ಹೊಸಪೇಟೆ: ಕೃಷ್ಣದೇವರಾಯರನ್ನು ನಮಗೆ ಹೋಲಿಕೆ ಮಾಡಬೇಡಿ. ಹಾಗೆ ಮಾಡುವ ಮೂಲಕ ಅವರ ಗೌರವವನ್ನು ಕಳೆಯೋದು ಬೇಡ ಎಂದು ಅರಣ್ಯ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಆನಂದ ಸಿಂಗ್ ಹೇಳಿದರು.
ನಗರದ ನ್ಯಾಯಾಲಯ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೃಷ್ಣದೇವರಾಯ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ. ಹತ್ತು ಜನ್ಮ ಹುಟ್ಟಿ ಬಂದರೂ ಅವರು ಅವರೇ, ಯಾರೂ ತಪ್ಪಾಗಿ ಭಾವಿಸಬಾರದು ಎಂದರು.
ಓದಿ : ಸರ್ಕಾರ, ಸಾರಿಗೆ ನೌಕರರ ಜಟಾಪಟಿ: ಸಿಎಂ ನಿವಾಸದಲ್ಲಿ ತುರ್ತುಸಭೆ
ವಿಜಯನಗರ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿಯಾಗುತ್ತಿವೆ. ಹೊಸಪೇಟೆಯ ಭವಿಷ್ಯ ಉಜ್ವಲವಾಗಿದೆ ಎಂದು ಹೇಳಿದರು.
2018ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮುಂದಿನ ಸಲ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳಿದ್ದೆ. ಇವತ್ತಿಗೂ ಹೇಳುತ್ತಿದ್ದೇನೆ ನಾನು ಸ್ಪರ್ಧೆ ಮಾಡುವುದಿಲ್ಲ. ಆದ್ರೆ ಜನರು ಚುನಾವಣೆ ನಿಲ್ಲಲು ಒತ್ತಾಯ ಮಾಡಿದರೇ ಮಾತ್ರ ಆಲೋಚನೆ ಮಾಡಲಾಗುವುದು ಎಂದು ಹೇಳಿದರು.