ETV Bharat / state

ಡ್ರಗ್​ ಮಾಫಿಯಾದಲ್ಲಿ ತೊಡಗಿದ ನಟ, ನಟಿಯರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲು ಎಬಿವಿಪಿ ಆಗ್ರಹ - Bellary News

ಡ್ರಗ್​ ಮಾಫಿಯಾದಲ್ಲಿ ತೊಡಗಿದವರ ವಿರುದ್ದ ಸೂಕ್ತಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ ವತಿಯಿಂದ ಬಳ್ಳಾರಿ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.

ABVP protests against drug mafia
ಡ್ರಗ್​ ಮಾಫಿಯಾದಲ್ಲಿ ತೊಡಗಿದವರ ವಿರುದ್ದ ಸೂಕ್ತಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ
author img

By

Published : Sep 3, 2020, 4:08 PM IST

ಬಳ್ಳಾರಿ: ಡ್ರಗ್​ ಮಾಫಿಯಾದಲ್ಲಿ ತೊಡಗಿದವರ ವಿರುದ್ದ ದೇಶದ್ರೋಹ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್​ ವತಿಯಿಂದ ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಲಾಯಿತು.

ಡ್ರಗ್​ ಮಾಫಿಯಾದಲ್ಲಿ ತೊಡಗಿದವರ ವಿರುದ್ದ ಸೂಕ್ತಕ್ರಮಕ್ಕೆ ಆಗ್ರಹಿಸಿ ಎಬಿವಿಪಿ ಪ್ರತಿಭಟನೆ

ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಎಬಿವಿಪಿ ಕಾರ್ಯಕರ್ತ ನವೀನ್ ಕುಮಾರ್, ಡ್ರಗ್ಸ್ ಮಾಫಿಯಾ ಭೂಗತ ಲೋಕಕ್ಕೆ ಮಾತ್ರ ಸೀಮಿತವಾಗಿತ್ತು. ಆದರೀಗ ಸ್ಯಾಂಡಲ್​ವುಡ್​ನಲ್ಲಿ ಕೂಡ ಡ್ರಗ್​ ಮಾಫಿಯಾ ಇರುವ ಬಗ್ಗೆ ತಿಳಿದುಬಂದಿದೆ. ಸರ್ಕಾರ ಒತ್ತಡಕ್ಕೂ ಮಣಿಯದೇ ಮಾಫಿಯಾದಲ್ಲಿ ತೊಡಗಿದವರ ವಿರುದ್ದ ಸೂಕ್ತಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ನಂತರ ಮಾತನಾಡಿದ ಎಬಿವಿಪಿ ನಗರ ಕಾರ್ಯದರ್ಶಿ ಹರ್ಷನಾಯ್ಕ್, ಎಬಿವಿಪಿ 2014ರಲ್ಲಿ ಡ್ರಗ್​ ಮಾಫಿಯಾ ವಿರುದ್ದ ರಾಷ್ಟ್ರವ್ಯಾಪ್ತಿ ಪ್ರತಿಭಟನೆ ಮಾಡಿದೆ. ಕಾಲೇಜುಗಳಲ್ಲಿ ಬೀದಿ ನಾಟಕ ಮಾಡುವ ಮೂಲಕ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಿದೆ. ಆದರೆ, ಸಮಾಜಕ್ಕೆ ಮಾದರಿಯಾಗಿರಬೇಕಾದ ನಟ, ನಟಿಯರು ಡ್ರಗ್​ ಸೇವನೆ ಮಾಡುತ್ತಿರುವುದು ವಿಪರ್ಯಾಸವೇ ಸರಿ ಎಂದರು.

ಡ್ರಗ್​ ಮಾಫಿಯಾ ತೊಡಗಿದವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಹಾಗೂ ಪೊಲೀಸರಿಗೆ ಸ್ವತಂತ್ರ ತನಿಖೆ ಮಾಡಲು ಅನುವು ಮಾಡಿಕೊಡಬೇಕೆಂದು ಮನವಿ ಮಾಡಿದರು‌.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.