ಬಳ್ಳಾರಿ: ಕೊರೊನಾ ಲಾಕ್ಡೌನ್ ಪರಿಣಾಮ ಮಹಾನಗರ ಪಾಲಿಕೆ ವ್ಯಾಪ್ತಿಯ ಯುಜಿಡಿ ಕಾರ್ಮಿಕರ ವೇತನಕ್ಕೆ ಕತ್ತರಿ ಬಿದ್ದಿದೆ. ಕಳೆದ ನಾಲ್ಕೈದು ತಿಂಗಳಿಂದ ವೇತನವಿಲ್ಲದೇ ಅಂದಾಜು 52ಕ್ಕೂ ಅಧಿಕ ಒಳಚರಂಡಿ ಕಾರ್ಮಿಕರು ಸಂಕಷ್ಟದಲ್ಲಿ ಕಾಲ ಕಳೆಯುತ್ತಿದ್ದಾರೆ. ಲಾಕ್ಡೌನ್ಗಿಂತ ಮುಂಚಿತವಾಗಿ ವೇತನವನ್ನು ನಿಲ್ಲಿಸಲಾಗಿದೆ.
ಪ್ರತಿ ತಿಂಗಳು ಒಬ್ಬರಿಗೆ 13,000ಕ್ಕೂ ಅಧಿಕ ವೇತನವನ್ನು ಪಾವತಿಸಲಾಗುತ್ತೆ. ಆದರೆ, ಕಳೆದ ನಾಲ್ಕೈದು ತಿಂಗಳಿಂದ ವೇತನ ಪಾವತಿಸಲು ಮಹಾನಗರ ಪಾಲಿಕೆ ಮೀನಮೇಷ ಎಣಿಸುತ್ತಿದೆ. ಕೇವಲ ಒಂದು ತಿಂಗಳಿನ ವೇತನ ಪಾವತಿಸಲು ಮಹಾನಗರ ಪಾಲಿಕೆ ಅಸ್ತು ಎಂದಿದೆ, ಆದರೆ, ಇದಕ್ಕೆ ಕಾರ್ಮಿಕರು ಒಪ್ಪುತ್ತಿಲ್ಲ. ಬಾಕಿಯಿರುವ ವೇತನ ಪಾವತಿಸಬೇಕೆಂದು ಕಾರ್ಮಿಕರು ಪಟ್ಟು ಹಿಡಿದಿದ್ದು, ದೈನಂದಿನ ಕಾರ್ಯಗಳಿಗೆ ಬ್ರೇಕ್ ಹಾಕೋದಾಗಿ ಎಚ್ಚರಿಕೆಯನ್ನು ನೀಡುತ್ತಿದ್ದಾರೆ.
ಈ ವೇಳೆ ಮಾತನಾಡಿದ ಕಾರ್ಮಿಕ ಮಹಿಳೆ ಲಕ್ಷ್ಮೀ, ಸರಿಯಾಗಿ ವೇತನ ಪಾವತಿಯಾಗದ ಕಾರಣ ಎಲ್ಲರೂ 10 ರೂ. ಬಡ್ಡಿ ದರದಲ್ಲಿ 20 ಸಾವಿರಕ್ಕೂ ಅಧಿಕ ಮೊತ್ತದ ಹಣವನ್ನು ಸಾಲ ಪಡೆದುಕೊಂಡಿದ್ದೇವೆ. ಲಾಕ್ಡೌನ್ ದಿನಗಳಲ್ಲಿ ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವುದಾಗಿ ತಿಳಿಸಿದ್ದಾರೆ.