ETV Bharat / state

ಬಳ್ಳಾರಿ ಶಿಶುನಾಪತ್ತೆಗೆ ಕೊನೆಗೂ ಸುಳಿವು ಸಿಕ್ತು.. ಅಷ್ಟಕ್ಕೂ ಏನಾಗಿತ್ತು ಗೊತ್ತೇ..? - ಬಳ್ಳಾರಿ ಜಿಲ್ಲಾಸ್ಪತ್ರೆ ಶಿಶು ನಾಪತ್ತೆ ಸುದ್ದಿ

ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವೊಂದು ನಾಪತ್ತೆಯಾಗಿರುವ ಪುಕಾರು ಇಡೀ ಆಸ್ಪತ್ರೆ ಅಧಿಕಾರಿ, ಸಿಬ್ಬಂದಿಯ ನೆಮ್ಮದಿಯನ್ನು ಕೆಲಕಾಲ ಕೆಡಿಸಿತ್ತು. ಸಾವಧಾನವಾಗಿ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಬೇರೆ ವಾರ್ಡಿಗೆ ಸ್ಥಳಾಂತರಿಸಿರೋದು ಬೆಳಕಿಗೆ ಬಂದಿದೆ.

ಬಳ್ಳಾರಿ ಶಿಶುನಾಪತ್ತೆಗೆ ಕೊನೆಗೆ ಸಿಕ್ಕ ಸುಳಿವು
author img

By

Published : Oct 26, 2019, 7:16 PM IST

ಬಳ್ಳಾರಿ : ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ ನವಜಾತ ಶಿಶುವೊಂದು ನಾಪತ್ತೆಯಾಗಿರೋ ಪುಕಾರು ಇಡೀ ಆಸ್ಪತ್ರೆ ಅಧಿಕಾರಿ, ಸಿಬ್ಬಂದಿಯ ನೆಮ್ಮದಿಯನ್ನು ಕೆಲಕಾಲ ಕೆಡಿಸಿತ್ತು. ಸಾವಧಾನವಾಗಿ ಸಿಸಿಟಿವಿ ಫೂಟೇಜ್ ಪರಿಶೀಲಿಸಿದಾಗ ಬೇರೆ ವಾರ್ಡಿಗೆ ಸ್ಥಳಾಂತರಿಸಿರೋದು ಬೆಳಕಿಗೆ ಬಂದ ಮೇಲೆಯೇ ಆಸ್ಪತ್ರೆಯ ಅಧಿಕಾರಿ, ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಕಳೆದ ಮೂರು ದಿನಗಳ ಹಿಂದೆ ಜನನವಾದ ನವಜಾತ ಶಿಶು ಈ ದಿನ ಬೆಳಗ್ಗೆ ನಾಪತ್ತೆಯಾಗಿರೋ ಪುಕಾರು ಹಬ್ಬಿತ್ತು. ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿಂಧಿಗೇರಿ ಗ್ರಾಮದ ತಾಯಿ ಲಲಿತರನ್ನು ಮೂರು ದಿನದ ಕೆಳಗಡೆ ಪತಿ ಅನಿಲ್ ಎಂಬುವರು ಹೆರಿಗೆ ಚಿಕಿತ್ಸೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆಕೆಗೆ ಮೂರು ದಿನಗಳ ಹಿಂದೆ ಗಂಡು ಮಗು ಜನಿಸಿತ್ತು. ಅನಾರೋಗ್ಯದ ಕಾರಣ ಐಸಿಯುನಲ್ಲಿ ಇಡಲಾಗಿತ್ತು. ಆದರೆ, ಮಗು ಇಂದು ಬೆಳಗಿನಜಾವ 3 ಗಂಟೆಗೆ ನಾಪತ್ತೆಯಾಗಿರೋ ವದಂತಿ ಹಬ್ಬಿಸಲಾಗಿತ್ತು.

ಕೆಲ‌ಕಾಲ ಈ ನವಜಾತ ಶಿಶು ನಾಪತ್ತೆಯಾಗಿರುವ ವದಂತಿ ಗೊಂದಲದ ಗೂಡಾಗಿತ್ತಾದ್ರೂ ಆಸ್ಪತ್ರೆಯ ಸಿಸಿ ಟಿವಿ ಪರಿಶೀಲಿಸಿದಾಗ ಆಸ್ಪತ್ರೆಯ ಸಿಬ್ಬಂದಿ, ಅಟೆಂಡರ್ ಅವರ ಕಣ್ತಪ್ಪಿನಿಂದ ಬೇರೆ ವಾರ್ಡಿನಲ್ಲಿ ಈ ಮಗುವನ್ನು ಇರಿಸಲಾಗಿತ್ತು. ಮೂರು ದಿನಗಳ ಮಗುವಾದ್ದರಿಂದ ಶಿಶುವನ್ನು ಗುರುತಿಸುವಲ್ಲಿ ಗೊಂದಲವುಂಟಾಗಿತ್ತು. ಬೇರೆ ತಾಯಿಯ ಹೆಸರು ಕೂಗಿದಾಗ ಮತ್ತೊಬ್ಬ ಮಗುವಿನ ಅಟೆಂಡರ್ ವಾರ್ಡ್‌ಗೆ ಹೊತ್ತೊಯ್ದ ಪರಿಣಾಮ ಈ ಗೊಂದಲ ಸೃಷ್ಟಿಯಾಗಿತ್ತು. ಈಗ ಎಲ್ಲವೂ ಸುಖಾಂತ್ಯ ಕಂಡಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

Intro:ನವಜಾತ ಶಿಶು ನಾಪತ್ತೆ ಫುಕಾರು, ಸುಖಾಂತ್ಯ!
ಬಳ್ಳಾರಿ: ಇಲ್ಲಿನ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದ
ನವಜಾತ ಶಿಶುವೊಂದು ನಾಪತ್ತೆಯಾಗಿರೊ ಫುಕಾರು ಇಡೀ
ಆಸ್ಪತ್ರೆ ಅಧಿಕಾರಿ- ಸಿಬ್ಬಂದಿಯ ನೆಮ್ಮದಿಯನ್ನು ಕೆಲಕಾಲ ಕೆಡಿಸಿತ್ತು. ಸಾವಧಾನವಾಗಿ ಸಿಸಿಟಿವಿ ಫೋಟೇಜ್ ಪರಿಶೀಲಿಸಿ
ದಾಗ ಬೇರೆ ವಾರ್ಡಿಗೆ ಸ್ಥಳಾಂತರಿಸಿರೋದು ಬೆಳಕಿಗೆ ಬಂದ ಮೇಲೆಯೇ ಆಸ್ಪತ್ರೆಯ ಅಧಿಕಾರಿ, ಸಿಬ್ಬಂದಿ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅದರಿಂದ ನವಜಾತ ನಾಪತ್ತೆಯ
ಫುಕಾರು ಸುಖಾಂತ್ಯ ಕಂಡಿದೆ.
ಕಳೆದ ಮೂರು ದಿನಗಳ ಹಿಂದೆ ಜನನವಾದ ಈ ನವಜಾತ ಶಿಶು
ಈ ದಿನ ಬೆಳಿಗ್ಗೆ ನಾಪತ್ತೆಯಾಗಿರೊ ಫುಕಾರು ಹಬ್ಬಿತ್ತು. ಜಿಲ್ಲೆಯ ಸಿರುಗುಪ್ಪ ತಾಲೂಕಿನ ಸಿಂಧಿಗೇರಿ ಗ್ರಾಮದ ತಾಯಿ ಲಲಿತರನ್ನು ಮೂರು ದಿನದ ಕೆಳಗಡೆ ಪತಿ ಅನಿಲ್ ಎಂಬುವರು ಹೆರಿಗೆ ಚಿಕಿತ್ಸೆ ಗೆಂದು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆಕೆಗೆ ಮೂರು ದಿನಗಳ ಹಿಂದೆ ಗಂಡು ಮಗು ಜನಿಸಿತ್ತು. ಅನಾರೋಗ್ಯದ ಕಾರಣ ಐಸಿಯು ನಲ್ಲಿ ಇಡಲಾಗಿತ್ತು. ಆದ್ರೆ ಮಗು ಇಂದು ಬೆಳಗಿನಜಾವ 3 ಗಂಟೆಗೆ ನಾಪತ್ತೆಯಾಗಿರೋ ಫುಕಾರು ಹಬ್ಬಿಸಲಾಗಿತ್ತು.
Body:ಕೆಲ‌ಕಾಲ ಈ ನವಜಾತ ಶಿಶು ನಾಪತ್ತೆಯಾಗಿರೊ ಫುಕಾರು ಗೊಂದಲದ ಗೂಡಾಗಿತ್ತಾದ್ರೂ ಆಸ್ಪತ್ರೆಯ ಸಿಸಿ ಟಿವಿ ಪರಿಶೀಲಿ ಸಿದಾಗ ಬಳ್ಳಾರಿ ಜಿಲ್ಲಾಸ್ಪತ್ರೆಯ ಸಿಬ್ಬಂದಿ, ಅಟೆಂಡರ್ ಅವರ ಕಣ್ತಪ್ಪಿನಿಂದ ಬೇರೆ ವಾರ್ಡಿನಲ್ಲಿ ಈ ಮಗುವನ್ನು ಇರಿಸಲಾಗಿತ್ತು. ಮೂರು ದಿನಗಳ ಮಗುವಾದ್ದರಿಂದ ಮಗುವನ್ಮು ಗುರುತಿಸುವಲ್ಲಿ ಗೊಂದಲವುಂಟಾಗಿತ್ತು. ಬೇರೆ ತಾಯಿಯ ಹೆಸರು ಕೂಗಿದಾಗ ಮತ್ತೊಬ್ಬ ಮಗುವಿನ ಅಟೆಂಡರ್ ವಾರ್ಡ್ ಗೆ ಹೊತ್ತೊಯ್ದ ಪರಿಣಾಮ ಈ ಗೊಂದಲ ಸೃಷ್ಟಿಯಾಗಿತ್ತು. ಈಗ ಆ ಫುಕಾರು ಸುಖಾಂತ್ಯ ಕಂಡಿದೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_5_BIRTH_BABY_MISSING_NEWS_7203310
ETV Bharat Logo

Copyright © 2025 Ushodaya Enterprises Pvt. Ltd., All Rights Reserved.