ETV Bharat / state

ಕೆಜಿ - ಡಿಜೆ ಹಳ್ಳಿ ಗಲಭೆ ಪ್ರಕರಣ: ಬಳ್ಳಾರಿ ಜೈಲಿಗೆ ಬಂದಿಳಿದ ಆರೋಪಿಗಳು! - ಬಳ್ಳಾರಿ ಜೈಲಿಗೆ ಬಂದಿಳಿದ ಆರೋಪಿಗಳು

ಕೆ.ಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯ ‌ವ್ಯಾಪ್ತಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳನ್ನು ಇಂದು ಬೆಳ್ಳಂಬೆಳಗ್ಗೆ ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆತರಲಾಗಿದೆ.

Bangalore riot case
ಬೆಂಗಳೂರು ಗಲಭೆ ಪ್ರಕರಣದ ಆರೋಪಿಗಳು ಬಳ್ಳಾರಿಗೆ ಶಿಫ್ಟ್
author img

By

Published : Aug 14, 2020, 9:23 AM IST

ಬಳ್ಳಾರಿ: ಬೆಂಗಳೂರಿನ ಪುಲಿಕೇಶಿ ವಿಧಾನಸಭಾ ಕ್ಷೇತ್ರದ ಶಾಸಕರ ಮನೆ ಮೇಲೆ ದಾಳಿ ಪ್ರಕರಣದಲ್ಲಿ ಭಾಗಿಯಾಗಿರುವ ಅಂದಾಜು 80 ಮಂದಿ ಆರೋಪಿಗಳನ್ನು ಬಳ್ಳಾರಿ‌ ಕೇಂದ್ರ ಕಾರಾಗೃಹಕ್ಕೆ ಕರೆ ತರಲಾಗಿದೆ.

ಬೆಳ್ಳಂಬೆಳಗ್ಗೆ 3 ಕೆಎಸ್​ಆರ್​ಟಿಸಿಬಸ್ ಹಾಗೂ ಪೊಲೀಸ್ ಭದ್ರತಾ ಪಡೆಯೊಂದಿಗೆ ಅವರನ್ನ ಕರೆತರಲಾಯಿತು. ಕೆ.ಜಿ ಹಳ್ಳಿ ಹಾಗೂ ಡಿಜೆ ಹಳ್ಳಿಯ ‌ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ ಈ ಆರೋಪಿಗಳನ್ನು ಬಂಧಿಸಲಾಗಿತ್ತು. ಎರಡು ರಿಸರ್ವ್ ವಾಹನಗಳ ಮೂಲಕ ಈ ಆರೋಪಿಗಳಿಗೆ ಬಿಗಿಯಾದ ಬಂದೋಬಸ್ತ್ ನೀಡಲಾಗಿತ್ತು.

ಬೆಂಗಳೂರು ಗಲಭೆ ಪ್ರಕರಣದ ಆರೋಪಿಗಳು ಬಳ್ಳಾರಿಗೆ ಶಿಫ್ಟ್

ಬಳ್ಳಾರಿ ಕೇಂದ್ರ ಕಾರಾಗೃಹಕ್ಕೆ ಕರೆತರುವ ಮುನ್ನವೇ ಎಲ್ಲ ಆರೋಪಿಗಳಿಗೂ ಕೋವಿಡ್ ಟೆಸ್ಟ್ ನಡೆಸಲಾಗಿದೆ. ಕೊರೊನಾ ವರದಿ ಬಂದ ನಂತರವಷ್ಟೆ ಆರೋಪಿಗಳನ್ನು ಬಳ್ಳಾರಿಗೆ ಕರೆತರಲಾಗಿದೆ. ಸದ್ಯ ಕಾರಾಗೃಹದಲ್ಲಿ ಅಧಿಕಾರಿಗಳು, ಆರೋಪಿಗಳ ದಾಖಲೆ ಪರಿಶೀಲಿಸುತ್ತಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.