ETV Bharat / state

ಹಂಪಿ ಜೈನ ದೇಗುಲ ಸ್ಮಾರಕದ ಮೇಲೆ ನೃತ್ಯ ಮಾಡಿದ ಯುವಕನ ಬಂಧನ

ಹಂಪಿ ಜೈನ ದೇಗುಲ ಸ್ಮಾರಕ ಮೇಲೆ ನೃತ್ಯ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.

ಸ್ಮಾರಕ ಮೇಲೆ ನೃತ್ಯ ಮಾಡಿದ ಯುವಕನ ಬಂಧನ
ಸ್ಮಾರಕ ಮೇಲೆ ನೃತ್ಯ ಮಾಡಿದ ಯುವಕನ ಬಂಧನ
author img

By

Published : Mar 3, 2023, 10:02 PM IST

ವಿಜಯನಗರ: ವಿಶ್ವಪ್ರಸಿದ್ಧ ಹಂಪಿಯ ಹೇಮಕೂಟ ಪರ್ವತ ಜೈನ ದೇಗುಲದ ಸ್ಮಾರಕದ ಮೇಲೇರಿ ಡಾನ್ಸ್‌ ಮಾಡಿ, ಅದರ ವಿಡಿಯೊ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಅಪ್‌ಲೋಡ್‌ ಮಾಡಿದ್ದ ಯುವಕನನ್ನು ಹಂಪಿ ಪ್ರವಾಸಿ ಠಾಣೆ ಪೊಲೀಸರು ಇಂದು ಬಂಧಿಸಿದ್ದಾರೆ. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಕಾಳೇನಹಳ್ಳಿಯ ದೀಪಕ್‌ಗೌಡ (25) ಬಂಧಿತ ಯುವಕ. ಇತ್ತೀಚೆಗೆ ಹಂಪಿಗೆ ಬಂದಿದ್ದ ದೀಪಕ್‌ಗೌಡ ಹಂಪಿ ಜೈನ್‌ ದೇವಾಲಯದ ಮೇಲೆ ಹಾಗೂ ಅದರ ಪರಿಸರದಲ್ಲಿ ನೃತ್ಯ ಮಾಡಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ.

ಈ ಸಂಬಂಧ ಫೆ.28ರಂದು ಭಾರತೀಯ ಪುರಾತತ್ವ ಸರ್ವೇಕ್ಷಣ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿ ಎಂ.ಸಿ.ಸುನೀಲ್‌ಕುಮಾರ್‌ ಅವರು ಹಂಪಿ ಪ್ರವಾಸಿ ಠಾಣೆಗೆ ದೂರು ಕೊಟ್ಟಿದ್ದರು. ಆ ದೂರು ಆಧರಿಸಿ ದೀಪಕ್‌ ಗೌಡನನ್ನು ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಶ್ರೀಹರಿಬಾಬು ಬಿ.ಎಲ್‌. ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಫೆ.26ರಂದು ವಿಶ್ವ ಪಾರಂಪರಿಕ ತಾಣ ಹಂಪಿಯ ಹೇಮಕೂಟ ಪರ್ವತದ ಜೈನ ದೇವಾಲಯದ ಸ್ಮಾರಕದ ಮೇಲೆ ದೀಪಕ್ ಗೌಡ ಕುಣಿದು ಕುಪ್ಪಳಿಸಿದ ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದ. ಈ ವಿಡಿಯೋ ವೈರಲ್ ಕೂಡಾ ಆಗಿತ್ತು. ಇದಕ್ಕೆ ನೆಟ್ಟಿಗರು ಮತ್ತು ಸ್ಮಾರಕ ಪ್ರಿಯರು ಆಕ್ಷೇಪ ವ್ಯಕ್ತಪಡಿಸಿದ್ದರು. ಅಲ್ಲದೇ ಜಿಲ್ಲಾಧಿಕಾರಿ ಟಿ ವೆಂಕಟೇಶ್ ಕೂಡ ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದರು. ಸರ್ಕಾರಿ ಉದ್ಯೋಗಿ ಸುನೀಲ್​ ಕುಮಾರ್​ ತಮ್ಮ ಮೇಲಾಧಿಕಾರಿಗಳ ಜೊತೆ ಈ ಬಗ್ಗೆ ಚರ್ಚಿಸಿ ಹಂಪಿ ಪೊಲೀಸ್​ ಠಾಣೆಯಲ್ಲಿ ದೀಪಕ್​ ಗೌಡ ವಿರುದ್ಧ ದೂರು ದಾಖಲಿಸಿದ್ದರು.

ದೂರಿನಲ್ಲಿ ಹಂಪಿಗೆ ಬರುವ ಪ್ರವಾಸಿಗರು ವೀಕ್ಷಣೆ ಮಾಡಲು ಮಾತ್ರ ಅವಕಾಶವಿದೆ. ಸ್ಮಾರಕಗಳ ಮೇಲೆ ಏರಲು ಅವಕಾಶ ಇರುವುದಿಲ್ಲ. ಸ್ಮಾರಕದ ಮೇಲೆ ಏರುವುದು ನಿಷೇಧ ವಿದ್ದರು ಯುವಕನೊಬ್ಬ ಅದರ ಮೇಲೇರಿ ಕುಣಿದು ಸ್ಮಾರಕಕ್ಕೆ ಧಕ್ಕೆ ತಂದಿದ್ದಾನೆ. ಇನ್ನು ಹಂಪಿ ಪ್ರವಾಸಕ್ಕೆ ಬರುವಂತಹ ಜನರು ಈ ವಿಡಿಯೋ ನೋಡಿ, ದುರುಪಯೋಗ ಮಾಡಿಕೊಳ್ಳುವ ಸಾಧ್ಯತೆ ಇದೆ. ಸ್ಮಾರಕದ ಮೇಲೆ ಏರಿ ವಿಡಿಯೋ ಚಿತ್ರೀಕರಿಸಿರುವ ದೀಪಕ್​ ಗೌಡ ವಿರುದ್ದ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ದೂರಿನಲ್ಲಿ ದಾಖಲಿಸಿದ್ದರು. ಲಿಖಿತ ದೂರಿನ ಜೊತೆಗೆ ಸುನೀಲ್​ ಅವರು ಯುವಕ ನೃತ್ಯ ಮಾಡಿರುವ ವಿಡಿಯೋ ಇರುವ ಸಿಡಿಯನ್ನೂ ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.

ಸರ್ಕಾರ ಹಂಪಿಯ ಪ್ರಮುಖ ತಾಣಗಳಲ್ಲಿ ಯಾವುದೇ ಕಾರಣಕ್ಕೂ ಮೊಬೈಲ್ ಕ್ಯಾಮೆರಾ ಬಳಸಬಾರದು ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಇಲ್ಲಿಗೆ ಬರುವ ಪ್ರವಾಸಿಗರು ಸ್ಮಾರಕಗಳನ್ನು ಹಾನಿಗೊಳಿಸುವುದು, ವಿರೂಪಗೊಳಿಸಿದರೆ ಎರಡು ವರ್ಷ ಜೈಲು ಶಿಕ್ಷೆ ಇದೆ ಎಂದು ತಿಳಿಸಿದ್ದಾರೆ.
ಅದರಲ್ಲೂ ವಿರೂಪಾಕ್ಷ ದೇವಾಲಯ ಮತ್ತು ಹಂಪಿಯ ಸಂರಕ್ಷಿತ ಸ್ಮಾರಕಗಳ ಮೇಲೆ ಹತ್ತಿ ಹುಚ್ಚಾಟ ಮಾಡುವುದು, ವಿಡಿಯೋ ಮಾಡುವುದು ಎಲ್ಲಾ ಬಂದ್ ಮಾಡಲಾಗಿದೆ. ಹೀಗಿದ್ದರೂ ಈ ರೀಲ್ಸ್ ರಾಜ ಡ್ಯಾನ್ಸ್ ಮಾಡಿ ಹಂಪಿ ಪೊಲೀಸರ ಅತಿಥಿಯಾಗಿದ್ದಾನೆ.

ಇದನ್ನೂ ಓದಿ: ಹಂಪಿ ಜೈನ ಸ್ಮಾರಕದ ಮೇಲೇರಿ ಕುಣಿದ ಮಂಡ್ಯದ ಯುವಕ: ಪ್ರಕರಣ ದಾಖಲಾಗುತ್ತಿದ್ದಂತೆ ಕ್ಷಮೆ ಯಾಚನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.