ETV Bharat / state

ಗಣಿ ನಾಡಿನಲ್ಲಿ ಕೈ ಕೊಟ್ಟ ಮುಂಗಾರು: ಚಿಗುರೊಡೆಯದ ಬಿತ್ತನೆ ಕಾರ್ಯ! - undefined

ಸತತ ಮೂರ್ನಾಲ್ಕು ವರ್ಷಗಳ ಕಾಲ ಈ ಜಿಲ್ಲೆಯಲ್ಲಿ ಭೀಕರ ಬರದ ಕರಿನೆರಳು ಆವರಿಸಿದೆ. ಈ ಬಾರಿಯೂ ಕೂಡ ಮುಂಗಾರು ಹಂಗಾಮಿನ ಮಳೆ ಅಷ್ಟಕ್ಕಷ್ಟೇ ಇದೆ. ಇದರಿಂದ ರೈತರು ಕಂಗಾಲಾಗಿದ್ದಾರೆ.

ಗಣಿನಾಡಿನಲ್ಲಿ ಕೈಕೊಟ್ಟ ಮುಂಗಾರು
author img

By

Published : Jul 13, 2019, 2:06 PM IST

ಬಳ್ಳಾರಿ: ಗಣಿ ನಾಡು ಬಳ್ಳಾರಿ ಜಿಲ್ಲೆಯಾದ್ಯಂತ ವಾಡಿಕೆಯ ಮುಂಗಾರು ಹಂಗಾಮಿನ ಮಳೆ ಸುರಿಯದ ಕಾರಣ ಈವರೆಗೂ ಬಿತ್ತನೆ ಕಾರ್ಯ ಮಾತ್ರ ಚಿಗುರೊಡೆದಿಲ್ಲ.

ಸತತ ಮೂರ್ನಾಲ್ಕು ವರ್ಷಗಳ ಕಾಲ ಈ ಜಿಲ್ಲೆಯಲ್ಲಿ ಭೀಕರ ಬರದ ಕರಿ ನೆರಳು ಆವರಿಸಿದೆ. ಈ ಬಾರಿಯೂ ಕೂಡ ಮುಂಗಾರು ಹಂಗಾಮಿನ ಮಳೆ ಅಷ್ಟಕ್ಕಷ್ಟೇ ಇದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಜೂನ್ ತಿಂಗಳಾಂತ್ಯಕ್ಕೆ ನಿರೀಕ್ಷಿತ ಪ್ರಮಾಣದ ಮಳೆಯು ಸುರಿದಿಲ್ಲ. ಹಾಗಾಗಿ, ಬಿತ್ತನೆ ಕಾರ್ಯದ ಚಟುವಟಿಕೆಯೇ ಇನ್ನೂ ಶುರುವಾಗಿಲ್ಲ. ಕಳೆದ ಬಾರಿ ವಾಡಿಕೆ ಮಳೆ ಸುರಿಯದಿದ್ದರೂ ತುಂಗಭದ್ರಾ ಜಲಾಶಯ ಭರ್ತಿಯಾಗಿತ್ತು. ಹೀಗಾಗಿ, ಬಿತ್ತನೆ ಕಾರ್ಯ ಚಟುವಟಿಕೆ ಚಿಗುರೊಡೆದಿತ್ತು‌.

ಈ ಬಾರಿ ಜಲಾಶಯದಲ್ಲಿ ನೀರೂ ಇಲ್ಲ. ಬಿತ್ತನೆ ಕಾರ್ಯವೂ ಶುರುವಾಗಿಲ್ಲ. ಅದರಿಂದ ಸಣ್ಣ, ಅತೀ ಸಣ್ಣ ರೈತರು ಈವರೆಗೂ ಬಿತ್ತನೆ ಬೀಜ ಖರೀದಿಗೂ‌ ಮುಂದಾಗಿಲ್ಲ. ಜಿಲ್ಲೆಯಲ್ಲಿ ಮಳೆಯಾಶ್ರಿತ ಭೂಮಿ ಜಾಸ್ತಿಯಾಗಿದ್ದು, ವರುಣನ ಬರುವಿಕೆಗೆ ರೈತರು ಆಕಾಶದತ್ತ ಮುಖ ಮಾಡಿ ತಲೆಯ ಮೇಲೆ ಕೈ ಇಟ್ಟು ಕುಳಿತಿದ್ದಾರೆ.

ಗಣಿ ನಾಡಿನಲ್ಲಿ ಕೈ ಕೊಟ್ಟ ಮುಂಗಾರು

ಕಂಗಾಲಾದ ರೈತರು: ಒಂದು ಅಥವಾ ಎರಡ್ಮೂರು ಎಕರೆ ಭೂಮಿಯನ್ನು ಹೊಂದಿರುವ ರೈತಾಪಿ ವರ್ಗವು ಭೂಮಿಯನ್ನು ಹದ ಮಾಡಿಕೊಂಡು ಕಳೆ ತೆಗೆದು ಹಸನು ಮಾಡಿಕೊಂಡಿದ್ದಾರೆ. ಅಲ್ಲದೇ, ಹೊಲಗಳ ಬದುವಿನಂಚಿನಲ್ಲಿರುವ ಸಣ್ಣ ಸಣ್ಣ ಕಾಲುವೆಗಳ ಶುಚಿತ್ವ ಕಾರ್ಯಕ್ಕೆ ಮುಂದಾಗಿದ್ದಾರೆ. ಜೂನ್ ಮೊದಲ ವಾರದಲ್ಲಿ ಈ ಮುಂಗಾರು ಹಂಗಾಮಿನ ಮಳೆ ಆರಂಭವಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿದಿದೆ. ಜೋರಾದ ಮಳೆ ಮಾತ್ರ ಈವರೆಗೂ ಸುರಿದಿಲ್ಲ. ಇದರಿಂದ ಗಣಿ ನಾಡಿನ ರೈತಾಪಿ ವರ್ಗ ತೀವ್ರ ಕಂಗಾಲಾಗಿದೆ.

Intro:ಗಣಿನಾಡಿನಲ್ಲಿ ಕೈಕೊಟ್ಟ ಮುಂಗಾರು: ಚಿಗುರೊಡೆಯದ ಬಿತ್ತನೆಕಾರ್ಯ!
ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆಯಾದ್ಯಂತ ವಾಡಿಕೆಯ ಮುಂಗಾರು ಹಂಗಾಮಿನ ಮಳೆ ಸುರಿಯದ ಕಾರಣ ಈವರೆಗೂ ಬಿತ್ತನೆಕಾರ್ಯ ಮಾತ್ರ ಚಿಗುರೊಡೆದಿಲ್ಲ.
ಸತತ ಮೂರ್ನಾಲ್ಕು ವರ್ಷಗಳಕಾಲ ಈ ಜಿಲ್ಲೆಯಲ್ಲಿ ಭೀಕರ ಬರದ ಕರಿನೆರಳು ಆವರಿಸಿದೆ. ಈ ಬಾರಿಯೂ ಕೂಡ ಮುಂಗಾರು ಹಂಗಾಮಿನ ಮಳೆ ಅಷ್ಟಕಷ್ಟೇ ಇದೆ. ಇದರಿಂದ ರೈತರು ಕಂಗಾಲಾಗಿದ್ದಾರೆ. ಜೂನ್ ತಿಂಗಳಾಂತ್ಯಕ್ಕೆ ನಿರೀಕ್ಷಿತ ಪ್ರಮಾಣದ ಮಳೆಯು ಸುರಿದಿಲ್ಲ. ಆಗಾಗಿ, ಬಿತ್ತನೆಕಾರ್ಯದ ಚಟುವಟಿಕೆಯೇ ಇನ್ನೂ ಶುರುವಾಗಿಲ್ಲ. ಕಳೆದ ಬಾರಿ ವಾಡಿಕೆ ಮಳೆ ಸುರಿಯದಿದ್ದರೂ, ತುಂಗಭದ್ರಾ ಜಲಾಶಯಕ್ಕೆ ಭರ್ತಿಯಾಗಿತ್ತು. ಹೀಗಾಗಿ, ಬಿತ್ತನೆಕಾರ್ಯ ಚಟುವಟಿಕೆ ಚಿಗುರೊಡೆದಿತ್ತು‌. ಈ ಬಾರಿ ಜಲಾಶಯದಲ್ಲಿ ನೀರೂ ಇಲ್ಲ. ಬಿತ್ತನೆಕಾರ್ಯವೂ ಶುರುವಾಗಿಲ್ಲ. ಅದರಿಂದ ಸಣ್ಣ, ಅತೀ
ಸಣ್ಣ ರೈತರು ಈವರೆಗೂ ಬಿತ್ತನೆ ಬೀಜ ಖರೀದಿಗೂ‌ ಮುಂದಾಗಿಲ್ಲ. ಜಿಲ್ಲೆಯಲ್ಲಿ ಮಳೆಯಾಶ್ರಿತ ಭೂಮಿ ಜಾಸ್ತಿಯಿದೆ. ವರುಣರಾಯನ ಬರುವಿಕೆಗೆ ಪ್ರಾರ್ಥಿಸಿ ಆಕಾಶದತ್ತ ಮುಖಮಾಡಿ ತಲೆಯ ಮೇಲೆ ಕೈ ಇಟ್ಟು
ಕೊಂಡು ಕುಳಿತಿದ್ದಾರೆ.
ಕಂಗಾಲಾದ ರೈತರು: ಒಂದು ಅಥವಾ ಎರಡ್ಮೂರು ಎಕರೆ ಭೂಮಿಯನ್ನು ಹೊಂದಿರುವ ರೈತಾಪಿ ವರ್ಗವು ಭೂಮಿಯನ್ನು ಹದಮಾಡಿಕೊಂಡು ಕಳೆ ತೆಗೆದು ಹಸನು ಮಾಡಿಕೊಂಡಿದ್ದಾರೆ. ಅಲ್ಲದೇ, ಹೊಲಗಳ ಬದುವಿನಂಚಿನಲ್ಲಿರುವ ಸಣ್ಣ- ಸಣ್ಣ ಕಾಲುವೆಗಳ ಶುಚಿತ್ವಕಾರ್ಯಕ್ಕೆ ಮುಂದಾಗಿದ್ದಾರೆ. ಜೂನ್ ಮೊದಲ ವಾರದಲ್ಲಿ ಈ ಮುಂಗಾರು ಹಂಗಾಮಿನ ಮಳೆ ಆರಂಭವಾಗಿದ್ದು, ಈವರೆಗೂ ಜಿಲ್ಲೆಯಲ್ಲಿ ಸಾಧಾರಣ ಮಳೆ ಸುರಿದಿದೆ. ಜೋರಾದ ಮಳೆ ಮಾತ್ರ ಈವರೆಗೂ ಸುರಿದಿಲ್ಲ. ಇದರಿಂದ ಗಣಿನಾಡಿನ ರೈತಾಪಿವರ್ಗ ತೀವ್ರ ಕಂಗಾಲಾಗಿದೆ.

Body:ಬಳ್ಳಾರಿ ನಗರ ಹೊರವಲಯದ ಬಿ.ಗೋನಾಳು ವ್ಯಾಪ್ತಿಯಲ್ಲಿ ಬರುವ ಭೂಮಿಯನ್ನು ಟ್ರ್ಯಾಕ್ಟರ್ ಮತ್ತು ಜೋಡೆತ್ತಿನಿಂದ ರಂಟೆ, ಕುಂಟೆ ಹೊಡೆಯೋ ಮುಖೇನ ಭೂಮಿಯನ್ನು ಹದ
ಮಾಡಲಾಗುತ್ತಿದೆ. ಹೊಲಗಳಲ್ಲಿನ ಕಸ, ಕಡ್ಡಿಯನ್ನು ತೆಗೆದು ಹಾಕಿ, ಬಿತ್ತನೆಕಾರ್ಯಕ್ಕೆ ಸಕಲ ತಯಾರಿ ಮಾಡಿಕೊಳ್ಳುವ ದೃಶ್ಯವು ಸಾಮಾನ್ಯವಾಗಿ ಬಿಟ್ಟಿದೆ. ಆದ್ರೆ, ಬಿತ್ತನೆಕಾರ್ಯಕ್ಕೆ ಚಾಲನೆ ದೊರೆತಿಲ್ಲ. ಮಳೆಯ ಕೊರತೆಯೇ ಎದ್ದುಕಾಣುತ್ತಿದೆ.
ಬಿ.ಗೋನಾಳು ಕೃಷಿ ಕಾರ್ಮಿಕ ಮಹಿಳೆ ಚೌಡಮ್ಮ ಮಾತನಾಡಿ, ಕಳೆದೊಂದು ವಾರದಿಂದ ಹೊಲಗಳಲ್ಲಿ ಕೃಷಿ ಚಟುವಟಿಕೆ ಮಾಡಲಾಗುತ್ತೆ. ಹತ್ತಿ ಮತ್ತು ಕಡ್ಲೆ ಬೆಳೆಯನ್ನು ಬೆಳೆಯುವ ಗುರಿಯನ್ನು ಹೊಂದಲಾಗಿದೆ. ಕೇವಲ ಒಂದೂವರೆ ಎಕರೆ ಭೂಮಿಯನ್ನು ಮಾತ್ರ ನಮ್ಮ ಕುಟುಂಬ ಹೊಂದಿದೆಯಾದ್ರೂ ಮತ್ತೆರಡು ಎಕರೆ ಭೂಮಿಯನ್ನು ಸಾಗುವಳಿ ರೂಪದಲ್ಲಿ ಬಿತ್ತನೆ ಕಾರ್ಯ ಮಾಡಲು ಮುಂದಾಗಿದ್ದು, ಈ ವರುಣನ ಮುನಿಸಿ ನಿಂದ ಬಿತ್ತನೆಕಾರ್ಯ ಮಾಡಲು ನಮಗೆ ಬೇಸರ ತಂದಿದೆ. ತುಂಗಭದ್ರಾ ಜಲಾಶಯ ಭರ್ತಿಯಾಗದ ಕಾರಣ, ಕಾಲುವೆ ನೀರನ್ನೂ ಸಹ ನೆಚ್ಚಿಕೊಳ್ಳಲಾಗದಂತಹ ಸ್ಥಿತಿ ನಿರ್ಮಾಣ ಆಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ನಾನಾ ತಾಲೂಕಿನಲ್ಲಿ ಈವರೆಗೆ ಸುರಿದ ಸಾಧಾರಣ ಮಳೆಯ ವಿವರ ಇಂತಿದೆ. ಬಳ್ಳಾರಿಯಲ್ಲಿ 12.8 ಮಿ.ಮೀ, ಹಡಗಲಿಯಲ್ಲಿ 45.7 ಮಿ.ಮೀ, ಹೆಚ್ ಬಿಹಳ್ಳಿಯಲ್ಲಿ 31.0 ಮಿ.ಮೀ, ಹೊಸಪೇಟೆಯಲ್ಲಿ 15.3 ಮಿ.ಮೀ, ಕೂಡ್ಲಿಗಿಯಲ್ಲಿ 32.6 ಮಿ.ಮೀ, ಸಂಡೂರಿನಲ್ಲಿ 56.8 ಮಿ.ಮೀ, ಸಿರುಗುಪ್ಪಾ ದಲ್ಲಿ 17.0 ಮಿ.ಮೀ, ಹರಪನಹಳ್ಳಿಯಲ್ಲಿ 62.0 ಮಿಲಿ ಮೀಟರ್ ನಷ್ಟು ಮಳೆ ಸುರಿದಿದೆ. ಇದು ಕೇವಲ ಜುಲೈ ತಿಂಗಳಲ್ಲಿ ಮಾತ್ರ ಇಷ್ಟೊಂದು ಪ್ರಮಾಣದ ಮಳೆ ಸುರಿದಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

Conclusion:ಪವರ್ ಡೈರೆಕ್ಟರ್ ನಲ್ಲಿ ಈ ವಿಡಿಯೊ ಕಳಿಸಿರುವೆ. ಗಮನಿಸಿರಿ.
KN_BLY_01_KRUSHI_ACTIVITIES_NOT_START_VISUALS_7203310

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.