ಹೊಸಪೇಟೆ: ಕಂಪ್ಲಿ ತಾಲೂಕಿನ ದೇವಸಮುದ್ರ ಗ್ರಾಮದ ರಸಗೊಬ್ಬರ ಮಾರಾಟ ಮಳಿಗೆ ಕೃಷಿ ಅಧಿಕಾರಿ ಶ್ರೀಧರ್ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಬಳಿಕ ಮಾತನಾಡಿದ ಅವರು, ಮಾರಾಟಗಾರರು ಪಾಯಿಂಟ್ ಆಫ್ ಸೇಲ್ (ಪಿಒಎಸ್) ಯಂತ್ರದಲ್ಲಿ ನಮೂದಿಸಿ, ರೈತರಿಗೆ ರಸಗೊಬ್ಬರ ವಿತರಣೆ ಮಾಡಬೇಕು. ಆಧಾರ್ ಕಾರ್ಡ್ ಅನ್ನು ಪಡೆಯಬೇಕು. ಪಿಒಎಸ್ ಯಂತ್ರದಲ್ಲಿನ ಮಾಹಿತಿ ಮಳಿಗೆಯಲ್ಲಿನ ರಸಗೊಬ್ಬರ ದಾಸ್ತಾನುಗೆ ಸರಿಹೊಂದಬೇಕು. ವ್ಯತ್ಯಾಸ ಬರಬಾರದು ಎಂದರು.
ಯಾವುದೇ ಕಾರಣಕ್ಕೂ ಗೊಬ್ಬರವನ್ನು ಕೃತಕ ಅಭಾವ ಸೃಷ್ಟಿಸಬಾರದು. ನಿಯಮ ಉಲ್ಲಂಘಿಸಿದವರನ್ನು ಕಾನೂನು ಅಡಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ನಿಯಮಬಾಹಿರ ಮಾರಾಟ ಮಾಡಿದ ಏಳು ರಸಗೊಬ್ಬರ ಪರವಾನಿಗೆಯನ್ನು ಅಮಾನತು ಗೊಳಿಸಲಾಗಿದೆ ಎಂದು ತಿಳಿಸಿದರು.
ಈ ವೇಳೆ ಕೃಷಿ ಸಹಾಯಕ ಅಧಿಕಾರಿ ಲಕ್ಷ್ಮೀ ಇನ್ನಿತರರಿದ್ದರು.