯಿಂದ ಹೇಳುವ ರೀತಿಯಲ್ಲಿ ಕೆಲಸ ಮಾಡಿ. ಕನ್ನಡ ಬೆಳೆಸುವ ನಿಟ್ಟಿನಲ್ಲಿ ಹೆಚ್ಚೆಚ್ಚು ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದರು. ಕನ್ನಡ ಅನುಷ್ಠಾನದಲ್ಲಿ ಕೆಲ ತಾಂತ್ರಿಕ ಸಮಸ್ಯೆಗಳಿರುವುದು ಗಮನಕ್ಕಿದ್ದು, ಅವುಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕ್ರಮವಹಿಸಲಿದೆ ಎಂಬ ಅಶ್ವಾಸನೆ ನೀಡಿದರು.

ಕನ್ನಡದ ಬಗ್ಗೆ ಏನೇ ಸಮಸ್ಯೆಗಳಿದ್ದರೂ ನೇರವಾಗಿ ಪ್ರಾಧಿಕಾರಕ್ಕೆ ತಿಳಿಸಬಹುದು. ಕನ್ನಡದ ಬದ್ಧತೆ, ಕನ್ನಡದ ಅಸ್ಮಿತೆಗೆ ಹಾಗೂ ಸರೋಜಿನಿ ಮಹಿಷಿ ವರದಿ ಅನುಷ್ಠಾನದಲ್ಲಿ ಪ್ರಾಧಿಕಾರ ಶ್ರಮಿಸುತ್ತಿದ್ದು, 1992ರಲ್ಲಿ ಸ್ಥಾಪನೆಯಾಗಿರುವ ಪ್ರಾಧಿಕಾರಕ್ಕೆ 30 ವರ್ಷ ತುಂಬಿರುವ ಈ ಶುಭ ಸಂದರ್ಭದಲ್ಲಿ 30 ವರ್ಷಗಳು ಸಾಗಿಬಂದ ದಾರಿ ಕುರಿತು ಪುಸ್ತಕ ಸಿದ್ಧಪಡಿಸಲಾಗುತ್ತಿದ್ದು,ಅದನ್ನು ಜುಲೈ ಅಂತ್ಯದಲ್ಲಿ ಬಿಡುಗಡೆ ಮಾಡಲಾಗುವುದು. ಇದರ ಜೊತೆಗೆ 18 ಪುಸ್ತಕಗಳು ಬಿಡುಗಡೆಯಾಗಲಿದ್ದು, ನಾಲ್ಕು ಕಡೆಗಳಲ್ಲಿ ವಿಚಾರ ಸಂಕಿರಣ ಏರ್ಪಡಿಸಲಾಗುತ್ತಿದೆ ಎಂದರು.

‘ಪದಕಣಜ’ ಆ್ಯಪ್ ಬಳಸಿ: ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಆಡಳಿತದಲ್ಲಿ ಪದಬಳಕೆ ಸಮಸ್ಯೆಯಾದಲ್ಲಿ ಇತ್ತೀಚೆಗೆ ಸರಕಾರ ಸಿದ್ಧಪಡಿಸಿದ ‘ಪದಕಣಜ’ ಆ್ಯಪ್ ಬಳಸಿ. ಅದರಲ್ಲಿ 6ಲಕ್ಷ ಪದಗಳಿದ್ದು,ಇತ್ತೀಚೆಗೆ ಮುಖ್ಯಮಂತ್ರಿಗಳು ಬಿಡುಗಡೆ ಮಾಡಿದ್ದಾರೆ ಎಂದು ಪ್ರಾಧಿಕಾರದ ಅಧ್ಯಕ್ಷ ಡಾ.ಟಿ.ಎಸ್.ನಾಗಾಭರಣ ತಿಳಿಸಿದರು. ನಿರ್ವಿಘ್ನವಾಗಿ ಕರ್ನಾಟಕದಲ್ಲಿ ಆಡಳಿತ ಭಾಷೆ ಬಳಸಲು ತಂತ್ರಜ್ಞಾನದ ಬೆಂಬಲ ಸಿಗುತ್ತಿದೆ. ತ್ರಿಭಾಷೆ ಸೂತ್ರವಿರುವುದರಿಂದ ಇಂಗ್ಲಿಷ್ ಸುತ್ತೋಲೆಯ ಜೊತೆಗೆ ನಮ್ಮ ಕನ್ನಡ ಭಾಷೆಯಲ್ಲಿಯೂ ಸುತ್ತೋಲೆ ತರ್ಜುಮೆ ಮಾಡಿ ಕಳುಹಿಸಿಕೊಡುವಂತೆ ತಮ್ಮ ಇಲಾಖೆಗೆ ಪತ್ರ ಬರೆಯಿರಿ ಎಂದು ಅಧಿಕಾರಿಗಳಿಗೆ ಸಲಹೆ ನೀಡಿದರು.

ಔಷಧಿಗಳ ಹೆಸರು, ವಿವರ ಕನ್ನಡದಲ್ಲಿರಲಿ: ರೋಗಿಗಳಿಗೆ ನೀಡುವ ಔಷಧಿಗಳ ಹೆಸರು ಮತ್ತು ವಿವರಗಳನ್ನು ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕಾದ ಅಗತ್ಯವಿದ್ದು,ಇಂಗ್ಲಿಷ್ ಬದಲಿಗೆ ಕನ್ನಡದಲ್ಲಿಯೇ ನಮೂದಿಸಿ ನೀಡುವಂತೆ ಔಷಧ ನಿಯಂತ್ರಕರಿಗೆ ಪತ್ರ ಬರೆಯಿರಿ. ಅದರ ಪ್ರತಿಯನ್ನು ನಮ್ಮ ಪ್ರಾಧಿಕಾರಕ್ಕೂ ಕಳುಹಿಸಿಕೊಡಿ. ಪಶುಸಂಗೋಪನಾ ಇಲಾಖೆಯ ಔಷಧಿಗಳು ಸೇರಿದಂತೆ ವಿವಿಧ ಇಲಾಖೆಗಳಡಿ ಜನರಿಗೆ ದೊರೆಯುವ ಸೌಲಭ್ಯಗಳು ಕನ್ನಡದಲ್ಲಿರುವಂತೆ ನೋಡಿಕೊಳ್ಳಬೇಕು ಎಂದು ಅವರು ತಿಳಿಸಿದರು.

ಬಳ್ಳಾರಿ ಜಿಲ್ಲೆಯಲ್ಲಿ 7 ಬೃಹತ್ ಕೈಗಾರಿಕೆಗಳಿದ್ದು,ಇಲ್ಲಿ ಸ್ಥಳೀಯರಿಗೆ ಉದ್ಯೋಗ ದೊರಕಿಸಿಕೊಡುವ ನಿಟ್ಟಿನಲ್ಲಿ ಕೌಶಲ್ಯಭಿವೃದ್ಧಿ ತರಬೇತಿಗಳನ್ನು ಏರ್ಪಡಿಸಿ ನಮ್ಮ ಯುವಕರನ್ನು ಸಜ್ಜುಗೊಳಿಸುವಂತೆ ಕೌಶಲ್ಯ ಅಧಿಕಾರಿ ಮತ್ತು ಜಿಲ್ಲಾ ಕೈಗಾರಿಕಾ ಕೇಂದ್ರದ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅಂಗಡಿಗಳ ನಾಮಫಲಕ, ವ್ಯವಹಾರದಲ್ಲಿ ಕನ್ನಡ ಬಳಕೆ: ಬಳ್ಳಾರಿ ನಗರದಲ್ಲಿ ಅಂಗಡಿಗಳ ಮೇಲೆ ನಾಮಫಲಕ ಮತ್ತು ವ್ಯವಹಾರಗಳಲ್ಲಿ ಕನ್ನಡ ಕಡ್ಡಾಯ ಬಳಸಬೇಕು. ಅಂಗಡಿಗಳ ನಾಮಫಲಕಗಳ ಮೇಲೆ ಮತ್ತು ವ್ಯವಹಾರದಲ್ಲಿ ಕಡ್ಡಾಯವಾಗಿ ಕನ್ನಡ ಭಾಷೆ ನಮೂದಿಸುವಂತೆ ಸೂಚನೆ ನೀಡಬೇಕು. ಉದಾಸೀನತೆ ತೋರಿದ ಅಂಗಡಿಗಳ ಮೇಲೆ ಕ್ರಮಕೈಗೊಳ್ಳಬೇಕು. ಟ್ರೇಡ್ ಲೈಸನ್ಸ್ ನವೀಕರಣ ಸಂದರ್ಭದಲ್ಲಿ ಅಂಗಡಿಗಳ ಮಾಲೀಕರಿಗೆ ಅವರ ಅಂಗಡಿಗಳ ಫೋಟೊಗಳು ಸಲ್ಲಿಸುವಂತೆ ತಿಳಿಸಬೇಕು. ಅದನ್ನು ಪರಿಶೀಲಿಸಿ ಅವರಿಗೆ ಅಗತ್ಯ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಫೋಟೊಗಳಲ್ಲಿ ಕನ್ನಡ ಭಾಷೆ ಬಳಕೆ ಅಷ್ಟಾಗಿ ಇರದಿದ್ದಲ್ಲಿ ಟ್ರೇಡ್ ಲೈಸನ್ಸ್ ನವೀಕರಣಗೊಳಿಸಬಾರದು ಎಂದು ಹೇಳಿದರು.

ಸಾರಿಗೆ,ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳಿಗೆ ಕನ್ನಡ ಭಾಷೆ ಬಳಕೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದರು. ನ್ಯಾಯಾಲಯದ ಆದೇಶಗಳನ್ನು ಹೊರತುಪಡಿಸಿ ಉಳಿದ ಎಲ್ಲ ನಿತ್ಯದ ಕಚೇರಿ ವ್ಯವಹಾರಗಳು ಮತ್ತು ಸುತ್ತೋಲೆಗಳನ್ನು ಕನ್ನಡದಲ್ಲಿಯೇ ಹೊರಡಿಸಲಾಗುತ್ತಿರುವುದನ್ನು ಅಧಿಕಾರಿಗಳು ಸಭೆಗೆ ಟಿ.ಎಸ್.ನಾಗಾಭರಣ ಸ್ಪಷ್ಟಪಡಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ, ಮಹಾನಗರ ಪಾಲಿಕೆ ಆಯುಕ್ತರಾದ ಪ್ರೀತಿ ಗೆಹ್ಲೋಟ್, ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲು, ಅಧ್ಯಕ್ಷರ ಆಪ್ತ ಕಾರ್ಯದರ್ಶಿ ಮಹೇಶ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: ಸೋಲಿನ ಭಯದಿಂದ ಇಲ್ಲಸಲ್ಲದ ಆರೋಪ: ಲಕ್ಷ್ಮಣ ಸವದಿ ವಿರುದ್ಧ ಕಾಂಗ್ರೆಸ್​ ಅಭ್ಯರ್ಥಿ ಟೀಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.