ETV Bharat / state

ಆಸ್ಪತ್ರೆಯಲ್ಲಿ ಗೂಂಡಾಗಿರಿ ವರ್ತನೆ ಆರೋಪ: ವಿಮ್ಸ್​ ಮಹಿಳಾ ಕಾರ್ಮಿಕರಿಗೆ ಇಲ್ವಂತೆ ಸುರಕ್ಷತೆ! - ಬಳ್ಳಾರಿಯ ವಿಮ್ಸ್ ಆಸ್ಪತ್ರೆ ಮಹಿಳಾ ಕಿರುಕುಳ ಸುದ್ದಿ

ವಿಮ್ಸ್​ನ ಕಾರ್ಮಿಕರ ಗುತ್ತಿಗೆದಾರ‌ ಮತ್ತು ಸೂಪರ್ ವೈಜರ್​ಗಳು ಮಹಿಳಾ ಗುತ್ತಿಗೆ ಕಾರ್ಮಿಕರ ಮೇಲೆ ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ ಎಂದು ಈಟಿವಿ ಭಾರತದೊಂದಿಗೆ ಗುತ್ತಿಗೆ ಕಾರ್ಮಿಕ ಮಹಿಳೆ ಎನ್.ಲಕ್ಷ್ಮೀ ಆರೋಪಿಸಿದ್ದಾರೆ.

ಕಾರ್ಮಿಕರ ಆಯುಕ್ತ ಶಹಜಾನ್ ಭೇಟಿ
author img

By

Published : Oct 24, 2019, 3:58 PM IST

Updated : Oct 24, 2019, 6:04 PM IST

ಬಳ್ಳಾರಿ: ವಿಮ್ಸ್​ ಕಾರ್ಮಿಕರ ಗುತ್ತಿಗೆದಾರ‌ ಮತ್ತು ಸೂಪರ್ ವೈಜರ್​ಗಳು ಮಹಿಳಾ ಗುತ್ತಿಗೆ ಕಾರ್ಮಿಕರಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಮಹಿಳಾ ಗುತ್ತಿಗೆ ಸಿಬ್ಬಂದಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೇತನದಲ್ಲಿ ತಾರತಮ್ಯ, ರಾತ್ರಿ 12ಕ್ಕೆ ಫೋನ್ ಮಾಡಿ ಕಚೇರಿಗೆ ಬನ್ನಿ ಅನ್ನೋದು, ನ್ಯಾಯ ಕೇಳಿದ್ರೆ ಕೆಲಸದಿಂದ ಹೊರ ಹಾಕ್ತಾರೆ ಎಂದು ಈಟಿವಿ ಭಾರತದೊಂದಿಗೆ ಗುತ್ತಿಗೆ ಕಾರ್ಮಿಕ ಮಹಿಳೆ ಎನ್.ಲಕ್ಷ್ಮೀ ದೂರಿದ್ದಾರೆ.

ಮಹಿಳಾ ಗುತ್ತಿಗೆ ಕಾರ್ಮಿಕರ ಮೇಲೆ ಗುಂಡಾಗಿರಿ ವರ್ತನೆ

ವಿಮ್ಸ್​ನ ಆಡಳಿತ ಭವನದಲ್ಲಿ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಗುತ್ತಿಗೆ ನೌಕರರ ಸಂಘ ಮತ್ತು ವಿಮ್ಸ್​ನ ಮಹಿಳಾ ಗುತ್ತಿಗೆ ಕಾರ್ಮಿಕರ ನೇತೃತ್ವದಲ್ಲಿ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಭೆ ನಡೆಯಿತು. ನಂತರ ಈಟಿವಿ ಭಾರತದೊಂದಿಗೆ ವಿಭಾಗೀಯ ಕಾರ್ಮಿಕ ಆಯುಕ್ತ( ಡಿ.ಎಲ್.ಸಿ ) ಶಹಜಾನ್ ಮಾತನಾಡಿ, ವಿಮ್ಸ್​​​ನಲ್ಲಿ 500ಕ್ಕೂ ಹೆಚ್ಚು ದಿನಗೂಲಿ ಗುತ್ತಿಗೆ ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. 180 ಕಾರ್ಮಿಕ ಸ್ಕ್ಯಾವೆಂಜರ್ ನೇಚರ್ ಆಫ್​​ ವರ್ಕ್ ಮಾಡುವವರಿಗೆ 14 ಸಾವಿರದಷ್ಟು ವೇತನ ಇದೆ. ಇನ್ನುಳಿದವರು ಅಟೆಂಡರ್ ಆಗಿ ಕೆಲಸ ಮಾಡ್ತಾರೆ. ಅವರಿಗೆ 10 ಸಾವಿರ ವೇತನ ಇದೆ. ಸ್ಕ್ಯಾವೆಂಜರ್ ಆಗಿ 180ಕ್ಕಿಂತ ಹೆಚ್ಚಿನ ಕಾರ್ಮಿಕರು ಸಹ ಕೆಲಸ ಮಾಡ್ತಾ ಇದ್ದಾರೆ. ಅದರಂತೆ ವೇತನ ಹೆಚ್ಚಿಸಿ ಎಂದು ಹೇಳಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಸರ್ಕಾರದ ಮಟ್ಟದಲ್ಲಿ ತೀರ್ಮಾನಗಳು ಆಗಬೇಕಾಗಿದೆ ಎಂದರು.

ಗುತ್ತಿಗೆದಾರ ಮತ್ತು ಸೂಪರ್​​ ವೈಜರ್​​ಗಳಿಗೆ ಕಡಿವಾಣ:
ಗುತ್ತಿಗೆ ನೌಕರರೊಂದಿಗೆ ಮಾತನಾಡಿ ಗುತ್ತಿಗೆದಾರರಿಗೆ ಮತ್ತು ಸೂಪರ್ ವೈಜರ್​​​ಗಳಿಗೆ ಕಡಿವಾಣ ಹಾಕುತ್ತೇವೆ ಎಂದು ಕಾರ್ಮಿಕ ಇಲಾಖೆಯ ವಿಭಾಗಿಯ ಆಯುಕ್ತ ಶಹಜಾನ್ ಹೇಳಿದ್ದಾರೆ.

Intro:KN_03_BLY_211019_ VIEMs Labour SPL Story _KA10007

ಬೈಟ್ s

Body:KN_03_BLY_211019_ VIEMs Labour SPL Story _KA10007

Conclusion:
Last Updated : Oct 24, 2019, 6:04 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.