ಹೊಸಪೇಟೆ : ಹೊಸಪೇಟೆ ನಗರವನ್ನು ಜಿಲ್ಲಾ ಕೇಂದ್ರವಾಗಿಸಿ ವಿಜಯನಗರವನ್ನು ಜಿಲ್ಲೆಯಾಗಿ ಮಾಡುವ ಸರ್ಕಾರದ ಕ್ರಮವನ್ನು ಬೆಂಬಲಿಸಿ ನಟ ಅಜಯ್ ರಾವ್, ಕಂದಾಯ ಇಲಾಖೆ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ಈ ಸಂಬಂಧ ಅರಣ್ಯ ಸಚಿವ ಆನಂದ್ ಸಿಂಗ್ ಅವರಿಗೆ ಮಂಗಳವಾರ ಪತ್ರವನ್ನು ಸಲ್ಲಿಸಿದರು. ನಾನೊಬ್ಬ ನಟ, ನಿರ್ಮಾಪಕನಾಗಿ, ಹೊಸಪೇಟೆಯಲ್ಲಿ ಹುಟ್ಟಿ, ಬೆಳೆದಿರುವುದಕ್ಕೆ ನನಗೆ ಹೆಮ್ಮೆ ಇದೆ. ಇಲ್ಲಿ ಪ್ರವಾಸೋದ್ಯಮ, ಖನಿಜ ಸಂಪನ್ಮೂಲಗಳಿಂದ ಕೂಡಿರುವ ಶ್ರೀಮಂತ ಪ್ರದೇಶವಾಗಿದೆ.
ನಾನು ವಿಜಯನಗರವನ್ನು ಜಿಲ್ಲೆಯಾಗಿ ಮಾಡಬೇಕೆಂದು ಕಾತರನಾಗಿದ್ದೆ. ಇನ್ನು ಅಧಿಸೂಚನೆ ಹೊರಡಿಸುವುದಷ್ಟೇ ಬಾಕಿ ಇದೆ. ವಿಜಯಬಗರ ಜಿಲ್ಲೆಯಾಗಲು ನನ್ನ ಸಂಪೂರ್ಣ ಬೆಂಬಲ ಇದೆ ಎಂದು ನಟ ಅಜಯ್ ರಾವ್ ತಿಳಿಸಿದ್ದಾರೆ.