ಬಳ್ಳಾರಿ: ಸಮಾಜದಲ್ಲಿರುವ ಸಾಮಾನ್ಯ ವ್ಯಕ್ತಿಗಳನ್ನು ಭಯೋತ್ಪಾದಕರನ್ನಾಗಿ ಮಾಡುವಂತವರನ್ನು ತನಿಖೆ ಮಾಡಿ ಪತ್ತೆ ಹಚ್ಚಬೇಕು ಮತ್ತು ಅಂತವರಿಗೆ ಕಾನೂನಾತ್ಮಕವಾಗಿ ಶಿಕ್ಷೆ ನೀಡಬೇಕು ಎಂದು ಬಳ್ಳಾರಿ ವಲಯದ ಐಜಿಪಿ ಎಂ.ನಂಜುಂಡಸ್ವಾಮಿ ತಮ್ಮ ಫೇಸ್ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಮಂಗಳೂರು ವಿಮಾನ ನಿಲ್ದಾಣದಲ್ಲಿ ಬಾಂಬ್ ಪತ್ತೆ ವಿಚಾರವಾಗಿ ತಮ್ಮ ಅನಿಸಿಕೆಯನ್ನು ಐಜಿಪಿ ವ್ಯಕ್ತಪಡಿಸಿದ್ದಾರೆ. ಫೇಸ್ಬುಕ್ ಖಾತೆಯಲ್ಲಿ ಈ ರೀತಿಯ ಬರಹವನ್ನು ಐಜಿಪಿ ಎಂ.ನಂಜುಂಡಸ್ವಾಮಿ ಬರೆದುಕೊಂಡಿದ್ದಾರೆ.
#Manam #MNanjundaswamiIPS #Mangalore #Terrorism #Bomb #ಮಂಗಳೂರು #ಬಾಂಬ್ #ಮಾನಸಿಕ
I haven’t seen or heard about any sane
man becoming a terrorist. All terrorists
are mentally ill. We have to investigate
and find out those people who made them
insane to become terrorists to bring them
under the scanner of the Rule of Law
to punish them.
- Manam
ನಾನು ಜೀವಮಾನದಲ್ಲಿ ಇಲ್ಲಿಯ ತನಕ
ಮಾನಸಿಕ ರೋಗಿಗಳಲ್ಲದವರು
ಭಯೋತ್ಪಾದಕರಾದ ಬಗ್ಗೆ ಕೇಳಿಲ್ಲ ಮತ್ತು
ನೋಡಿಲ್ಲ. ಭಯೋತ್ಪಾದಕರೆಲ್ಲಾ ಮಾನಸಿಕ
ರೋಗಿಗಳಾಗಿರುತ್ತಾರೆ. ಅವರ ಮನಸ್ಸನ್ನು
ಹಾಳುಮಾಡಿ ಅವರನ್ನು
ಭಯೋತ್ಪಾದಕರನ್ನಾಗಿಸುವವರನ್ನು ತನಿಖೆ
ಮಾಡಿ ಪತ್ತೆ ಹಚ್ಚಿ , ಅವರೆಲ್ಲರಿಗೂ
ಕಾನೂನಾತ್ಮಕವಾಗಿ ಶಿಕ್ಷೆ ನೀಡಿಸಬೇಕಾಗಿದೆ
- ಮನಂ