ETV Bharat / state

ಸೋನಾ‌ ಮಸೂರಿ ಅಕ್ಕಿ ಉಣಬಡಿಸುವಂತೆ ಆಗ್ರಹ; ಹಾಸ್ಟೆಲ್‌ನ ವಿದ್ಯಾರ್ಥಿನಿಯರ ಪ್ರತಿಭಟನೆ

ಸೋನಾ ಮಸೂರಿ ಅಕ್ಕಿಯಲ್ಲಿ ಅನ್ನ ಮಾಡಿ ಉಣಬಡಿಸುವಂತೆ ಆಗ್ರಹಿಸಿ ಬಳ್ಳಾರಿಯಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸಿದ್ದಾರೆ.

ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿನಿಯರು ಪ್ರತಿಭಟನೆ
author img

By

Published : Jul 23, 2019, 8:26 PM IST

ಬಳ್ಳಾರಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಕೊಡಮಾಡುವ ಅಕ್ಕಿಯ ಬದಲಿಗೆ ಸೋನಾ ಮಸೂರಿ ಅಕ್ಕಿನೇ ಉಣಬಡಿಸಬೇಕೆಂದು ಆಗ್ರಹಿಸಿ ಪರಿಶಿಷ್ಟ ಪಂಗಡ ವರ್ಗದ ವಿದ್ಯಾರ್ಥಿನಿಯರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.

ಎಸ್ಟಿ ಹಾಸ್ಟೆಲ್ ವಿದ್ಯಾರ್ಥಿನಿಯರು ಪ್ರತಿಭಟನೆ

ಜಿಲ್ಲಾಧಿಕಾರಿ ಕಚೇರಿಯ ಎದುರು ಸೇರಿದ ನೂರಾರು ವಿದ್ಯಾರ್ಥಿನಿಯರು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.

ಸರ್ಕಾರದ ಆದೇಶದನ್ವಯ ಪರಿಶಿಷ್ಟ ಪಂಗಡ‌ ಸಮುದಾಯದ ಹಾಸ್ಟೆಲ್ ವಾರ್ಡನ್‌ ತಮ್ಮ ಕರ್ತವ್ಯವನ್ನು ಪಾಲಿಸಿದ್ದಾರೆ. ಆ ಪ್ರಕಾರವೇ ಪಡಿತರ ಚೀಟಿಯ ಫಲಾನುಭವಿಗಳಿಗೆ ಕೊಡ ಮಾಡುವ ಪಡಿತರ ಅಕ್ಕಿನಾ ಉಣಬಡಿಸಲಾಗುತ್ತದೆ. ಸೋನಾ ಮಸೂರಿ ಅಕ್ಕಿಯ ವಿತರಣೆ ಪ್ರಸ್ತಾವನೆ ಸದ್ಯಕ್ಕಿಲ್ಲ. ಆಯ್ತು ನೋಡೋಣ ಎಂಬ ಮಾತನ್ನು ಜಿಲ್ಲಾಧಿಕಾರಿ ಪರವಾಗಿ‌ ಮನವಿ ಪತ್ರ ಸ್ವೀಕರಿಸಿದ ಅಧಿಕಾರಿಯೋರ್ವರು ನೀಡಿದರು.

Intro:ಸೋನಾ‌ ಮಸೂರಿ ಅಕ್ಕಿನೇ ಉಣಬಡಿಸುವಂತೆ ಆಗ್ರಹಿಸಿ
ಎಸ್ಟಿ ಹಾಸ್ಟೆಲ್ ನ ವಿದ್ಯಾರ್ಥಿನಿಯರು ಪ್ರತಿಭಟನೆ
ಬಳ್ಳಾರಿ: ಪಡಿತರ ಚೀಟಿಯ ಫಲಾನುಭವಿಗಳಿಗೆ ಕೊಡ ಮಾಡುವ ಅಕ್ಕಿಯ ಬದಲಿಗೆ ಸೋನಾ ಮಸೂರಿ ಅಕ್ಕಿನೇ ಉಣಬಡಿಸಬೇಕೆಂದು ಆಗ್ರಹಿಸಿ ಪರಿಶಿಷ್ಟ ಪಂಗಡ ವರ್ಗದ ವಿದ್ಯಾರ್ಥಿನಿಯರು ನಗರದಲ್ಲಿಂದು ಪ್ರತಿಭಟನೆ ನಡೆಸಿದರು.
ಇಲ್ಲಿನ ಜಿಲ್ಲಾಧಿಕಾರಿ ಕಚೇರಿಯ ಎದುರು ನೂರಾರು ವಿದ್ಯಾರ್ಥಿನಿಯರು ಜಮಾಯಿಸಿ ಕೆಲಕಾಲ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಬಳಿಕ, ಜಿಲ್ಲಾಧಿಕಾರಿಯವರಿಗೆ ಮನವಿ ಸಲ್ಲಿಸಿದರು.
ಸರ್ಕಾರದ ಆದೇಶದನ್ವಯ ಪರಿಶಿಷ್ಟ ಪಂಗಡ‌ ಸಮುದಾಯದ ಹಾಸ್ಟೆಲ್ ನ ವಾರ್ಡ್ ನ್ ತಮ್ಮ ಕರ್ತವ್ಯವನ್ನು ಪಾಲಿಸಿದ್ದಾರೆ. ಆ ಪ್ರಕಾರವೇ ಪಡಿತರ ಚೀಟಿಯ ಫಲಾನುಭವಿಗಳಿಗೆ ಕೊಡ ಮಾಡುವ ಪಡಿತರ ಅಕ್ಕಿನಾ ಉಣಬಡಿಸಲಾಗುತ್ತದೆ. ಸೋನಾ ಮಸೂರಿ ಅಕ್ಕಿಯ ವಿತರಣೆ ಪ್ರಸ್ತಾವನೆ ಸದ್ಯಕ್ಕಿಲ್ಲ. ಆಯ್ತು ನೋಡೋಣ ಎಂಬ ಸಬೂನನ್ನು ಜಿಲ್ಲಾಧಿಕಾರಿ ಪರವಾಗಿ‌ ಮನವಿ ಪತ್ರ ಸ್ವೀಕರಿಸಿದ ಅಧಿಕಾರಿಯೋರ್ವರು ನೀಡಿದರು.

Body:ಸೋನಾ ಮಸೂರಿ ಅಕ್ಕಿನಾ ಉಣಬಡಿಸೋದಕ್ಕಾಗಿ ಪ್ರತಿಭಟನೆ: ಹಾಸ್ಟೆಲ್ ನಲ್ಲಿ ಅಗತ್ಯ ಸೌಲಭ್ಯ ಕಲ್ಪಿಸಲಾಗಿಲ್ಲ. ವಾರ್ಡ್ ನ್ ಅವರ ದುಂಡಾವರ್ತನೆ ಸೇರಿದಂತೆ ಇನ್ನಿತರೆ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸುವ ಅದೆಷ್ಟೋ ವಿದ್ಯಾರ್ಥಿಗಳನ್ನು ನಾನು ನೋಡಿರುವೆ. ಆದರೆ, ಇಲ್ಲಿ ಸೋನಾ ಮಸೂರಿ ಅಕ್ಕಿನಾ ಉಣಬಡಿಸುವಂತೆ ಆಗ್ರಹಿಸಿ ಮೊದಲ ಬಾರಿಗೆ ಬಳ್ಳಾರಿಯಲ್ಲಿ ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುತ್ತಿರೋದು ಸಾರ್ವಜನಿಕರ ನಗೆಪಾಟಲಿಗೆ ಎಡೆಮಾಡಿಕೊಟ್ಟಿತು. ‌
ಈ ಹಾಸ್ಟೆಲ್ ನಲ್ಲಿರುವ ಪರಿಶಿಷ್ಟ ಪಂಗಡ ಸಮುದಾಯದ ಬಹುತೇಕ ವಿದ್ಯಾರ್ಥಿಗಳು ತಮ್ಮತಮ್ಮ ಮನೆಯಲಿ ಸೋನಾ ಮಸೂರಿ ಅಕ್ಕಿನೇ ಸೇವಿಸುತ್ತಾರಂತೆ. ಆಗಾಗಿ, ಹಾಸ್ಟೆಲ್ ನಲ್ಲಿ ಕೂಡ ಪಿಡಿಎಸ್ ಅಕ್ಕಿ‌ ಬದಲಿಗೆ ಸೋನಾ ಮಸೂರಿ ಅಕ್ಕಿನಾ ಉಣಬಡಿಸಬೇಕೆಂದು ಆಗ್ರಹಿಸಿದ್ದಾರೆ.
ಅನುಮಾನಕ್ಕೆ ಎಡೆ: ಪರಿಶಿಷ್ಟ ಪಂಗಡ ಸಮುದಾಯದ ವಿದ್ಯಾರ್ಥಿಗಳಿಗೆ ಉಚಿವ ಹಾಸ್ಟೆಲ್ ಸೌಲಭ್ಯ ಕಲ್ಪಿಸಲಾಗಿದೆ. ಆದರೆ, ಈ ಹಾಸ್ಟೆಲ್ ನಲ್ಲಿ ತಂಗಿರುವ ಪ್ರತಿಯೊಬ್ಬ ವಿದ್ಯಾರ್ಥಿ ಗಳು ಬಿಪಿಎಲ್ ಕಾರ್ಡುದಾರರಾಗಿದ್ದು, ಪ್ರತಿತಿಂಗಳು ಅವರ ಕುಟುಂಬ ಸದಸ್ಯರು ಪಡಿತರ ಅಕ್ಕಿಯನ್ನು ಖರೀದಿಸುತ್ತಾರೆ. ಅವರವರ ಮನೆಗಳಲ್ಲಿ ಸೋನಾ ಮಸೂರಿ ಅಕ್ಕಿಯನ್ನೇ ಸೇವನೆ ಮಾಡೋದಾದ್ರೆ, ಪಡಿತರ ಅಕ್ಕಿ ಏನಾಗುತ್ತೆ. ಅದು ಯಾರ ಮಡಿಲಿಗೆ ಸೇರುತ್ತೆ. ಸೋನಾ ಮಸೂರಿ ಅಕ್ಕಿಯನ್ನ ತಿನ್ನೋರೆಲ್ಲಾ ಉಳ್ಳವರಂತಾ ಹೇಳಲಾಗುತ್ತೆ. ಹಾಗಾದ್ರೆ ಈ ಹಾಸ್ಟೆಲ್ ನಲ್ಲಿರುವ ವಿದ್ಯಾರ್ಥಿಗಳು ಬಡತನ ರೇಖೆಗಿಂತಲೂ ಕೆಳಗಿರುವವರಾ ಎಂಬುದನ್ನು ಅಧಿಕಾರವರ್ಗ ಪರಿಶೀಲನೆ ನಡೆಸಿ ಹಾಸ್ಟೆಲ್ ಸೌಲಭ್ಯವನ್ನು ಕಲ್ಪಿಸಿಕೊಡಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:KN_BLY_2_ST_HOSTEL_STUDENTS_PROTEST_VISUALS_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.