ETV Bharat / state

ಎರಡು ಪ್ರಮುಖ ವಿ.ವಿಗಳಲ್ಲಿ ನೂತನ ಕುಲಪತಿಗಳ ಅಧಿಕಾರ ಸ್ವೀಕಾರ

ಶುಕ್ರವಾರದಂದು ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಪ್ರೊ. ವೀರಭದ್ರಪ್ಪ ಹಾಗೆಯೇ ಬಳ್ಳಾರಿ ನಗರ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಸಿದ್ದು ಅಲಗೂರ್ ಅಧಿಕಾರ ಸ್ವೀಕರಿಸಿದ್ದಾರೆ.

Authorization of new Chancellors in two major VVs, ಎರಡು ಪ್ರಮುಖ ವಿ.ವಿಗಳಲ್ಲಿ ನೂತನ ಕುಲಪತಿಗಳ ಅಧಿಕಾರ ಸ್ವೀಕಾರ
author img

By

Published : Aug 3, 2019, 10:51 AM IST

ಬಳ್ಳಾರಿ-ಶಿವಮೊಗ್ಗ: ಬಳ್ಳಾರಿ ನಗರ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಪ್ರೊ.ಸಿದ್ದು ಅಲಗೂರ್ ಮತ್ತು, ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಪ್ರೊ. ವೀರಭದ್ರಪ್ಪ ಶುಕ್ರವಾರ ಅಧಿಕಾರ ಸ್ವೀಕರಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ತೇರದಾಳದವರಾದ ಪ್ರೊ. ಸಿದ್ದು ಅಲಗೂರು, ಮೈಸೂರು ವಿಶ್ವವಿದ್ಯಾಲಯಲ್ಲಿ ಎಂಜಿನಿಯರಿಂಗ್ ಪದವಿ, ಅಲಹಾಬಾದಿನ ಮೋತಿಲಾಲ್
ನೆಹರು ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ. ಧಾರವಾಡ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉದ್ಯೋಗ ಆರಂಭಿಸಿದ ಅವರು, ಹುಬ್ಬಳ್ಳಿಯ ಕೆಎಲ್‍ಇ ತಾಂತ್ರಿಕ ವಿಶ್ವ ವಿದ್ಯಾಲಯದ ಕಾಲೇಜುಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡು, ಬಳಿಕ ಕುಲಸಚಿವರಾಗಿದ್ದರು.

ಸದ್ಯ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿಯಾಗಿ ಅಧಿಕಾರ ಸ್ವೀಕರಿಸಿದ್ದು, ಹಂಗಾಮಿ ಕುಲಪತಿಯಾಗಿದ್ದ ಪ್ರೊ.ಕೆ.ಆರ್‌.ವೇಣುಗೋಪಾಲ
ರೆಡ್ಡಿಯವರು ಹೂಗುಚ್ಛ ನೀಡುವ ಮುಖೇನ ಪ್ರೊ.ಸಿದ್ದು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.

ಇನ್ನು ಕುವೆಂಪು ವಿಶ್ವವಿದ್ಯಾಲಯದ ನೂತನ ಕುಲಪತಿಗಳಾಗಿ ಪ್ರೊ. ವೀರಭದ್ರಪ್ಪ ಅಧಿಕಾರ ಸ್ವೀಕರಿಸಿದ್ದು, ರಾಷ್ಟ್ರಕವಿ ಕುವೆಂಪು ಅವರ ಮನುಜಮತ, ವಿಶ್ವಪಥ, ಸಮನ್ವಯ ಸೇರಿದಂತೆ ಪಂಚಶೀಲ ತತ್ವಗಳನ್ನು ಆಧರಿಸಿ ಕಾರ್ಯನಿರ್ವಹಿಸುವ ಉದ್ದೇಶವಿದೆ ಎಂದರು. ಕುವೆಂಪುರವರ ಪಂಚ ಶೀಲ‌ ತತ್ವದ ಮೇಲೆ ದೇಶದ ಟಾಪ್ 50 ವಿ.ವಿ ಗಳಲ್ಲಿ ಸ್ಥಾನ ಪಡೆಯುವ ಗುರಿಯನ್ನು‌ ಹೊಂದಿರುವಿದಾಗಿ ವಿಶ್ವಾಸ ವ್ಯಕ್ತಪಡಿಸಿದರು.

ಅಷ್ಟೇ ಅಲ್ಲದೇ, ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಸೇರಿದಂತೆ ವಿವಿಧ ರೀತಿಯ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಗುರಿ ಹೊಂದಲಾಗಿದೆ. ಗ್ರಾಮೀಣ ಭಾಗದ ಪ್ರತಿ ಪದವಿ ವಿದ್ಯಾರ್ಥಿಗೂ ಉನ್ನತ ಶಿಕ್ಷಣವನ್ನು ನೀಡುವ ಮುಖ್ಯಗುರಿಯನ್ನು ವಿವಿಯು ಹೊಂದಲು ಬಯಸುತ್ತದೆ. ಅದೇ ರೀತಿ ವಿಶ್ವವಿದ್ಯಾಲಯದಲ್ಲಿ ಸಮರ್ಥ ಸಿಬ್ಬಂದಿ ವರ್ಗವಿದ್ದು ಸುಲಲಿತ ಆಡಳಿತ ಸಾಧ್ಯವಿದೆ ಎಂದರು. ವಿಶ್ವವಿದ್ಯಾಲಯದ ಈ ಹಿಂದಿನ ಕಾರ್ಯಸಾಧನೆಗಳು ಬಹಳ ಎತ್ತರದಲ್ಲಿದ್ದು, ಆ ಗುಣಮಟ್ಟವನ್ನು ಮುಂದುವರೆಸುವ ಮತ್ತು ಇನ್ನಷ್ಟು ಉತ್ಕೃಷ್ಟಗೊಳಿಸುವ ಸವಾಲು ನಮ್ಮ ಮೇಲಿದೆಯೆಂದು ಶಂಕರಘಟ್ಟದ ಪ್ರೊ. ಎಸ್.ಪಿ. ಹಿರೇಮಠ ಸಭಾಂಗಣದಲ್ಲಿ ಎಲ್ಲರ ಸಹಕಾರವನ್ನು ಕೋರಿದರು.

Intro:ವಿಎಸ್ ಕೆ ವಿವಿಯ ನೂತನ ಕುಲಪತಿಯಾಗಿ ಪ್ರೊ.ಸಿದ್ದು ಅಲಗೂರ್ ಅಧಿಕಾರ ಸ್ವೀಕಾರ
ಬಳ್ಳಾರಿ: ನಗರ ಹೊರವಲಯದ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ನೂತನ ಕುಲಪತಿ
ಆಗಿ ಪ್ರೊ.ಸಿದ್ದು ಅಲಗೂರ್ ಅವರಿಂದು ಅಧಿಕಾರ ಸ್ವೀಕರಿಸಿ
ದ್ದಾರೆ.
ಹಂಗಾಮಿ ಕುಲಪತಿಯಾಗಿದ್ದ ಪ್ರೊ.ಕೆ.ಆರ್‌.ವೇಣುಗೋಪಾಲ
ರೆಡ್ಡಿಯವರು ಹೂಗುಚ್ಛ ನೀಡುವ ಮುಖೇನ ಪ್ರೊ.ಸಿದ್ದು ಅವರನ್ನು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಪ್ರೊ.ಕೆ.ರಮೇಶ, ಸಿಂಡಿಕೇಟ್ ಸದಸ್ಯರಾದ ದೊಡ್ಡಬಸವನಗೌಡ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ನರಸಿಂಹ ರಾಯಚೂರು, ರಾಜು ಚಿಕ್ಕನಗೌಡರ, ಮಾಜಿ ಸದಸ್ಯರಾದ ವಿಜಯ ಕುಚನೂರೆ, ಕಿರಣ್ ಉಪಸ್ಥಿತರಿದ್ದರು.
Body:ಪರಿಚಯ: ಬಾಗಲಕೋಟೆ ಜಿಲ್ಲೆಯ ತೇರದಾಳದವರಾದ ಪ್ರೊ. ಸಿದ್ದು ಅಲಗೂರು, ಮೈಸೂರು ವಿಶ್ವವಿದ್ಯಾಲಯಲ್ಲಿ ಎಂಜಿನಿಯ ರಿಂಗ್ ಪದವಿ, ಅಲಹಾಬಾದಿನ ಮೋತಿಲಾಲ್
ನೆಹರು ರಾಷ್ಟ್ರೀಯ ತಾಂತ್ರಿಕ ಸಂಸ್ಥೆಯಲ್ಲಿ ಸ್ನಾತಕೋತ್ತರ ಪದವಿ ಹಾಗೂ ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಡಾಕ್ಟರೇಟ್‌ ಪದವಿ ಪಡೆದಿದ್ದಾರೆ.
ಧಾರವಾಡ ಎಸ್‌ಡಿಎಂ ಎಂಜಿನಿಯರಿಂಗ್‌ ಕಾಲೇಜಿನಲ್ಲಿ ಉದ್ಯೋಗ ಆರಂಭಿಸಿದ ಅವರು, ಹುಬ್ಬಳ್ಳಿಯ ಕೆಎಲ್‍ಇ ತಾಂತ್ರಿಕ ವಿಶ್ವ ವಿದ್ಯಾಲಯದ ಕಾಲೇಜುಗಳಲ್ಲೂ ಕಾರ್ಯ ನಿರ್ವಹಿಸಿದ್ದಾರೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕಂಪ್ಯೂಟರ್ ವಿಜ್ಞಾನ ವಿಭಾಗದಲ್ಲಿ ಪ್ರಾಧ್ಯಾಪಕರಾಗಿ ನೇಮಕಗೊಂಡು, ಬಳಿಕ ಕುಲಸಚಿವರಾಗಿದ್ದರು.

ವರದಿ: ವೀರೇಶ ಕಟ್ಟೆಮ್ಯಾಗಳ, ಬಳ್ಳಾರಿ.

 Conclusion:KN_BLY_5_VSK_UNIVERSITY_NEW_VC_7203310
ETV Bharat Logo

Copyright © 2024 Ushodaya Enterprises Pvt. Ltd., All Rights Reserved.