ETV Bharat / state

ಕೈ ಸಾಲ ಪಡೆದು ಮರು ಪಾವತಿಸದೆ ವಂಚನೆ ಆರೋಪ: ಮಹಿಳೆ ವಿರುದ್ಧ ದೂರು - Kudligi Police Station

ಕೊಟ್ಟ ಸಾಲವನ್ನು ಹಿಂದಿರುಗಿಸಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಮತ್ತೊಬ್ಬ ಮಹಿಳೆ ವಿರುದ್ಧ ಪೊಲೀಸ್​ ಠಾಣೆ ಮೆಟ್ಟಿಲೇರಿರುವ ಘಟನೆ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿಯಲ್ಲಿ ನಡೆದಿದೆ.

ds
ಮಹಿಳೆ ವಿರುದ್ಧ ದೂರು
author img

By

Published : Oct 21, 2020, 10:40 AM IST

ಬಳ್ಳಾರಿ: ಕೈ ಸಾಲ ಮರು ಪಾವತಿಸದೆ ವಂಚಿಸಿರುವ ಮಹಿಳೆಯ ವಿರುದ್ಧ ಸಾಲ ಕೊಟ್ಟಿರುವ ಮಹಿಳೆ ದೂರು ನೀಡಿರುವ ಘಟನೆ ಜಿಲ್ಲೆಯ ಕೂಡ್ಲಿಗಿ ಪಟ್ಟಣದಲ್ಲಿ ನಡೆದಿದೆ.

ಪಟ್ಟಣದ ಲಕ್ಷ್ಮೀ ಬಜಾರ್ ಬಟ್ಟೆ ಅಂಗಡಿ ವ್ಯಾಪಾರಿ ಪಿ.ಆರ್.ಲತಾ ಎಂಬುವರು ಶಾಂತಾಬಾಯಿ ಎಂಬುವವರ ಬಳಿ ಕಳೆದ ಎರಡು ವರ್ಷಗಳಿಂದಲೂ ಕೂಡ ಕೈಗಡ ಸಾಲ ಪಡೆಯುತ್ತಾ ಬಂದಿದ್ದಾರೆ. ಆಗಾಗ್ಗೆ ಈ ಕೈಗಡ ಸಾಲವನ್ನ ವಾಪಸ್ ನೀಡಿ ಶಾಂತಾಬಾಯಿಗೆ ನಂಬಿಕೆ ಬರುವಂತೆ ಮಾಡಿದ್ದಾರೆ. ಇದರಿಂದ ಶಾಂತಾಬಾಯಿ ಸೆಪ್ಟೆಂಬರ್ 16ರಿಂದ ಮೇ 1ರೊಳಗೆ ಫೋನ್ ಪೇ ಮೂಲಕ ಅಂದಾಜು 1.50 ಲಕ್ಷ ರೂ. ಸಾಲ ನೀಡಿದ್ದಾರಂತೆ.

ಕಳೆದ ಆರು ತಿಂಗಳ ಹಿಂದಷ್ಟೇ ತನ್ನಿಂದ ಪಡೆದ ಕೈಗಡ ಸಾಲವನ್ನ ಮರು ಪಾವತಿಸುವಂತೆ ಶಾಂತಾಬಾಯಿ ಕೋರಿದ್ರೂ ಸಹ ಲತಾ ಸಾಲ ಮರುಪಾವತಿಸಿಲ್ಲವಂತೆ. ಹೀಗಾಗಿ ಹಣದ ಅನಿವಾರ್ಯತೆ ಇದ್ದು, ತಮಗೆ ಬರಬೇಕಾದ ಹಣವನ್ನು ಕೊಡಿಸುವಂತೆ ಕೂಡ್ಲಿಗಿ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.