ಹೊಸಪೇಟೆ: ನಗರದ ಉಪವಿಭಾಗದ ಮಟ್ಟದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ನೂರು ಹಾಸಿಗೆ, ಆರು ವೆಂಟಿಲೇಟರ್‌ಗಳು ಕಾರ್ಯನಿರ್ವಹಿಸುತ್ತಿವೆ. ಇನ್ನೆರಡು ಕಾರ್ಯನಿರ್ವಹಿಸುತ್ತಿಲ್ಲ ಎಂದು ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ತಿಳಿಸಿದರು.
ನಗರದ ಉಪವಿಭಾಗದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಿಪೇರಿ ಇರುವ ವೆಂಟಿಲೇಟರ್‌ಗಳಲ್ಲಿ ಸಣ್ಣ ಸಮಸ್ಯೆಗಳಿವೆ. ಅವುಗಳನ್ನು ಒಂದೇ ದಿನದಲ್ಲಿ ಸರಿ ಮಾಡಲಾಗುವುದು. ಅಲ್ಲದೇ ಇದರಿಂದ ಕೋವಿಡ್ ರೋಗಿಗಳಿಗೆ ಯಾವುದೇ ರೀತಿಯ ತೊಂದರೆ ಇಲ್ಲ ಎಂದು ಸ್ಪಷ್ಟನೆ ನೀಡಿದರು.
ಓದಿ : ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ಬೆಡ್-ಆಕ್ಸಿಜನ್ ಇಲ್ಲ: ಕೊರೊನಾ ರೋಗಿಗಳ ಗೋಳು ಕೇಳೋರಿಲ್ಲ! ವಿಡಿಯೋ