ETV Bharat / state

ಹಡಗಲಿಯಲ್ಲಿ ಪ್ರವಾಹದ ಭೀತಿ: ಮೊದ್ಲಘಟ್ಟ ಆಂಜನೇಯ ಸ್ವಾಮಿ ದೇಗುಲ ಜಲಾವೃತ

ಹೂವಿನಹಡಗಲಿ ತಾಲೂಕಿನ ಗ್ರಾಮಗಳಲ್ಲಿ ಪ್ರವಾಹ ಭೀತಿ ಎದುರಾಗಿದ್ದು, ಈಗಾಗಲೇ ಮೊದ್ಲ ಘಟ್ಟ ಆಂಜನೇಯಸ್ವಾಮಿ ದೇಗುಲ ಸಂಪೂರ್ಣ ಜಲಾವೃತವಾಗಿದೆ.

anjaneya-temple-aquatic-due-heavy-rain-fall
ಆಂಜನೇಯ ಸ್ವಾಮಿ ದೇಗುಲ ಜಲಾವೃತ
author img

By

Published : Aug 9, 2020, 5:24 PM IST

ಬಳ್ಳಾರಿ: ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ನಾನಾ ಗ್ರಾಮಗಳಲ್ಲಿ ಪ್ರವಾಹದ ಭೀತಿ ಎದುರಾಗಿದ್ದು, ಮೊದ್ಲ ಘಟ್ಟ ಆಂಜನೇಯಸ್ವಾಮಿ ದೇಗುಲವು ಸಂಪೂರ್ಣ ಜಲಾವೃತವಾಗಿದೆ. ಶನಿವಾರವಷ್ಟೇ ಈ ದೇಗುಲದಲ್ಲಿ ವಿಶೇಷ ಪೂಜಾ-ಕೈಂಕರ್ಯಗಳು ನಡೆದಿದ್ದವು.

ಆಂಜನೇಯ ಸ್ವಾಮಿ ದೇಗುಲ ಜಲಾವೃತ

ನೂರಾರು ಭಕ್ತರು ಕೂಡ ಆಂಜನೇಯ ಸ್ವಾಮಿ ದರ್ಶನ ಪಡೆದಿದ್ದರು. ನಿನ್ನೆ (ಆ.8) ಜಿಲ್ಲೆಯ ಹೂವಿನ ಹಡಗಲಿ ತಹಶೀಲ್ದಾರ್ ವಿಜಯಕುಮಾರ ಅವರು ಮೊದ್ಲಘಟ್ಟ ಆಂಜನೇಯಸ್ವಾಮಿ ದೇಗುಲಕ್ಕೆ ಭೇಟಿ ನೀಡಿ, ನದಿಪಾತ್ರದಲ್ಲಿ ಬಟ್ಟೆ ತೊಳೆಯುತ್ತಿದ್ದ ಮಹಿಳೆಯರು ಹಾಗೂ ಭಕ್ತರಿಗೆ ಪ್ರವಾಹದ ಭೀತಿಯ ಕುರಿತು ಜಾಗೃತಿ ಮೂಡಿಸಿದರು. ಇಂದು ಆಂಜನೇಯ ಸ್ವಾಮಿ ದೇಗುಲವೇ ಭಾಗಶಃ ಮುಳುಗಡೆಯಾಗಿದೆ.

ಈರುಳ್ಳಿ ಬೆಳೆಗೆ ಕೊಳೆ ರೋಗ: ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಅಂದಾಜು 400 ಹೆಕ್ಟೇರ್ ಪ್ರದೇಶದಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ವಿಪರೀತ ಮಳೆ ಸುರಿದ ಪರಿಣಾಮ ಕೆಲವೆಡೆ ಈರುಳ್ಳಿ ಬೆಳೆಗೆ ಕೊಳೆ ರೋಗ ಹರಡಿಕೊಂಡಿದೆ.‌

ಹಗರಿಬೊಮ್ಮನಹಳ್ಳಿ ತಾಲೂಕಿನ ನೆಲ್ಕುದುರಿ ಗ್ರಾಮದ ರೈತ ಮಲ್ಲಪ್ಪ ಎಂಬುವರಿಗೆ ಸಂಬಂಧಿಸಿದ ನಾಲ್ಕು ಎಕರೆಯ ಭೂಮಿಯಲ್ಲಿ ಬೆಳೆದ ಈರುಳ್ಳಿ ಬೆಳೆಗೆ ಕೊಳೆ ರೋಗ ತಗುಲಿದೆ. ಇದರಿಂದ ಸಾವಿರಾರು ರೂಪಾಯಿ ನಷ್ಟ ಅನುಭವಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.