ಬಳ್ಳಾರಿ: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಪ್ರಮಾಣ ಹೆಚ್ಚುತ್ತಿದ್ದು ಬೆಡ್, ಆಕ್ಸಿಜನ್, ವೆಂಟಿಲೇಟರ್ ಕೊರತೆ ಕ್ಷಣಕ್ಷಣಕ್ಕೂ ಆತಂಕ ಹೆಚ್ಚಿಸುತ್ತಿದೆ. ಗಣಿಜಿಲ್ಲೆಯನ್ನು ಗಮನಿಸೋದಾದ್ರೆ, ಕೋವಿಡ್ ಎರಡನೇ ಅಲೆಯನ್ನು ಸಮರ್ಥವಾಗಿ ಎದುರಿಸಲು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸನ್ನದ್ಧವಾಗಿದೆ.
ಸದ್ಯದ ಪರಿಸ್ಥಿತಿ ನಿಭಾಯಿಸಲು ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಅಂದಾಜು 2 ಸಾವಿರಕ್ಕೂ ಅಧಿಕ ಬೆಡ್ಗಳ ಲಭ್ಯತೆಯಿದೆ.
ಕೊರೊನಾ ಮಾರಣಾಂತಿಕ ಅಲೆಯಲ್ಲಿ ಉಭಯ ಜಿಲ್ಲೆಗಳಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಸರಾಸರಿ 3,000 ಮಂದಿಯನ್ನು ಕೋವಿಡ್ ಟೆಸ್ಟ್ಗೆ ಒಳಪಡಿಸಿದರೆ ಒಂದು ಸಾವಿರಕ್ಕೂ ಅಧಿಕ ಮಂದಿಗೆ ಈ ಸೋಂಕು ತಗುಲಿರುವುದು ದೃಢಪಡುತ್ತಿದೆ. ಈ ಪೈಕಿ ಕೆಲವರು ಹೋಂ ಐಸೋಲೇಷನ್ನಲ್ಲಿದ್ದಾರೆ. ಕೆಲವರು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾಗಿದ್ದಾರೆ. ಚಿಕಿತ್ಸೆಗೆ ಸಮರ್ಪಕವಾಗಿ ಬೆಡ್ಗಳ ವ್ಯವಸ್ಥೆ ಇಲ್ಲಿದೆ.
ಇದಲ್ಲದೇ, ಆಕ್ಸಿಜನ್ ಬೆಡ್ಗಳ ಕೊರತೆಯೂ ಇಲ್ಲ. ಆದ್ರೆ ವೆಂಟಿಲೇಟರ್ಗಳ ಕೊರತೆ ಇದೆಯೆಂದು ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ ಹೇಳಿದ್ದಾರೆ.
ಇದನ್ನೂ ಓದಿ: ಹುಬ್ಬಳ್ಳಿಯಲ್ಲಿ ಆಕ್ಸಿಜನ್ ಸಾಂದ್ರಕಗಳಿಗೆ ಹೆಚ್ಚಿದ ಬೇಡಿಕೆ
ಈ ಕುರಿತು ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿರುವ ಡಿಹೆಚ್ಒ ಡಾ.ಹೆಚ್.ಎಲ್.ಜನಾರ್ಧನ್, ಉಭಯ ಜಿಲ್ಲೆಗಳ ಕೋವಿಡ್ ಕೇರ್ ಸೆಂಟರ್ಗಳಲ್ಲಿ ಸಮರ್ಪಕ ಬೆಡ್ಗಳ ವ್ಯವಸ್ಥೆ ಮಾಡಲಾಗಿದೆ. ಸಮುದಾಯ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಖಾಸಗಿ ಆಸ್ಪತ್ರೆಗಳಲ್ಲಿ ಬೆಡ್ಗಳ ಕೊರತೆಯಿಲ್ಲ ಎಂದು ಹೇಳುತ್ತಾರೆ.
ಬೆಡ್ ಲಭ್ಯತೆ ಕುರಿತು ಅಂಕಿ-ಅಂಶಗಳು ಹೀಗಿವೆ..
ಬಳ್ಳಾರಿ:
- ಡಿಸಿಹೆಚ್ ಬೆಡ್‌ಗಳು- 470
- ಜನರಲ್ - 90
- ಹೆಚ್ ಎಫ್ ಎನ್ ಸಿ/o2 - 303
- ಐಸಿಯು- 10
- ಐಸಿಯುವಿ- 58
ವಿಜಯನಗರ:
- ಡಿಸಿಹೆಚ್ ಬೆಡ್‌ಗಳು (25) - 1147
- ಜನರಲ್ - 362
- ಹೆಚ್ಎಫ್ಎನ್ಸಿ/o2- 749
- ಐಸಿಯು- 08
- ಐಸಿಯುವಿ- 28
ಎಬಿಎಆರ್ಕೆ ಅಡಿಯಲ್ಲಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು:
- ಡಿಸಿಹೆಚ್ ಬೆಡ್ ಗಳು(6) - 147
- ಜನರಲ್ - 89
- ಹೆಚ್ಎಫ್ಎನ್ಸಿ/o2- 30
- ಐಸಿಯು- 22
- ಐಸಿಯುವಿ- 06
ಎಬಿಎಆರ್ಕೆ ಅಡಿಯಲ್ಲಿ ನೋಂದಾಯಿತವಲ್ಲದ ಖಾಸಗಿ ಆಸ್ಪತ್ರೆಗಳು:
- ಡಿಸಿಹೆಚ್ ಬೆಡ್‌ಗಳು (5)- 200
- ಜನರಲ್ - 49
- ಹೆಚ್ಎಫ್ಎನ್ಸಿ/o2 - 123
- ಐಸಿಯು- 24
- ಐಸಿಯುವಿ- 04.