ಬಳ್ಳಾರಿ: ನಗರದ ಕುಬೇರ ಬಾರ್ ಅಂಡ್ ರೆಸ್ಟೋರೆಂಟ್ನ ಬೀಗ ಮುರಿದ ಕಳ್ಳರು, ಎರಡು ಲಕ್ಷ ಮೌಲ್ಯದ ಮದ್ಯ ಕಳ್ಳತನ ಮಾಡಿದ್ದಾರೆ.

ಸುಮಾರು ಎರಡು ಲಕ್ಷ ಮೌಲ್ಯದ ಮದ್ಯವನ್ನು ಕಳ್ಳರು ಕದ್ದಿದ್ದಾರೆ. ಒಟಿ, ಹೈವರ್ಡ್, ಬಿಪಿ ಬ್ಯ್ರಾಂಡ್ನ ಮದ್ಯವನ್ನು ಕಳ್ಳತನ ಮಾಡಿದ್ದಾರೆ. ಹೆಚ್ಚಿನ ಮೊತ್ತದ ಲಿಕ್ಕರ್ ಬಿಟ್ಟು, ಕಡಿಮೆ ಬೆಲೆಯ ಮದ್ಯ ಕಳ್ಳತನ ಮಾಡಿದ್ದಾರೆಂದು ಬಾರ್ನ ಮಾಲೀಕ ಸತ್ಯನಾರಾಯಣ ತಿಳಿಸಿದ್ದಾರೆ.

ಸಿಸಿಟಿವಿಯ ಫ್ಯೂಸ್ ಕಿತ್ತು ಕಳ್ಳತನ ಮಾಡಿದ ಹಿನ್ನೆಲೆ ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿಲ್ಲ. ಈ ಸಂಬಂಧ ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.