ETV Bharat / state

ಗಬ್ಬು ನಾರುತ್ತಿದೆ ಬಳ್ಳಾರಿ ಮಹಾನಗರ ಪಾಲಿಕೆ: ಭಯದಲ್ಲೇ ಬರುವ ಸಾರ್ವಜನಿಕರು! - ಬಳ್ಳಾರಿ ಮಹಾನಗರ ಪಾಲಿಕೆ

ಬಳ್ಳಾರಿ ಮಹಾನಗರ ಪಾಲಿಕೆಯ ಆವರಣದ ಕಾಂಪ್ಲೆಕ್ಸ್​​​ಗಳು ಮದ್ಯಪಾನ, ಧೂಮಪಾನ, ಮಲಮೂತ್ರ ವಿಸರ್ಜನೆ ಮಾಡುವ ಸ್ಥಳಗಳಾಗಿವೆ. ಈ ಬಗ್ಗೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Bellary Mahanagara Palike
ಗಬ್ಬು ನಾರುತ್ತಿದೆ ಬಳ್ಳಾರಿ ಮಹಾನಗರ ಪಾಲಿಕೆ
author img

By

Published : Jan 17, 2020, 11:57 AM IST

ಬಳ್ಳಾರಿ: ಮಹಾನಗರ ಪಾಲಿಕೆ ಆವರಣವೂ ಮದ್ಯಪಾನ, ಧೂಮಪಾನ, ನಾಯಿಗಳ ವಾಸ ಸ್ಥಳ, ಮಲಮೂರ್ತ ವಿಸರ್ಜನೆ ಮಾಡುವ ಸ್ಥಳವಾಗಿ ಮಾರ್ಪಟ್ಟಿದೆ. ಇದು ಮಹಾನಗರ ಪಾಲಿಕೆಗೆ ನಾಚಿಕೆಗೇಡಿನ ಸಂಗತಿಯಾಗಿದೆ.

ಗಬ್ಬು ನಾರುತ್ತಿದೆ ಬಳ್ಳಾರಿ ಮಹಾನಗರ ಪಾಲಿಕೆ

ಈ ಬಗ್ಗೆ ಈಟಿವಿ ಭಾರತದೊಂದಿಗೆ ಮಾತನಾಡಿದ ನಾಗರಿಕ ಹೋರಾಟ ಸಮಿತಿ, ಕಾರ್ಯಕಾರಿ ಸಮಿತಿಯ ಸದಸ್ಯ ಡಾ.ಪ್ರಮೋದ್ ಅವರು, ಸ್ವಚ್ಛತೆಯನ್ನು ಕಾಪಾಡಬೇಕಾದ ಬಳ್ಳಾರಿ ಮಹಾನಗರ ಪಾಲಿಕೆಯ ಆವರಣದ ಕಾಂಪ್ಲೆಕ್ಸ್​​​ಗಳು ಮದ್ಯಪಾನ, ಧೂಮಪಾನ, ಮಲಮೂತ್ರ ವಿಸರ್ಜನೆ ಮಾಡುವ ಸ್ಥಳಗಳಾಗಿವೆ. ಇನ್ನು ಸಾರ್ವಜನಿಕ ಸ್ಥಳಗಳಲ್ಲಿ ಪರಿಸ್ಥಿತಿ ಏನು?. ಇದೆಲ್ಲಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಾಣ್ತಾ ಇಲ್ವಾ ಎಂದು ಪ್ರಶ್ನೆ ಮಾಡಿದರು.

ಮಹಾನಗರ ಪಾಲಿಕೆಗೆ ಆಗಮಿಸುವ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡಿದುಕೊಂಡು ಬರುವ ಪರಿಸ್ಥಿತಿ ಇದೆ. ಏಕೆಂದರೆ ‌ಪಾಲಿಕೆಯ ಆವರಣ ಮತ್ತು ಕಚೇರಿಗಳಲ್ಲಿ ಬೀದಿ ನಾಯಿಗಳ ಓಡಾಟ ಜೋರಾಗಿ ಇರುತ್ತದೆ. ಅವು ಎಲ್ಲಿ ಕಡಿಯುತ್ತವೆ ಎನ್ನುವ ಭಯ ಇದೆ ಎಂದರು.

Intro:kn_bly_04_170120_problemmunicipletprgrblems_ka10007

ಗಣಿನಾಡು ಬಳ್ಳಾರಿ ಮಹಾನಗರಪಾಲಿಕೆ ಆವರಣದಲ್ಲಿಯೇ ಮದ್ಯಪಾನ, ಧೂಮಪಾನ, ನಾಯಿಗಳು ವಾಸಿಸುವ ಸ್ಥಳ, ಮಲಮೂರ್ತ ವಿಸರ್ಜನೆ ಮಾಡುವ ಸ್ಥಳವಾಗಿದೆ. ಇದು ಮಹಾನಗರ ಪಾಲಿಕೆಗೆ ನಾಚಿಕೆಗೆಡಿನ ಸಂಗತಿಯಾಗಿದೆ.

Body:.

ಬಳ್ಳಾರಿ ಮಹಾನಗರ ಪಾಲಿಕೆಯ ಆವರಣದಲ್ಲಿಯೇ ರೀತಿಯಾಗಿ ಮಧ್ಯಪಾನ, ಧೂಮಪಾನ, ಮಲಮೂರ್ತ ವಿಸರ್ಜನೆ ಮಾಡಿದ್ರೇ ಇನ್ನು ಸಾರ್ವಜನಿಕರ ಸ್ಥಳಗಳಲ್ಲಿ ಪರಿಸ್ಥಿತಿ ಹೇಗೆ ? ಇದೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತೆ....!

ಈಟಿವಿ ಭಾರತದೊಂದಿಗೆ ಮಾತನಾಡಿದ ನಾಗರೀಕ ಹೋರಾಟ ಸಮಿತಿಯ ಕಾರ್ಯಕಾರಿ ಸಮಿತಿಯ ಸದಸ್ಯ ಡಾ.ಪ್ರಮೋದ್ ಅವರು ಬಳ್ಳಾರಿ ಮಹಾನಗರ ಪಾಲಿಕೆ ನಗರದಲ್ಲಿ ಸ್ವಚ್ಚತೆಯನ್ನು ಮತ್ತು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಕೊಡಬೇಕು. ಆದರೆ ನಗರಗಳಲ್ಲಿ ಸ್ವಚ್ಚತೆ ಕಾಪಾಡುವುದು ಮತ್ತು ಜನಗಳಿಗೆ ಸೌಲಭ್ಯಗಳನ್ನು ಕೊಡುವುದು ದೂರದ‌ಮಾತು.
ಆದ್ರೇ ಮಹಾನಾಗರ ಪಾಲಿಕೆಯ ಆವರಣದಲ್ಲಿನ ಕಾಂಪ್ಲೆಕ್ಸ್ ಗಳಲ್ಲಿ ಮದ್ಯಪಾನ, ಧೂಮಪಾನ, ಮಲಮೂರ್ತ ವಿಸರ್ಜನೆ ಮಾಡಿದ್ರೇ ಹೇಗೆ ? ಇವರ ಆವರಣದಲ್ಲಿಯೇ ಸ್ವಚ್ಚತೆ ಇಲ್ಲದಿರುವುದು ಎಷ್ಟರ ಮಟ್ಟಿಗೆ ಸರಿ ಎಂದು ನಾಗರೀಕರು ಪ್ರಶ್ನೆ ಮಾಡುತ್ತಾರೆ ಎಂದರು.
ಇದೆಲ್ಲಾ ಮಹಾನಗರ ಪಾಲಿಕೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಕಾಣ್ತಾ ಇಲ್ವ, ಏಕೆ ? ಸುಮ್ನೆ ಇದಾರೆ ಎಂದು ಪ್ರಶ್ನೆ ಮಾಡಿದರು.

ಇನ್ನಿ ಮಹಾನಗರ ಪಾಲಿಕೆಗೆ ಆಗಮಿಸುವ ಜನರು ತಮ್ಮ ಜೀವವನ್ನು ಕೈಯಲ್ಲಿ ಹಿಡೊದುಕೊಂಡು ಬರುವ ಪರಿಸ್ಥಿತಿ ಇದೆ ಏಕೆಂದರೆ ‌ಪಾಲಿಕೆಯ ಆವರಣ ಮತ್ತು ಕಚೇರಿಗಳಲ್ಲಿ ಬೀದಿ ನಾಯಿಗಳು ಒಡಾಟ ಜೋರಾಗಿ ಇರುತ್ತದೆ. ಅವು ಎಲ್ಲಿ ಕಡಿಯುತ್ತವೆ ಎನ್ನುವ ಭಯವು ಇದೆ.

ಮಹಾನಗರ ಪಾಲಿಕೆಯು ನಗರದಲ್ಲಿ ಮತ್ತು ಪಾಲಿಕೆಗೆ ಆವರಣದ ಎರಡು ಕಡೆ ಸ್ವಚ್ಚತೆ ಕಾಪಾಡಬೇಕು ಮತ್ತು ಪಾಲಿಕೆಗೆ ಬಂದ ಸಾರ್ವಜನಿಕರಿಗೆ ಸರಿಯಾದ ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯಗಳು ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.

Conclusion:ಒಟ್ಟಾರೆಯಾಗಿ ಮಹಾನಗರಪಾಲಿಕೆ ಆವರಣದ ಸುತ್ತಲೂ ಇರುವ ಕಾಂಪೌಂಡ್ ಗಳಲ್ಲಿ ಈ ರೀತಿಯ ದುಚಟಗಳನ್ನು ಮಾಡುವವರ ಕಡಿವಾಣ ಹಾಕುವ ಕೆಲಸವನ್ನು ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು ಕಠಿಣಕ್ರಮ ತೆಗೆದುಕೊಳ್ಳಬೇಕಾಗಿದೆ.

ಬೈಟ್ :-
ಡಾ.ಪ್ರಮೋದ್
ನಾಗರೀಕ ಹೋರಾಟ ಸಮಿತಿ
ಕಾರ್ಯಕಾರಿ ಸಮಿತಿಯ
ಸದಸ್ಯರು,
ಬಳ್ಳಾರಿ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.