ಬಳ್ಳಾರಿ: ಜಿಲ್ಲೆಯ ಹೊಸಪೇಟೆ ತಾಲೂಕಿನ ಕಮಲಾಪುರದ ಎಲ್.ಎಲ್.ಸಿ ಕಾಲುವೆಗೆ ಪ್ರತಿ ವರ್ಷದ ಯುಗಾದಿ ಹಬ್ಬದ ಮುಂಚಿತವಾಗಿ ನೀರನ್ನು ನಿಲ್ಲಿಸಲಾಗುತ್ತಿತ್ತು. ಆದರೆ ಈ ಬಾರಿ ಯುಗಾದಿ ಹಬ್ಬ ಬಂದಿದ್ದರೂ ಸಹ ಇನ್ನೂ ಕಾಲುವೆಯಲ್ಲಿ ನೀರಿದೆ.
ತುಂಗಭದ್ರ ಡ್ಯಾಂನಿಂದ ಇಲ್ಲಿಗೆ ನೀರನ್ನು ಹರಿಬಿಡಲಾಗುತ್ತದೆ. ಬೇಸಿಗೆ ತಾಪಮಾನ ಹೆಚ್ಚಾದ ಕಾರಣ ಈ ಊರಿನ ಮಕ್ಕಳು ಇಲ್ಲಿಗೆ ಬಂದು ನೀರಿನಲ್ಲಿ ಮಿಂದು ಬಿಸಿಲ ತಾಪವನ್ನು ಕಡಿಮೆ ಮಾಡಿಕೊಳ್ಳುತ್ತಿದ್ದಾರೆ.
ನೀರಿನಲ್ಲೇ ಕಾಲ ಕಳೆಯುವ ಯುವಕರು:
ಬೇಸಿಗೆ ಬಂದ್ರೆ ಸಾಕು ಯುವಕರು ನೀರಿನಲ್ಲಿ ಈಜಾಡುತ್ತಾ ದಿನ ಕಳೆಯುತ್ತಾರೆ. ಬೆಳಗ್ಗೆ 11 ರಿಂದ ಸಂಜೆ 4 ಗಂಟೆವರೆಗೆ ನಿರಂತರವಾಗಿ ನೀರಿನಲ್ಲಿ ಈಜಾಡುತ್ತಾ ಇರುತ್ತೇವೆ ಎಂದು ಕಮಲಾಪುರದ ಜಿ. ನಾಗರಾಜ್ ಎಂಬುವರು ನಮ್ಮ ಪ್ರತಿನಿಧಿಯೊಂದಿಗೆ ಮಾತನಾಡಿದರು.
ಇಂದು ಬಳ್ಳಾರಿಯಲ್ಲಿ ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್ ಇದೆ.