ಹೊಸಪೇಟೆ: ಕೊರೊನಾ ಎಫೆಕ್ಟ್ನಿಂದ ಆಟೊಮೊಬೈಲ್ ವಲಯದ ಲಘು ಮತ್ತು ಬೃಹತ್ ಗಾತ್ರದ ವಾಣಿಜ್ಯ ವಾಹನಗಳ ತಯಾರಿಕಾ ಕಂಪನಿಯಾದ ಅಶೋಕ್ ಲೇಲ್ಯಾಂಡ್ ಸಂಸ್ಥೆಗೆ ಸಂಕಷ್ಟ ಎದುರಾಗಿದ್ದು, ನೌಕರರು ಕೆಲಸವಿಲ್ಲದೇ ಆರ್ಥಿಕ ಮುಗ್ಗಟ್ಟಿಗೆ ಒಳಗಾಗಿದ್ದಾರೆ.
ನಗರದ ಹೊರವಲಯದ ಅಶೋಕ್ ಲೇಲ್ಯಾಂಡ್ ಕಂಪನಿಯನ್ನು ಕಳೆದ ಮಾರ್ಚ್ನಿಂದ ಮುಚ್ಚಲಾಗಿದ್ದು, ಜನವರಿ ತಿಂಗಳಿನಿಂದ ಸುಮಾರು 50 ಕ್ಕೂ ಜನರಿಗೆ ವೇತನವಾಗಿಲ್ಲ.
ಈ ಕಂಪನಿಯಲ್ಲಿ ಕಳೆದ ಹತ್ತಾರು ವರ್ಷಗಳಿಂದ ಕೆಲಸ ಮಾಡುತ್ತಿರುವ ನೌಕರರ ಪರಿಸ್ಥಿತಿ ಹೇಳ ತೀರದಾಗಿದೆ. ಕೆಲಸಕ್ಕೆ ಬನ್ನಿ ಎಂದು ಹೇಳುತ್ತಿದ್ದಾರೆ. ಆದರೆ ಸಂಸ್ಥೆಯನ್ನು ಮಾತ್ರ ತೆರೆದಿಲ್ಲ ಎನ್ನುತ್ತಾರೆ ನೌಕರರು. ಈ ಕುರಿತು ಕಾರ್ಮಿಕ ಇಲಾಖೆಗೆ ನೌಕರರು ದೂರು ನೀಡಿದ್ದಾರೆ.