ವಿಜಯನಗರ: ನಿವೃತ್ತ ಶಿಕ್ಷಕರೊಬ್ಬರು ಹೊಸಪೇಟೆ ತಾಲ್ಲೂಕಿನ ಹಂಪಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಾವೇರಿ ಜಿಲ್ಲೆ ರಾಣೆಬೆನ್ನೂರು ತಾಲ್ಲೂಕಿನ ಸುಣ್ಣಕಲ್ ಬಿದರಿಯ ಗಂಗಪ್ಪ ಕರಿಯಲ್ಲಪ್ಪನವರ್ (82) ಮೃತರು ಎಂದು ತಿಳಿದುಬಂದಿದೆ. ಶಿಕ್ಷಕರ ದಿನಾಚರಣೆ ಮುನ್ನಾ ದಿನವಾದ ಸೆ.4ರ ರಾತ್ರಿ ಹಂಪಿ ಹೇಮಕೂಟದ ಜೈನ್ ದೇಗುಲದಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಹಂಪಿ ವಿರೂಪಾಕ್ಷೇಶ್ವರ ಸನ್ನಿಧಿಯಲ್ಲಿ ಮುಕ್ತಿ ಹೊಂದಬೇಕೆಂಬ ಉದ್ದೇಶದಿಂದ ಹೀಗೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: ಪುಟಾಣಿ ಮಗುವಿನೊಂದಿಗೆ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡ ದಂಪತಿ