ಬಳ್ಳಾರಿ : ದೇಶದಲ್ಲಿ ಲಾಕ್ ಡೌನ್ ಮೇ 17 ರವರೆಗೆ ವಿಸ್ತರಣೆಯಾಗಿದೆ.ಬಳ್ಳಾರಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸಬೇಕು ಎಂದು ಬಳ್ಳಾರಿ ನಗರ ಶಾಸಕ ಜಿ.ಸೋಮಶೇಖರ್ ರೆಡ್ಡಿ ಮನವಿ ಮಾಡಿಕೊಂಡರು.
ನಗರದಲ್ಲಿ ಮಾತನಾಡಿದ ಬಳ್ಳಾರಿ ನಗರ ಶಾಸಕ, ಜನರು ಭಾರತ್ ಲಾಕ್ ಡೌನ್ ಉಲ್ಲಂಘನೆ ಮಾಡಬಾರದು. ಮುಖ್ಯವಾಗಿ ಹೊರಗಡೆ ಬಂದ್ರೆ ಮಾಸ್ಕ್ ಧರಿಸಬೇಕು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯ ಎಂದು ತಿಳಿಸಿದರು.
ಇನ್ನು ಚಿಕನ್, ಮಟನ್ ಮತ್ತು ಇನ್ನಿತರ ಸೆಂಟರ್ಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಮಾಸ್ಕ್ ಧರಿಸುವುದು ಕಡ್ಡಾಯ ಎಂದು ತಿಳಿಸಿದರು.
ಇಂದು ಬೆಳಿಗ್ಗೆ ಸೋಮಶೇಖರ್ ರೆಡ್ಡಿ ಸಿಟಿ ರೌಂಡ್ ಹಾಕುವಾಗ ಚಿಕನ್ ಸೆಂಟರ್‌ನಲ್ಲಿ ಸಾರ್ವಜನಿಕರು ಮುಗಿಬಿದ್ದಿದ್ದರು. ಆದ್ದರಿಂದ ಶಾಸಕರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಗಳನ್ನು ಧರಿಸದೇ ಚಿಕನ್ ಮಾರಾಟ ಮಾಡುತ್ತಿದ್ದ ಎ1 ಚಿಕನ್ ಅನ್ನು ಮುಚ್ಚಿಸಿದರು.