ಬಳ್ಳಾರಿ: ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಶನಿವಾರ ಒಂದೇ ದಿನ 940 ಜನರಲ್ಲಿ ಸೋಂಕು ದೃಢಪಟ್ಟಿದ್ದು, 25 ಜನ ಮೃತಪಟ್ಟಿದ್ದಾರೆ.
ಈ ಜಿಲ್ಲೆಗಳಲ್ಲಿ ಒಟ್ಟು ಸೋಂಕಿತರ ಸಂಖ್ಯೆ 60,274 ಕ್ಕೆ ಏರಿಕೆಯಾಗಿದ್ದು, ಮೃತರ ಸಂಖ್ಯೆ 877 ಕ್ಕೆ ಏರಿದೆ.
ಇಂದು 629 ಜನರು ಡಿಸ್ಚಾರ್ಜ್ ಆಗುವ ಮೂಲಕ ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ 46,641 ತಲುಪಿದೆ. 12,746 ಸಕ್ರಿಯ ಪ್ರಕರಣಗಳಿವೆ.
ಇಂದು ಎಲ್ಲಿ, ಎಷ್ಟು ಕೇಸ್?
ಬಳ್ಳಾರಿ - 432, ಸಂಡೂರು - 97, ಸಿರುಗುಪ್ಪ - 86, ಹೊಸಪೇಟೆ - 137, ಹೆಚ್.ಬಿ.ಹಳ್ಳಿ - 32, ಕೂಡ್ಲಿಗಿ - 37, ಹರಪನಹಳ್ಳಿ - 53, ಹಡಗಲಿ- 66 ಜನರಿಗೆ ಕೊರೊನಾ ಕಾಣಿಸಿಕೊಂಡಿದೆ.
ರಾಜ್ಯಾದ್ಯಂತ ಕೊರೊನಾ ಸಂಖ್ಯೆ ಹೆಚ್ಚಳವಾಗುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಸೋಮವಾರದಿಂದ ಲಾಕ್ಡೌನ್ ಘೋಷಿಸಿದೆ.