ಹೊಸಪೇಟೆ: ಹಂಪಿ ಉತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ವಿಜಯನಗರ ಕಾಲದ ವೈಭವವನ್ನು ಧ್ವನಿ ಮತ್ತು ಬೆಳಕಿನ ಮೂಲಕ ಪ್ರಸ್ತುತ ಪಡಿಸುವ ವಿಷೇಷ ಕಾರ್ಯಕ್ರಮದ ತಾಲೀಮು ನೋಡುಗರ ಗಮನ ಸೆಳೆಯಿತು.ನ
ತಾಲೂಕಿನ ಐತಿಹಾಸಿಕ ಹಂಪಿಯ ಸಾಲು ಮಂಟಪ ಹಾಗೂ ಗಜ ಶಾಲೆಯ ಧ್ವನಿ ಬೆಳಕು ವೇದಿಕೆ ಮೇಲೆ ಸುಮಾರು 110ಕ್ಕೂ ಹೆಚ್ಚು ಕಲಾವಿದರಿಂದ ಪ್ರದರ್ಶನ ನೀಡಿದರು. ವೇದಿಕೆಯಲ್ಲಿ ಗ್ರಾಮೀಣ ಸೊಬಗಿನ ಕಲೆಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗಿದ್ದು, ಎಲ್ಲ ಕಲಾವಿದರು ಸ್ಥಳೀಯರಿದ್ದಾರೆ. ಈ ಧ್ವನಿ ಮತ್ತು ಬೆಳಕಿನ ಪ್ರದರ್ಶನ ಹಂಪಿಯ ಗತಕಾಲದ ಭವ್ಯ ಪರಂಪರೆಯನ್ನು ಮರುಕಳಿಸುವಂತಿದೆ.