ETV Bharat / state

ಕಲ್ಲಿದ್ದಲು ಕೊರತೆ: ನಾಳೆಯಿಂದ ಕುಡಿತಿನಿ ಬಿಟಿಪಿಎಸ್ ಸ್ಥಗಿತ ಸಾಧ್ಯತೆ - BTPS

ಕಲ್ಲಿದ್ದಲು ಪೂರೈಕೆಯಲ್ಲಿ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಬಳ್ಳಾರಿ ಜಿಲ್ಲೆಯ ಕುಡಿತಿನಿ ಸಮೀಪವಿರುವ ಬಿಟಿಪಿಎಸ್ ಕಾರ್ಯ ನಾಳೆಯಿಂದ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

bellary district Heat power station will closed from tomorrow
ಕುಡಿತಿನಿ ಸಮೀಪವಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ
author img

By

Published : Oct 11, 2021, 1:21 PM IST

ಬಳ್ಳಾರಿ: ಕಲ್ಲಿದ್ದಲು ಕೊರತೆಯಿಂದಾಗಿ ಜಿಲ್ಲೆಯ ಕುಡಿತಿನಿ ಸಮೀಪವಿರುವ ಬಿಟಿಪಿಎಸ್ (ಶಾಖೋತ್ಪನ್ನ ವಿದ್ಯುತ್ ಕೇಂದ್ರ) ಸ್ಥಗಿತವಾಗುವ ಆತಂಕ ಎದುರಾಗಿದೆ.

ಗಣಿ ಪ್ರದೇಶದಲ್ಲಿ ಮಳೆ, ನೆರೆ ಹಾಗೂ ರೈಲು ಸಂಚಾರದ ಸಮಸ್ಯೆಯಿಂದಾಗಿ ಕಲ್ಲಿದ್ದಲು ಪೂರೈಕೆಯಲ್ಲಿ ವ್ಯತ್ಯಯವಾಗಿದೆ. ಬಿಟಿಪಿಎಸ್​ಗೆ ಆಂಧ್ರದ ಸಿಂಗರೇಣಿ, ಮಹನಂದಿ, ಜೊತೆಗೆ ಮಹಾರಾಷ್ಟ್ರದಿಂದಲೂ ಕಲ್ಲಿದ್ದಲು ಪೂರೈಕೆಯಾಗುತ್ತಿತ್ತು. ಆದ್ರೆ ಇದೀಗ ಎಲ್ಲಾ ಕಡೆ ಕಲ್ಲಿದ್ದಲು ರವಾನೆ ಬಂದ್ ಆಗಿದ್ದು ಸಮಸ್ಯೆ ಉದ್ಭವಿಸಿದೆ.

ಕುಡಿತಿನಿ ಸಮೀಪವಿರುವ ಶಾಖೋತ್ಪನ್ನ ವಿದ್ಯುತ್ ಕೇಂದ್ರ

1,700 ಮೆಗಾ ವ್ಯಾಟ್ ಸಾಮರ್ಥ್ಯದ ಬಿಟಿಪಿಎಸ್​ಗೆ ದಿನಕ್ಕೆ 25 ಸಾವಿರ ಟನ್ ಕಲ್ಲಿದ್ದಲು ಬೇಕು. ಆದ್ರೆ ಅಧಿಕಾರಿಗಳು ಕಳೆದ ನಾಲ್ಕು ದಿನಗಳ ಹಿಂದೆ ಬಿಟಿಪಿಎಸ್​ನಲ್ಲಿ ಕೇವಲ 15 ಸಾವಿರ ಟನ್ ಸ್ಟಾಕ್ ಇದೆ ಎಂದಿದ್ದರು. ಜೊತೆಗೆ ಇರುವ ಮೂರು ಘಟಕಗಳಲ್ಲಿ ಎರಡು ಘಟಕ ಬಂದ್ ಮಾಡಿದ್ರು. ಇಂದು ಒಂದು ಘಟಕ ಕಾರ್ಯ ನಿರ್ವಹಿಸುತ್ತಿದ್ದು, ನಾಳೆಯಿಂದ ಬಿಟಿಪಿಎಸ್ ಸಂಫೂರ್ಣವಾಗಿ ಸ್ಥಗಿತಗೊಳ್ಳುವ ಸಾಧ್ಯತೆ ಇದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.