ಬಳ್ಳಾರಿ: ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರಲ್ಲಿ ಸರ್ಕಾರಿ ನೌಕರ ಸಂಘದಿಂದ ನಡೆದ ಕನ್ನಡೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಬಳ್ಳಾರಿ ವಲಯ ಐಜಿಪಿ ಎಂ.ನಂಜುಂಡಸ್ವಾಮಿ, ರಾಜ್ಯ ಸರ್ಕಾರಿ ನೌಕರರ ಪರವಾಗಿ ಮೂರು ಅಂಶಗಳನ್ನು ಹೇಳಿದರು. ಅದರಲ್ಲಿ ಪ್ರಮುಖವಾಗಿ ಸರ್ಕಾರಿ ನೌಕರಿಗೆ ಬರುವ ಬಹಳಷ್ಟು ಜನ ಯಾವ ಬಡತನದಿಂದ ಬಂದಿರುತ್ತಾರೋ ನಿವೃತ್ತಿಯ ಸಮಯದಲ್ಲಿ ಅದೇ ಬಡತನದಲ್ಲಿ ಮನೆಗೆ ಹೋಗತ್ತಾರೆ ಎಂದರು.
ಕನ್ನಡ ನಾಡಿನ ಸರ್ವರ ಬಡತನವನ್ನು ನಿರ್ವಹಣೆ ಮಾಡಬೇಕಾದ್ರೆ ಸರ್ಕಾರ ಯೋಜನೆಗಳನ್ನು ಹಾಕಿಕೊಂಡು ಸರ್ಕಾರಿ ನೌಕರರಿಗೆ ಇರಲು ಮನೆ, ಶಾಲಾ-ಕಾಲೇಜ್ಗಳಲ್ಲಿ ಮಕ್ಕಳಿಗೆ ಉಚಿತ ವಸತಿ ಸಹಿತ ಶಿಕ್ಷಣ ಕೊಡಬೇಕು. ಸರ್ಕಾರಿ ನೌಕರರಾದಾಗ ವೈದ್ಯಕೀಯ ಸೌಲಭ್ಯ ನೀಡಿದ್ರೆ ಉಪಯೋಗವಿಲ್ಲ. ಬದಲಾಗಿ ನಿವೃತ್ತಿ ಹೊಂದಿದ ಬಳಿಕವು ಈ ಉಚಿತ ಸೌಲಭ್ಯ ನೀಡಬೇಕೆಂದು ಒತ್ತಾಯಿಸಿದರು.
( NPS ) ಹೊಸ ಪಿಂಚಣಿ ಯೋಜನೆಯಿಂದ ಸರ್ಕಾರಿ ನೌಕರರಿಗೆ ತೊಂದರೆಯಾಗಿದೆ. ಇದರನ್ನು ಬಗೆಹರಿಸುವ ಕೆಲಸ ಮಾಡಬೇಕಾಗಿದೆ. ಸರ್ಕಾರಿ ನೌಕರರಾಗಿ ದೊಡ್ಡ ದೊಡ್ಡ ಹುದ್ದೆಯಲ್ಲಿದ್ದು, ನಿವೃತ್ತಿಯಾದ ನಂತರ ಜೆ.ಎಸ್.ಡಬ್ಲ್ಯೂನಂತಹ ಸಂಸ್ಥೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುವ ಪರಿಸ್ಥಿತಿ ಬರುತ್ತದೆ. ಆ ರೀತಿ ಆಗಬಾರದು ಎಂದು ಐಜಿಪಿ ಹೇಳಿದರು.