ETV Bharat / state

ದಯವಿಟ್ಟು ನಾಪತ್ತೆಯಾದ ಮಗನ ಹುಡುಕಿಕೊಡಿ: ತಂದೆಯ ರೋದನೆ

ಬಳ್ಳಾರಿಯ ಕುದುರೆ ಗಾಳಪ್ಪ ಬೀದಿಯ ನಿವಾಸಿ ಗೋಪಾಲ್ ಎಂಬುವರ ಪುತ್ರ ವಿಜಯ ಕುಮಾರ್​ ಕಾಣೆಯಾದ ಉದ್ಯಮಿ. ನವೆಂಬರ್ 3ರಂದು ಮನೆಯಿಂದ ಕಾರಿನೊಳಗೆ ತೆರಳಿದ್ದ ಈತ ಈವರೆಗೂ ಪತ್ತೆಯಾಗಿಲ್ಲ.‌ ಪೋನ್ ಕರೆಗೂ ಪ್ರತಿಕ್ರಿಯೆ ಇಲ್ಲದಿದ್ದರಿಂದ ಕುಟುಂಬ ಸದಸ್ಯರಲ್ಲಿ ಅನುಮಾನ - ಆತಂಕ ಮನೆಮಾಡಿದೆ.

ನಾಪತ್ತೆ
ನಾಪತ್ತೆ
author img

By

Published : Nov 16, 2020, 11:47 AM IST

Updated : Nov 16, 2020, 12:51 PM IST

ಬಳ್ಳಾರಿ: ನಗರದ ಡಾ.ರಾಜ್ ರಸ್ತೆಯಲ್ಲಿರುವ ಸೂಪರ್ ಮಾರ್ಕೆಟ್​​​​ನ ಉದ್ಯಮಿಯೊಬ್ಬರು ಕಳೆದ 10 ದಿನಗಳ ಹಿಂದೆ ಅನುಮಾನಾಸ್ಪದವಾಗಿ ನಾಪತ್ತೆಯಾಗಿದ್ದು, ಈವರೆಗೂ ಪತ್ತೆಯಾಗಿಲ್ಲ. ಪೊಲೀಸರಿಂದಲೂ ಶೋಧ ಕಾರ್ಯ ನಡೆಯುತ್ತಲೇ ಇದೆ. ಆದರೆ, ಇನ್ನೂ ಮಗನ ಸುಳಿವಿಲ್ಲ ಎಂದು ತಂದೆಯೊಬ್ಬರು ತಮ್ಮ ಅಳಲು ತೋಡಿ ಕೊಂಡಿದ್ದಾರೆ.

ಬಳ್ಳಾರಿಯ ಕುದುರೆ ಗಾಳಪ್ಪ ಬೀದಿಯ ನಿವಾಸಿ ಗೋಪಾಲ್ ಎಂಬುವರ ಪುತ್ರ ವಿಜಯ ಕುಮಾರ್​ ಕಾಣೆಯಾದ ಉದ್ಯಮಿ. ನವೆಂಬರ್ 3ರಂದು ಮನೆಯಿಂದ ಕಾರಿನಲ್ಲಿ ತೆರಳಿದ್ದ ಈತ ಈವರೆಗೂ ಪತ್ತೆಯಾಗಿಲ್ಲ.‌ ಫೋನ್​​ ಕರೆಗೂ ಪ್ರತಿಕ್ರಿಯೆ ಇಲ್ಲದಿದ್ದರಿಂದ ಕುಟುಂಬ ಸದಸ್ಯರಲ್ಲಿ ಅನುಮಾನ - ಆತಂಕ ಮನೆ ಮಾಡಿದೆ.

ಮಗನನ್ನು ಹುಡುಕಿಕೊಡಿ ಎಂದು ತಂದೆಯ ರೋದನೆ

ಈ ಸಂಬಂಧ ನವೆಂಬರ್ 4 ರಂದು ಬ್ರೂಸ್ ಪೇಟೆ ಪೊಲೀಸ್ ಠಾಣೆಯಲ್ಲಿ ಪೋಷಕರು​ ನಾಪತ್ತೆ ಕುರಿತು ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪರಿಶೀಲನೆ ನಡೆಸಿದ್ದು ಬಳ್ಳಾರಿ ಹೊರವಲಯದ ಅಲ್ಲೀಪುರದ ಉಪಕಾಲುವೆ ಬಳಿ ಕಾರು ನಿಲ್ಲಿಸಿರುವುದು ಪತ್ತೆಯಾಗಿದೆ. ಆದರೆ ವಿಜಯ್​ಕುಮಾರ್​ ಸುಳಿವಿಲ್ಲ. ಉಪ ಕಾಲುವೆಯಲ್ಲಿ ಬಿದ್ದಿರಬಹುದೆಂಬ ಸಂಶಯದಿಂದ ಆಂಧ್ರದ ಗಡಿ ಭಾಗವಾದ ಕಣೇಕಲ್ ಕಾಲುವೆಯಲ್ಲಿ ಹುಡುಕಾಟ ನಡೆಸಿದ್ದಾರೆ.

Last Updated : Nov 16, 2020, 12:51 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.