ಬಳ್ಳಾರಿ: ಬೈಕ್ ಕಳ್ಳತನ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ನಗರದ ಕೌಲ್ ಬಜಾರ್ ಠಾಣೆಯ ಪೊಲೀಸರು ಸೆರೆಹಿಡಿದಿದ್ದು, ಅವರಿಂದ 4.74 ಲಕ್ಷ ರೂ ಮೌಲದ್ಯದ 5 ಮೋಟರ್ ಸೈಕಲ್ ಮತ್ತು 3 ಸ್ಕೂಟರ್ಗಳನ್ನ ವಶಕ್ಕೆ ಪಡೆಯಲಾಗಿದೆ.
ಹೊಂಡಾ ಶೈನ್, ಬಜಾಜ್ ಕಂಪನಿಯ KTM Duke, ಯಮಹಾ FZ, ರಾಯಲ್ ಎನ್ ಫೀಲ್ಡ್, RX 100 ಮೋಟಾರ್ ಸೈಕಲ್ಗಳು, 2 ಆಕ್ಸಿಸ್ ಕಂಪನಿಯ ಸ್ಕೂಟರ್ ಹಾಗೂ ಒಂದು ಡಿಯೋ ಕಂಪನಿಯ ಸ್ಕೂಟರ್ ಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಕೌಲ್ ಬಜಾರ್ ಠಾಣೆಯ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ ವರ್ಗದವರು ಈ ಕಾರ್ಯಾಚರಣೆ ನಡೆಸಿ ಇಬ್ಬರು ಬೈಕ್ ಕಳ್ಳರನ್ನು ವಶಪಡಿಸಿಕೊಂಡಿದ್ದಾರೆ.