ಬಳ್ಳಾರಿ: ನಗರದ ಕೂಲ್ ಕಾರ್ನರ್ ಅಂಗಡಿಯ ಮಾಲೀಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ರಾಘವೇಂದ್ರ ವೃತ್ತದ ಬಳಿ ನಡೆದಿದೆ.
ಜಯಪ್ರಕಾಶ ಶೆಟ್ಟಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ರಾಘವೇಂದ್ರ ವೃತ್ತದ ಬಳಿಯಿರುವ ಕೂಲ್ ಕಾರ್ನರ್ ಅಂಗಡಿಯ ಮಾಲೀಕ. ರೂಮ್ವೊಂದರಲ್ಲಿ ಗುರುವಾರ ತಡರಾತ್ರಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಜಯಪ್ರಕಾಶ ಶೆಟ್ಟಿ ಸಾವು ಅನುಮಾನಾಸ್ಪದವಾಗಿದ್ದು, ಹತ್ಯೆ ಮಾಡಿ ನೇಣು ಹಾಕಿರಬಹುದು ಎಂದು ಶಂಕಿಸಲಾಗಿದೆ. ಈ ಸಂಬಂಧ ಗಾಂಧಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.