ETV Bharat / state

ಎನ್​ಐಎ ಕಚೇರಿ ವಿಚಾರ: ತೇಜಸ್ವಿ ಸೂರ್ಯ ಹೇಳಿಕೆ ಸಮರ್ಥಿಸಿಕೊಂಡ ಸಚಿವ ಆನಂದ್​ ಸಿಂಗ್ - DMF Progress Meeting in Bellary

ಬೆಂಗಳೂರು ಉಗ್ರರ ಹಬ್ ಎಂದು ತೇಜಸ್ವಿ ಸೂರ್ಯ ಹೇಳಿಲ್ಲ. ಉಗ್ರರ ದಾಳಿ ತಡೆಗಟ್ಟಲು ಎನ್​ಐಎ ಕಚೇರಿ ಸ್ಥಾಪಿಸಬೇಕೆಂದು ಹೇಳಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿಕೆಯನ್ನು ಸಚಿವ ಆನಂದ್​ ಸಿಂಗ್ ಸಮರ್ಥಿಸಿಕೊಂಡರು.

Anand Singh defended Tejasvi Surya's statement
ತೇಜಸ್ವಿ ಸೂರ್ಯ ಹೇಳಿಕೆಯನ್ನು ಸಮರ್ಥಿಸಿಕೊಂಡ ಆನಂದ್​ ಸಿಂಗ್
author img

By

Published : Sep 29, 2020, 5:19 PM IST

ಬಳ್ಳಾರಿ : ಉಗ್ರರ ಉಪಟಳ ನಿಯಂತ್ರಿಸಲು ರಾಜಧಾನಿ ಬೆಂಗಳೂರಿನಲ್ಲಿ ಎನ್​ಐಎ ಶಾಶ್ವತ ಕಚೇರಿ ಸ್ಥಾಪಿಸುವುದು ಸೂಕ್ತ ಎಂಬ ಸಂಸದ ತೇಜಸ್ವಿ ಸೂರ್ಯ ಅವರ ಹೇಳಿಕೆಗೆ ನನ್ನ ಸಹಮತ ಇದೆ ಎಂದು ಸಚಿವ ಆನಂದ್​ ಸಿಂಗ್ ಹೇಳಿದರು.

ನಗರದ ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ಖನಿಜ ನಿಧಿ ‌(ಡಿಎಂಎಫ್) ಯ ಪ್ರಗತಿ ಪರಿಶೀಲನಾ ಸಭೆ ಬಳಿಕ ಮಾತನಾಡಿ, ಬೆಂಗಳೂರು ಉಗ್ರರ ಹಬ್ ಎಂದು ತೇಜಸ್ವಿ ಸೂರ್ಯ ಹೇಳಿಲ್ಲ. ಉಗ್ರರ ದಾಳಿ ತಡೆಗಟ್ಟಲು ಎನ್​ಐಎ ಕಚೇರಿ ಸ್ಥಾಪಿಸಬೇಕು ಎಂದು ಹೇಳಿದ್ದಾರೆ ಎಂದು ತೇಜಸ್ವಿ ಸೂರ್ಯ ಹೇಳಿಕೆ ಸಮರ್ಥಿಸಿಕೊಂಡರು.

ಸಚಿವ ಆನಂದ್​ ಸಿಂಗ್

ಶಾಲೆಗಳ ಪುನಾರಂಭದ ಬಗ್ಗೆ ಮಾತನಾಡಿ, ಈ ಕೋವಿಡ್ ಸಂದರ್ಭದಲ್ಲಿ‌ ಸ್ವಷ್ಟವಾದ ನಿಲುವಿಗೆ ಬರಲು ಸಾಧ್ಯವಿಲ್ಲ. ಶಾಲೆಗಳ ಪುನಾರಂಭದ ಬಗ್ಗೆ ಎಲ್ಲರೂ ಚರ್ಚೆ ಮಾಡುತ್ತಿದ್ದಾರೆ. ನನಗೂ ಈ ಸಮಯದಲ್ಲಿ ಶಾಲೆ ಆರಂಭ ಮಾಡುವುದು ಬೇಡ ಎನಿಸುತ್ತದೆ. ನಾವೇ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಇನ್ನು ಶಾಲೆಗಳನ್ನು ತೆರೆದರೆ ಮಕ್ಕಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟ. 8 ರಿಂದ 12 ತರಗತಿಗಳು ಪ್ರಾರಂಭ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ನಮ್ಮ ಶಿಕ್ಷಣ ಸಚಿವ ಸುರೇಶ್​ ಕುಮಾರ್​ ಬುದ್ಧಿವಂತರಿದ್ದಾರೆ. ಅವರು ಏನು ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ ಎಂದು ಹೇಳಿದರು. ಸುರೇಶ್​ ಅಂಗಡಿ ಸಿಎಂ ಮಾಡಲು ಸಭೆ ನಡೆಸಿದ ಬಗ್ಗೆ ಪ್ರತಿಕ್ರಿಯಿಸಿ, ಈಗ ಅವರೇ ಇಲ್ಲ, ಹಾಗಾಗಿ ಆ ಚರ್ಚೆ ಅಪ್ರಸ್ತುತ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.